ಅಂತರರಾಜ್ಯ ಡಿಜೈಲ್ ಆರೋಪಿ ಬಂಧನ

ಲೋಕದರ್ಶನ ವರದಿ

ಬೈಲಹೊಂಗಲ:  ಅಂತರರಾಜ್ಯ ಡಿಜೈಲ್ ಕಳ್ಳನನ್ನು ಬಂಧಿಸಿ 5,79,000 ರೂ.ನಗದು ಹಾಗೂ 4,50,000 ರೂ.ಮೌಲ್ಯದ ಲಾರಿ ಮತ್ತು ಡಿಜೈಲ್ ಕಳ್ಳತನಕ್ಕೆ ಬಳಸಿದ ಸಾಮಗ್ರಿಗಳನ್ನು ನೇಸರಗಿ ಪೊಲೀಸರು ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ನೇಸರಗಿ, ಯರಗಟ್ಟಿ ಹೆದ್ದಾರಿ ರಸ್ತೆಯ ಸೋಮನಟ್ಟಿ ಗ್ರಾಮದ ಹತ್ತಿರ ಶುಕ್ರವಾರ ನಡೆದಿದೆ.

    ಮಹಾರಾಷ್ಟ್ರ ಮೂಲದ ಉಸ್ಮಾನಾಬಾದ ಜಿಲ್ಲೆಯ ವಾಸಿ ತಾಲ್ಲೂಕಿನ ಅಶೋಕ ಗೋಪಿನಾಥ ಕಾಳೆ (36) ಬಂಧಿತ ಆರೋಪಿ. ಈತ ತನ್ನ ಸಹಚರರೊಂದಿಗೆ ಸೇರಿ ಬೆಳಗಾವಿ ಜಿಲ್ಲೆಯ ನೇಸರಗಿ, ಕಟಕೋಳ, ರಾಮದುರ್ಗ, ನಂದಗಡ ಪೊಲೀಸ್ ಠಾಣೆೆಗಳ ಹದ್ದಿಗಳಲ್ಲಿ ಸುಮಾರು 12,008 ಲೀಟರ್ ಡಿಜೈಲ್ ಕಳ್ಳತನ ಮಾಡಿದ್ದಾನೆ.

      ವಿಶೇಷ ತನಿಖಾ ತಂಡದ ಅಧಿಕಾರಿ ವ್ಹಿ.ಟಿ.ದೊಡಮನಿ, ಸಿಪಿಐ ಎಂ.ಎಸ್.ಕುಸುಗಲ್ಲ, ನೇಸರಗಿ ಪಿಎಸ್ಐ ಆರ್.ಎಸ್.ಜಾನರ, ಎಎಸ್ಐ ಎ.ಜಿ.ಸಾಲಿ, ಎಎಸ್ಐ ಆರ್.ಆರ್.ಕಂಗನೊಳ್ಳಿ, ಎಸ್.ಎಂ.ಮಂಗನ್ನವರ, ಸಿಬ್ಬಂದಿಗಳಾದ ಎನ್.ವಿ.ಪರಡ್ಡಿ, ಯು.ಎಚ್.ಪೂಜೇರ, ಎಸ್.ಎಚ್.ಹಾದಿಮನಿ, ಕೆ.ಡಿ.ಕುಳ್ಳೂರ, ಎಂ.ಎಸ್.ನಂದಿ ಈತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜೈಲ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನ ಆರೋಪಿಗಳ ಬಂಧನಕ್ಕೆ ಜಾಲ ಬಿಸಲಾಗಿದೆ.