ಗದಗ ಜಿಲ್ಲೆ: 1,94,671 ಹೆಕ್ಟೇರ್ ಹಿಂಗಾರು ಬೆಳೆ ಹಾನಿ

ಗದಗ 03: ರಾಜ್ಯ ಸರ್ಕಾರ  ಇಡೀ ಗದಗ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿದ್ದು ಹಿಂಗಾರಿನ ಜಿಲ್ಲೆಯ  ಬಿತ್ತನೆ ಗುರಿ 2,63,900 ಹೆಕ್ಟೇರ್ ಪ್ರದೇಶ ಪೈಕಿ 2,29,842 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು. ಮಳೆ ಕೊರತೆಯಿಂದ ಕೃಷಿ ಬೆಳಗಳಲ್ಲಿ 1,94,671 ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು  ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ  ಅವರು ಕೇಂದ್ರದ ಬರ ಅಧ್ಯನ ತಂಡಕ್ಕೆ ಗದಗ ಜಿಲ್ಲೆ ಹಿಂಗಾರು ಹಂಗಾಮಿನ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಎದುರಿಸುತ್ತಿರುವ ಬರ ಪರಿಸ್ಥಿತಿ ಮಾಹಿತಿ ನೀಡಿ ಮಾತನಾಡಿದರು.

ಹಿಂಗಾರು ಹಂಗಾಮಿನಲ್ಲಿ 12000 ಗುರಿ ಪ್ಯಕಿ 13184 ಹೆಕ್ಟೇರ ಕಡಲೆ ಬಿತ್ತನೆಯಾಗಿದ್ದು 11,471 ಹೆ. ಬೆಳೆ ಹಾನಿಯಾಗಿದೆ. 67000 ಗುರಿ ಪ್ಯಕಿ 62.720 ಹೆಕ್ಟೇರ ಹಿಂಗಾರಿ ಜೋಳ ಬಿತ್ತನೆಯಾಗಿದ್ದು 57,523 ಹೆ. ಬೆಳೆ ಹಾನಿಯಾಗಿದೆ. 15000 ಗುರಿ ಪ್ಯಕಿ 8487 ಹೆಕ್ಟೇರ ಗೋದಿ ಬಿತ್ತನೆಯಾಗಿದ್ದು 5949 ಹೆ. ಬೆಳೆ ಹಾನಿಯಾಗಿದೆ. 26000 ಗುರಿ ಪ್ಯಕಿ 10,745 ಹೆಕ್ಟೇರ ಸೂರ್ಯಕಾಂತಿ ಬಿತ್ತನೆಯಾಗಿದ್ದು 8905 ಹೆ. ಬೆಳೆ ಹಾನಿಯಾಗಿದೆ. 27500 ಗುರಿ ಪ್ಯಕಿ 5124 ಹೆಕ್ಟೇರ ಹತ್ತಿ ಬಿತ್ತನೆಯಾಗಿದ್ದು 4473 ಹೆ. ಬೆಳೆ ಹಾನಿಯಾಗಿದೆ. 8400 ಗುರಿ ಪ್ಯಕಿ 4621 ಹೆಕ್ಟೇರ ಇತರೆ ಬೆಳೆ ಬಿತ್ತನೆಯಾಗಿದ್ದು 3091 ಹೆ. ಬೆಳೆ ಹಾನಿಯಾಗಿದೆ.     

     ಸೆಪ್ಟೆಂಬರ್ದಿಂದ  ಡಿಸೆಂಬರ್ 2018 ರವರೆಗೆ  ಜಿಲ್ಲೆಯಲ್ಲಿ ವಾಡಿಕೆ ಮಳೆ 162 ಮಿ.ಮೀ. ಇದ್ದು ಕೇವಲ 46 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ. ಗದಗ ತಾಲೂಕಿನಲ್ಲಿ 169 ಪೈಕಿ 30 ಮೀ ಮೀ,  ಮುಂಡರಗಿ 153ರ ಪೈಕಿ 53 ಮಿ.ಮೀ, ನರಗುಂದದಲ್ಲಿ 160 ಪೈಕಿ 66 ಮಿ.ಮೀ, ರೋಣ150 ಪೈಕಿ 48 ಮಿ.ಮೀ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 177 ಪೈಕಿ 50 ಮಿ.ಮೀ ಮಾತ್ರ ಮಳೆಯಾಗಿದೆ. ಹಿಂಗಾರು ಮಳೆಗಾಲದಲ್ಲಿ ಜಿಲ್ಲೆಯ ಗದಗ, ನರಗುಂದ ರೋಣ ತಾಲೂಕುಗಲಲ್ಲಿ ಸತತ 4ವಾರಗಳ ಕಾಲ ಮತ್ತು ಮುಂಡರಗಿ ಶಿರಹಟ್ಟಿಯಲ್ಲಿ ಸತತ 6 ವಾರಗಳ ಕಾಲ ಮಳೆಯಾಗಿರುವುದಿಲ್ಲ. ಇದರಿಂದಾಗಿ ಜಿಲ್ಲೆಯ ಕೃಷಿ ಭೂಮಿ ತೇವಾಂಶವ ಕೊರತೆ ಅತೀ ತೀವ್ರವಾಗಿತ್ತು. 

