ಲೋಕದರ್ಶನ ವರದಿ
ಕೊಪ್ಪಳ 06: ಈ ದೇಶದ ಪ್ರತಿಯೊಬ್ಬ ಪ್ರಜೆ ಕೋಮು ಸೌಹಾದತರ್ೆಯಿಂದ ಜೀವನ ಸಾಗಿಸಬೇಕು, ರಾಷ್ಟ್ರೀಯ ಭಾವೈಕ್ಯತೆ ಬೆಳೆಸಿಕೊಂಡು ಪರಸ್ಪರ ಸಹೋದರತ್ವದಿಂದ ಜೀವನ ಸಾಗಿಸಿದರೆ ಆ ವ್ಯಕ್ತಿಯ ಬದುಕು ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ ಅನ್ಸಾರಿ ಹೇಳಿದರು.
ಅವರು ಜಿಲ್ಲೆಯ ಗಂಗಾವತಿ ನಗರದ ಶರಣರಾದ ಸಯ್ಯದ್ ಲತೀಫ್ ಪೀರ್ ಷಾ ಖಾದ್ರಿ ಖಲಂದರಿ ಕಾನರ್ೂಲ್ ಬಾಬಾ ದಗರ್ಾದ ಆವರಣದಲ್ಲಿ ದಿ. 05ರ ಮಂಗಳವಾರ ರಾತ್ರಿ ವೇಳೆಯಲ್ಲಿ ಏರ್ಪಡಿಸಿದ ಕಾಶ್ಮೀರದ ಪುಲ್ವಾಮಾದಲ್ಲಿ ವೀರಮರಣಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಣೆ ಹಾಗೂ ವೀರ ಯೋಧ ಅಭಿನಂದಗೆ ಅಭಿನಂಧನೆ ಸಲ್ಲಿಸುವದರ ಜೊತೆಗೆ ಇದರ ಪ್ರಯುಕ್ತ ಕನರ್ಾಟಕ ಉದರ್ು ಅಕ್ಯಾಡಮಿ ವತಿಯಿಂದ ಏರ್ಪಡಿಸಿದ ಖವಾಲಿ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಭಾರತಿಯ ಮುಸ್ಲಿಂಮರಿಗೆ ದೇಶಾಭಿಮಾನ ದೇಶ ಭಕ್ತಿಯ ಬಗ್ಗೆ ಇತರರಿಗೆ ತೋರಸುವ ಅಗತ್ಯವಿಲ್ಲ, ಇನ್ನೊಬ್ಬರಿಂದ ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ, ನಾವು ಮೊದಲು ಭಾರತಿಯರು ನಂತರ ನಾವು ಮುಸ್ಲಿಂಮರು, ನಮ್ಮಲ್ಲಿ ಕೂಡ ದೇಶ ಭಕ್ತಿ ದೇಶಾಭಿಮಾನ ಇದೇ, ದೇಶದ ಹಿತಕ್ಕಾಗಿ ದೇಶದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಮ್ಮ ಆದ್ಯ ಕರ್ತವ್ಯವಾಗಿದೆ, ಎಂದ ಅವರು ಸಮಾಜದ ಯುವಕರು ಯಾವುದೇ ಕರಣಕ್ಕು, ಅಹಿತಿಕರ ಘಟನೆಗಳ್ಳಲ್ಲಿ ತೊಡಗಿಸಿಕೊಳ್ಳ ಬಾರದು, ನ್ಯಾಯದ ಚೌಕಟ್ಟಿನಲ್ಲಿ ಇದ್ದುಕೊಂಡು ಹೊರಾಟ ಮಾಡಬೇಕು ನ್ಯಾಯ ಸಮ್ಮತ ಬೇಡಿಕೆಗಳ ಈಡೆರಿಕೆಗಾಗಿ ಶ್ರಮಿಸ ಬೇಕು ಪರಸ್ಪರ ಪ್ರೀತಿ ವಿಶ್ವಾಸ, ಸೌಹಾರ್ದತೆ ಬೇಳೆಸಿಕೊಂಡು ಜೀವನ ಸಾಗಿಸಿ ತಮ್ಮ ಬದುಕು ಸಾರ್ಥಕ ಮಾಡಿ ಕೊಳ್ಳಬೇಕು, ಸೂಫಿ ಸಂತರ ಸಂದೇಶಗಳನ್ನು ಪಾಲಿಸಬೇಕು, ನಮ್ಮ ಭಾರತ ದೇಶದ ಮಹಾನ್ ನಾಯಕರ ಆದರ್ಶಗಳ್ಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಕಾನರ್ೂನ್ ಬಾಬಾ ದಗರ್ಾದ ಸಜ್ಜಾದಾ ನಶೀನ್ (ಪೀಠಾಧಿಪತಿ) ಸಯ್ಯದ್ ಷಾ ಯುಸುಫ್ ಪೀರ್ ಖಾದ್ರಿ ಹಾಗೂ ಕೌತಾಳಂ ದಗರ್ಾದ ಸಜ್ಜಾದಾ ನಶೀನ್ ಧರ್ಮಕರ್ತ ಜಗದ್ಗುರು ಖಾದರ್ ಲಿಂಗ ಬಾಬಾ ಸಾಹೆಬ್ ಪೀರ್ರವರು ವಹಿಸಿ ಆಶಿರ್ವಚನ ನೀಡಿದರು. ಸಮಾಜದ ಹಿರಿಯ ಮುಖಂಡ ಪಾಡಗುತ್ತಿ ಅಖ್ತರ್ ಸಾಬ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕನರ್ಾಟಕ ಉದರ್ು ಅಕ್ಯಾಡಮಿ ಸದಸ್ಯ ಶಾಹಿದ್ ಖಾಜಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಹುಸೇನ ಸಾಬ್, ವೇಂಕಟೆಶ ಮತ್ತು ಫಕೀರಪ್ಪ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು, ವೇಧಿಕೆ ಮೇಲೆ ಸ್ವತಂತ್ರ ಹೊರಾಟಗಾರ ಆಯೊಧ್ಯರಾಮಚಾರ, ಹಿರಿಯ ಪತ್ರಕರ್ತ ಎಂ. ಸಾಧಿಕ್ ಅಲಿ, ಶಾಮಿದ್ ಮನಿಯಾರ ಸಯ್ಯದ್ ಅಲಿ, ಹುಸೇನ್ ಸಾಬ್, ಶೇಖ್ ನಬಿ, ಅಬ್ದುಲ್ ಜಬ್ಬಾರ್ ಬಿಜ್ಕತ್ತಿ ಮತ್ತಿತರರು ಪಾಲ್ಗೊಂಡಿದ್ದರು, ನಂತರ ಮೈಸೂರಿನ ಖವಾಲಿ ಗಾಯಕರಾದ ಜಾಹಿದುಲ್ಲ ಖಾನ್ ಮಸ್ತಾನ ಮತ್ತು ತಹಶೀನ್ ತಾಜ್ ಸಂಗಡಿಗರಿಂದ ಖವಾಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಜನಮನ ರಂಜಿಸಿತು.