ಜೀವನ ರೂಪಿಸಿಕೊಳ್ಳುವ ಶಿಕ್ಷಣ ನೀಡಿ: ಅಮರದೀಪ

ಲೋಕದರ್ಶನ ವರದಿ

ಕೊಪ್ಪಳ 26: ಮಕ್ಕಳಿಗೆ ನಾವು ನೀಡುವ ಶಿಕ್ಷಣವು ಜೀವನ ರೂಪಿಸಿಕೊಳ್ಳುವಂತಿರಬೇಕು ಎಂದು ಗ್ರಾಹಕ ವೇದಿಕೆಯ ಸಹಾಯಕ ಆಡಳಿತಾಧಿಕಾರಿ ಪಿ.ಎಸ್.ಅಮರದೀಪ ಹೇಳಿದರು.

ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ 8ನೇ ತರಗತಿ ವಿದ್ಯಾಥರ್ಿಗಳ ಬಿಳ್ಕೋಡಿಗೆ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ,ಮಕ್ಕಳಿಗೆ ನೀಡುವ ಶಿಕ್ಷಣವು ಕೇವಲ ಉದ್ಯೋಗ ಪಡೆಯಬೇಕು ಎಂಬ ಉದ್ದೇಶದಿಂದ ನೀಡಬಾರದು.ಮಕ್ಕಳು ಭವಿಷ್ಯತ್ತಿನಲ್ಲಿ ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಕುರಿತು ಶಿಕ್ಷಣ ನೀಡಬೇಕು.ಪ್ರಸ್ತುತ ಮಕ್ಕಳಿಗೆ ನೀಡುವ ಶಿಕ್ಷಣಕ್ಕೂ ಮತ್ತು ಸಮಾಜದಲ್ಲಿ ಇರುವ ಸ್ಥಿತಿಗತಿಗಳ ಬಗ್ಗೆ ಇರದೇ ವಿಭಿನ್ನವಾಗಿದೆ.ಮಕ್ಕಳಿಗೆ ನೀಡುವ ಶಿಕ್ಷಣಕ್ಕೂ ಹಾಗೂ ಪಠ್ಯಕ್ರಮಕ್ಕೆ ಹೊಂದಾಣಿಕೆಯಾಗುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕು.ಕನ್ನಡವನ್ನು ಮಾತೃ ಭಾಷೆಯನ್ನಾಗಿ ಗೌರವಿಸುವುದರ ಜೊತೆಗೆ ಇತರೇ ಬಾಷೆಗಳನ್ನು ಕೂಡಾ ಅಧ್ಯಯನ ಮಾಡುವ ಪ್ರವೃತ್ತಿಯನ್ನು ಬೆಳಿಸಿಕೊಳ್ಳಬೇಕು.ಆಂಗ್ಲ ಭಾಷೆಯನ್ನು ಕಲಿಯುವುದು ಸುಲಭ ಆದರೆ ಕನ್ನಡ ಭಾಷೆಯನ್ನು ಕಲಿಯುವುದು ಬಹಳ ಕಷ್ಟಕರ.ಯಾವುದೇ ವೃತ್ತಿಯನ್ನು ಗೌರವಿಸಬೇಕು.ಅಂದಾಗ ಮಾತ್ರ ಆ ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಸ್ತಿ ಶಾಲೆಯ ಸಂಸ್ಥಾಪಕರಾದ ಹುಲುಗಪ್ಪ ಕಟ್ಟಿಮನಿ ಮಾತನಾಡಿ,ಮಕ್ಕಳ ಮೇಲೆ ಪಾಲಕರು ನಂಬಿಕೆಯನ್ನು ಹಾಗೂ ಆಸೆಗಳನ್ನು ಇಟ್ಟುಕೊಂಡು ಶಾಲೆಗೆ ಕಳುಹಿಸುತ್ತಾರೆ.ಪಾಲಕರ ನಂಬಿಕೆಗೆ ದಕ್ಕೆ ಬರುವ ರೀತಿಯಲ್ಲಿ ಮಕ್ಕಳು ನಡೆದುಕೊಳ್ಳದೇ ಶಾಲೆಯಲ್ಲಿ ನೀಡುವ ಶಿಕ್ಷಣವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಂಡು ಸಮಾಜಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಬೇಕು.ಶಾಲೆಯಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಮಕ್ಕಳು ಪ್ರತಿದಿನ ಅಭ್ಯಾಸ ಮಾಡಬೇಕು.ಒಂದು ಸಾಧನೆಯನ್ನು ಮಾಡಬೇಕಾದರೆ ಅದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ.ಅಂತಹ ಪರಿಶ್ರಮವನ್ನು ಯಾರು ಮಾಡುವರೋ ಅವರು ಸಾಧನೆಯ ಶಿಖರವನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಜೀವನದಲ್ಲಿ ಸಮಯವನ್ನು ಯಾರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಅವರು ಉತ್ತಮ  ಯಶಸ್ಸು ಕಾಣಲು ಸಾಧ್ಯವಾಗುತ್ತದೆ.ಮುಂದಿನ ವಿದ್ಯಾಭ್ಯಾಸ ಸಲುವಾಗಿ ಬೇರೆ ಶಾಲೆಗೆ ದಾಖಲಾತಿಯನ್ನು ಹೊಂದಬೇಕಾಗುತ್ತದೆ.ಆದರೆ ಹಿಂದಿನ ಶಾಲೆಯಲ್ಲಿ ಕಲಿತ ಉತ್ತಮ ಅನುಭವಗಳೊಂದಿಗೆ ದಾಖಲಾದ ಶಾಲೆಯಲ್ಲಿ ನೀಡುವ ಶಿಕ್ಷಣವನ್ನು ಉತ್ತಮ ರೀತಿಯಲ್ಲಿ ಪಡೆಯಬೇಕು. ಮಕ್ಕಳು ವಿದ್ಯಾಥರ್ಿ ಜೀವನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಕಲಿತ ಶಾಲೆಯ ಹೆಸರನ್ನು ತರುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾಥರ್ಿಗಳು ಶ್ರಮವಹಿಸಬೇಕು ಎಂದು ಹೇಳಿದರು. 

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಶಾಲೆಯ ಶಿಕ್ಷಕರಾದ ಆಬೀದಹುಸೇನ ಅತ್ತಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದರ್ಾರಷಾವಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ,ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ. ಬಿ.ಎಡ್. ಪ್ರಶಿಕ್ಷಣಾಥರ್ಿಗಳ ಮೇಲ್ವಿಚಾರಕರಾದ ಶೈಲಜಾ ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕರಾದ ಗುರುರಾಜ ಕಟ್ಟಿ ನಿರೂಪಿಸಿದರು. ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ, ಶ್ರೀನಿವಾಸರಾವ ಕುಲಕಣರ್ಿ ವಂದಿಸಿದರು.