     ಎನ್.ಡಿ.ಆರ್.ಎಫ್. ಅಡಿ ಗದಗ ಜಿಲ್ಲೆಯ ಹಿಂಗಾರು ಬೆಳೆಹಾನಿಗಾಗಿ ಒಟ್ಟು 132.23 ಕೋಟಿ ರೂಪಾಯಿಗಳ ಇನಪುಟ್ ಸಬ್ಸಿಡಿಗಾಗಿ ಕ್ಲೇಮು ಸಲ್ಲಿಸಲಾಗಿದೆ.

               ಬೇಸಿಗೆ ದಿನಗಳಲ್ಲಿ  ಜಿಲ್ಲೆಯಲ್ಲಿ ಗದಗ ತಾಲೂಕಿನ 6, ಮುಂಡರಗಿಯ 4, ನರಗುಂದದ 2 , ರೋಣದ 9 ಹಾಗೂ  ಶಿರಹಟ್ಟಿಯ 10 ಗ್ರಾಮಗಳನ್ನು ಒಟ್ಟಾರೆ  31 ಗ್ರಾಮಗಳನ್ನು ಸಮಸ್ಯಾತ್ಮಕ  ಗ್ರಾಮಗಳೆಂದು   ಗುರುತಿಸಲಾಗಿದೆ.   ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 1629 ಕೊಳವೆ ಬಾವಿಗಳು ಕಾರ್ಯಾಚರಣೆಯಲ್ಲಿರುತ್ತವೆ.       ಮಳೆ ಕೊರತೆಯಿಂದಾಗಿ ಕೊಳವೆಬಾವಿಗಳಲ್ಲಿ, ಕುಡಿಯುವ ನೀರಿನ ಕೆರೆಗಳಲ್ಲಿ ಅಂತರ್ಜಲ ಬತ್ತಿಹೋಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾಗಿದೆ.    ಈ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.   ಜಿಲ್ಲೆಯಲ್ಲಿ ಜಾನುವಾರುಗಳಿಗೆ ಇನ್ನೂ ಹತ್ತು ವಾರದವರೆಗೆ ಸಾಕಾಗುವಷ್ಟು 40  ಮೆಟ್ರಿಕ್ ಟನ್ ಮೇವು ಲಭ್ಯತೆ ಇದ್ದು, 10,439 ಮೇವಿನ್ ಕಿಟ್ಗಳನ್ನು ರೈತರಿಗೆ ವಿತರಿಸಲಾಗಿದೆ. ಮುಂಬರುವ ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಕೆ, ಲಸಿಕೆ ರಸಾಯನಗಳು ಮುಂತಾದವು ಗಳಿಗೆ 22 ಮೇವುಬ್ಯಾಂಕ ಹಾಗೂ 9 ಗೋಶಾಲೆ ಸ್ಥಾಪಿಸಲು ಕ್ರಮ ಜರುಗಿಸಲಾಗುತ್ತಿದೆ.  

        ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ವಾಷರ್ಿಕ ಗುರಿ  25.88 ಲಕ್ಷ ಮಾನವ ದಿನಗಳ ಗುರಿ ಇದ್ದು ಈ ವರೆಗೆ 23.19 ಲಕ್ಷ ಮಾನವ ದಿನಗಳನ್ನು  ಸೃಜಿಸಲಾಗಿದ್ದು 87.44  ಕೋಟಿ ರೂ. ವೆಚ್ಚಮಾಡಲಾಗಿದೆ ಎಂದು  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು. 

      ಕೇಂದ್ರ   ಬರ ಅಧ್ಯಯನ ತಂಡದ ಕೇಂದ್ರ ಸಕರ್ಾರದ  ಜಲ ಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ  ಆಯುಕ್ತ  ಎಸ್.ಕೆ. ಕಾಂಬೋಜ ಕೇಂದ್ರ ಸಕರ್ಾರದ ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ. ತರುಣ ಕುಮಾರ ಸಿಂಗ್ , ಭಾರತೀಯ ಆಹಾರ ನಿಗಮದ  ಡೆಪ್ಯುಟಿ ಜನರಲ್ ಮ್ಯಾನೇಜರ್  ಸತ್ಯ ಕುಮಾರ್   ಜಿ.ಪಂ. ಸಿ.ಇ.ಓ. ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿಎಸ್. ಮಂಜುನಾಥ, ಜಂಟಿ ಕೃಷಿ ನಿದರ್ೇಶಕ ಬಾಲರೆಡ್ಡಿ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಕಂಬಾಳಿಮಠ, ರೋಣ ತಹಶೀಲ್ದಾರ ಶರಣಮ್ಮ ಕಾರಿ, ಗಜೇಂದ್ರಗಡ ತಹಶೀಲ್ದಾರ  ಹಿರೇಮಠ, ಕಂದಾಯ, ಕೃಷಿ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.