ಭೀಮಾ ಕೋರೆಗಾಂವ್ ಶೌರ್ಯ ದಿನ ಆಚರಣೆ
ಸಂಬರಗಿ 01: ಅಥಣಿಯ ಅಂಬೇಡ್ಕರ್ ಚೌಕದಲ್ಲಿ ಭೀಮಾ ಕೋರೆಗಾಂವ್ 207ನೇ ಶೌರ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ದಲಿತ ಕ್ರಾಂತಿ ಸೇನೆಯ ತಾಲೂಕಾ ಅಧ್ಯಕ್ಷ ಗೌತಮ್ ಪರಾಂಜಪೆ ಹಾಗೂ ಹಿರಿಯ ಪತ್ರಕರ್ತ ವಿಜಯ್ ಅಥಳಿ ಪೂಜೆ ಸಲ್ಲಿಸಿದರು.
ದಲಿತ ಕ್ರಾಂತಿ ಸೇನೆಯ ಅಥಣಿ ತಾಲೂಕಾ ಅಧ್ಯಕ್ಷ ಗೌತಮ್ ಪರಾಂಜಪೆ ಮಾತನಾಡಿ, ನಾವೆಲ್ಲರೂ ಒಗ್ಗೂಡಿ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಉತ್ಸಾಹವನ್ನು ತೋರಿಸಬೇಕು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ತತ್ವವನ್ನು ಪಾಲಿಸಿ ಅನ್ಯಾಯದ ವಿರುದ್ಧ ಹೋರಾಡಬೇಕು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಅನ್ಯಾಯದ ವಿರುದ್ಧ ಹೋರಾಡಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಹಿರಿಯ ಪತ್ರಕರ್ತರಾದ ಸುಭಾಷ ಕಾಂಬಳೆ, ಮೋಹನ ಶಿಂಗೆ ನಿಶಾಂತ ಮಡದಿ, ವಿನಯ್ ಕಾಂಬಳೆ ಸುರೇಶ, ಚಲವಾದಿ, ಮಂಜುನಾಥ ಕಾಂಬಳೆ, ಅಂಕುಶ ಜನವಾಡ, ಸಚಿನ್ ಯಳಮಲಿ, ಸುಧಾಕರ ಬೆಳಂಕಿ, ಮಂಜುನಾಥ ನೂಲಿ, ಆರೀಫ್ ನಾಲಬಂದ್, ಅಂಜುಮನ್ ದ್ರಾಕ್ಷಾ ಮಹೆಬೂಬ್, ಮಖಂಡ ಗಣೇಶ್ ರಾಜನೀಲನ್‌ಗಿ ಉಪಸ್ಥಿತರಿದ್ದರು.