ಲೋಕದರ್ಶನ ವರದಿ
ಕೊಪ್ಪಳ 26: ನಗರದ ಸಕರ್ಾರಿ ಜಾಗದಲ್ಲಿದ್ದ ಖಾಸಗಿ ಒಡೆತನದ ದೇವಸ್ಥಾನವನ್ನು ಪೊಲೀಸ್ ಬಂದೋಬಸ್ತ್ನಲ್ಲಿ ತೆರವುಗೊಳಿಸಲಾಯಿತು.
ಜಿಲ್ಲೆಯ ಭಾಗ್ಯ ನಗರದ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಸವರ್ೀಸ್ ರಸ್ತೆಯ ನಿಮರ್ಾಣದ ಹಿನ್ನೆಲೆಯಲ್ಲಿ ಸಕರ್ಾರಿ ಜಾಗದಲ್ಲಿದ್ದ ಗಣೇಶ ದೇವಸ್ಥಾನವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ದೇವಸ್ಥಾನ ನಿಮರ್ಾಣ ಮಾಡಿದ್ದ ಕುಟುಂಬದವರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ನೊಂದಿಗೆ ಜೆಸಿಬಿ ತಂದು ದೇವಸ್ಥಾನವನ್ನು ತೆರವುಗೊಳಿಸಿದರು. ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ನಗರಸಭೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಯಾವುದೇ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ತೆರವು ಕಾಯರ್ಾಚರಣೆ ಸುಸೂತ್ರವಾಗಿ ನಡೆಯಿತು.