ಇ-ಖಾತಾ ಅಭಿಯಾನಕ್ಕೆ ವಿಧಾನಸಭೆ ಉಪಾಧ್ಯಕ್ಷ ರುದ್ರ​‍್ಪ ಲಮಾಣಿ ಚಾಲನೆ

Assembly Vice President Rudrappa Lamani launched the e-account campaign

ಇ-ಖಾತಾ ಅಭಿಯಾನಕ್ಕೆ ವಿಧಾನಸಭೆ ಉಪಾಧ್ಯಕ್ಷ ರುದ್ರ​‍್ಪ ಲಮಾಣಿ ಚಾಲನೆ 

ಹಾವೇರಿ 20:   “ಇ-ಖಾತಾ ಅಭಿಯಾನ”ನಕ್ಕೆ  ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರ​‍್ಪ ಲಮಾಣಿ ಅವರು ನಗರಸಭೆ ಆವರಣದಲ್ಲಿ  ಗುರುವಾರ ಚಾಲನೆ ನೀಡಿದರು.’ ಸರ್ಕಾರ ಇ-ಆಸ್ತಿ ತಂತ್ರಾಶದ ಬಳಕೆ ಕಡ್ಡಾಯಗೊಳಿಸಿದೆ,  ಆದ್ದರಿಂದ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು 2024-25 ನೇ ಸಾಲಿನ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಕರ್ನಾಟಕ ಪುರಸಭೆಗಳ ಅಧಿನಿಯಮ 1964 ರ ಕಲಂ 106 (1ಬಿ) () ರನ್ವಯ ಅನಧಿಕೃತ ಸ್ವತ್ತುಗಳನ್ನು ಮಾಹಿತಿಯುಳ್ಳ ವಹಿಯನ್ನು ನಿರ್ವಹಿಸಬೇಕಾಗಿರುತ್ತದೆ.  ಆದ್ದರಿಂದ ನಗರಸಭೆ ವ್ಯಾಪ್ತಿಯೊಳಗೆ ಬರುವ ಸರ್ಕಾರಿ ಅರೆಸರ್ಕಾರಿ/ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ರೀತಿಯ ಕಟ್ಟಡಗಳ, ನಿವೇಶನಗಳ ಮಾಲೀಕರು ನಿಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳಾದ ಎಲ್ಲಾ ನೊಂದಾಯಿತ ಪತ್ರಗಳು, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಪಾನಕಾರ್ಡ, ರೇಷನ ಕಾರ್ಡ, ನಮೂನೆ-15(ಇಸಿ), ಕೆಇಬಿ ಬಿಲ್, ಕಟ್ಟಡ ಪರವಾನಗಿ ಮತ್ತು ಅನುಮೋದಿತ ನಕ್ಷೆ, ಬಿನಶೆತಕಿ ನಕಲುಪ್ರತಿ, ಏಕ ನಿವೇಶನ, ಬಹುನಿವೇಶನಗಳ ತಾಂತ್ರಿಕ ಅನುಮೋದನೆ ನಕ್ಷೆ,ಸಿಟಿಎಸ್ ಉತಾರ, ಕಂದಾಯ ಪಾವತಿಸಿದ ರಶೀದಿ ಹಾಗೂ ಅವಶ್ಯಕ ಇರುವ ಇತರೆ ದಾಖಲೆಗಳನ್ನು ಹಾಜರುಪಡಿಸಿ ನಿಮ್ಮ ಆಸ್ತಿಯನ್ನು ಗಣಕೀಕರಣಗೊಳಿಸಿಕೊಂಡು ಅನ್ವಯವಾಗುವ ನಮೂನೆ-3/ನಮೂನೆ-3ಂ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷೆ   ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ  ಇತರರು ಉಪಸ್ಥಿತರಿದ್ದರು.