ಎಸ್ ವಿಕೆ ಕಾಲೇಜಿಗಳ ವಿದ್ಯಾಥರ್ಿಗಳಿಗೆ ರಾಷ್ಟ್ರೀಯ ಮ್ಯಾನೇಜ್ ಮೆಂಟ್ನಲ್ಲಿ ಪ್ರಥಮ ಬಹುಮಾನ

ಲೋಕದರ್ಶನ ವರದಿ

ಕೊಪ್ಪಳ 03: ಬಳ್ಳಾರಿಯ ವಿ.ವಿ ಸಂಘದ ಅಲ್ಲಂ ಕರಿಬಸಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಂಬಿಎ ಕಾಲೇಜಿನಲ್ಲಿ ನಡೆದ "ಪಾಂಚ್ಯಜನ್ಯ-2019" ರಾಷ್ಟ್ರೀಯ ಮಟ್ಟದ ಫೆಸ್ಟ್ಲ್  ನಗರ  ಶಾರದಮ್ಮ ವಿ  ಕೊತಬಾಳ ಕಾಲೇಜಿನ ವಿದ್ಯಾಥರ್ಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. 

ವಿದ್ಯಾರ್ಥಿಗಳಾದ ರವಿತೇಜ, ತರುಣಾ, ಜೀನಾಲ್, ಕಷಿಷ್, ರಿಷಬ್, ಪರಶುರಾಮ, ಸೋನಾಲಿ ಇನ್ನಿತರ ವಿದ್ಯಾರ್ಥಿಗಳು ಭಾಗವಹಿಸಿ  ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು, ವಿದ್ಯಾರ್ಥಿಗಳ ಸಾಧನೆಗೆ ಅಭಿನವ ಗವಿಸಿದ್ಧೇಶ್ವರ ಮಹಾ ಸ್ವಾಮಿಜಿಗಳು ಆಶೀರ್ವದಿಸಿದ್ದಾರೆ. ಗ.ವಿ.ವ ಟ್ಟಸ್ಟ್ ನ ಆಡಳಿತ ಮಂಡಳಿ, ಕಾಲೇಜಿನ ಅಧ್ಯಕ್ಷರಾದ ಸಂಜಯ್ ವಿ ಕೊತಬಾಳ ಕಾಲೇಜಿನ ಪ್ರಾಂಶುಪಾಲರ ರಾಜರಾಜೇಶ್ವರ ರಾವ್ ಮತ್ತು ಎಲ್ಲ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.