ಗದಗ: ಬಡವರಿಗೆ ಊಟ ನೀಡುವುದು ಪುಣ್ಯದ ಕೆಲಸ: ಸಿಇಒ ಚವ್ಹಾಣ

ಲೋಕದರ್ಶನ ವರದಿ

ಗದಗ 27:  ಬರಿ 5ರೂ.ಗಳಿಗೆ ಹೊಟ್ಟೆ ತುಂಬಾ ಊಟ ನೀಡುವ ಅನ್ನಪೂಣರ್ೆಶ್ವರಿ ಪ್ರಸಾದ ನಿಲಯದ ಸಮಾಜಮುಖಿ ಕಾರ್ಯವು  ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಜಿಪಂ ಸಿಇಒ ಮಂಜುನಾಥ ಚವ್ಹಾಣ ಅವರು ಹೇಳಿದರು. 

ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿ ಆವರಣದಲ್ಲಿ ರಾಮಕೃಷ್ಣ ಪ್ರತಿಷ್ಠಾನದ ಅನ್ನಪೂಣರ್ೆಶ್ವರಿ ಪ್ರಸಾದ ನಿಯಲದಲ್ಲಿ  ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿ, ಬೆಲೆ ಏರಿಕೆ ದಿನದಲ್ಲಿ ಬಡವರಿಗೆ, ಹೆಣ್ಣುಮಕ್ಕಳಿಗೆ ಕಡಿಮೆ ದರದಲ್ಲಿ ಊಟ ನೀಡುವುದು ಪುಣ್ಯದ ಕೆಲಸವಾಗಿದೆ. ಇಂತಹ ಕಾರ್ಯಗಳಿಗೆ ದಾನಿಗಳು ಆದಾರಸ್ತಂಭವಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೊಶಿ ಅವರು ಮಾತನಾಡಿ, ಮೊದಲ ಬಾರಿಗೆ ನಾನು ಇಲ್ಲಿಗೆ ಆಗಿಸಿದ್ದು ಇಲ್ಲಿನ ಸೇವಾಮನೋಭಾವನೆ ನನ್ನನ್ನು ಪುಳಕೀತನ್ನಾಗಿ ಮಾಡಿದೆ. ದಿನವು ಸಾವಿರಾರು ಜನರು ಊಟ ಮಾಡಿ ಹೋಗುವ ಈ ಆವರಣವನ್ನು ಮಳೆಯಿಂದ ರಕ್ಷಿಸಲು ಮೇಲ್ಚಾವಣೆಯನ್ನು ನಿಮರ್ಿಸಲು ನಾವೇಲ್ಲರೂ ಸಹಾಯ ಸಹಕಾರ ಮಾಡಬೇಕು, ಈ ನಿಸ್ವಾರ್ಥ ಸೇವೆಯು ನಿರಂತರವಾಗಿರಲಿ ಎಂದು ಹೇಳಿದರು. 

ಎಕ್ಸಿಸ್ ಬ್ಯಾಂಕ್ನ ಸಾಆ ವ್ಯವಸ್ಥಾಪಕ ರಾಜೇಶ ಆರ್. ಅವರು ಮಾತನಾಡಿ, ನಾವು ಮಾಡುವ ಅಳಿಲು ಸೇವೆಯು ಇಷ್ಟೊಂದು ಜನರಿಗೆ ತಲುಪಿರುವುದು ನಮ್ಮಲ್ಲಿ ಸಾರ್ಥಕ ಭಾವನೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಈ ಸೇವೆಯು ಹೆಚ್ಚು ಜನರಿಗೆ ತಲುಪಲಿ ಎಂದು ಹೇಳಿದರು.   

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ.ಶರೀಫನವರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ, ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ ಶಂಕರ ಕುದರಿಮೋತಿ, ಪ್ರತಿಷ್ಠಾನದ  ಗೌರವಾಧ್ಯಕ್ಷ ವಿಜಯಮಹಾಂತೇಶ ಭಗವತಿ, ಪ್ರಸಾದ ನಿಲಯದ ಅಧ್ಯಕ್ಷ ಎಸ್.ಎಸ್.ಕಳಸಾಪೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ಈ ಕಾರ್ಯಕ್ರಮದಲ್ಲಿ  ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಎಸ್.ವಿ. ಶಿವಪ್ಪಯ್ಯನಮಠ, ವೆಂಕಟೇಶ ಇಮರಾಪೂರ, ಶಂಕರ ಗುರಿಕಾರ, ಮಂಜುನಾಥ ಶಿರಸಂಗಿ, ಆನಂದಯ್ಯ ವಿರಕ್ತಮಠ, ಶಾಂತಕುಮಾರ ಹಂಪಿ, ರುದ್ರಗೌಡ ಪಾಟೀಲ, ಮಹಾಲಿಂಗೇಶ ಹಿರೇಮಠ ಹಾಗೂ ಎಕ್ಸಿಸ್ ಬ್ಯಾಂಕ್ನ ವ್ಯವಸ್ಥಾಪಕ ರಾಜೇಶ ಆರ್ ಅವರನ್ನು ಸನ್ಮಾನಿಸಲಾಯಿತು.  ಪ್ರಸಾದ ನಿಲಯದ ಕಾಯರ್ಾಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ನಿಲಯದ 1282 ನೇ ದಿನದ ಸೇವೆಯನ್ನು ಎಕ್ಸಿಸ್ ಬ್ಯಾಂಕ್ ಸಿಬ್ಬಂದಿಗಳು ವಹಿಸಿಕೊಂಡಿದ್ದರು.