ನವದೆಹಲಿ 21: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕಾರು ಅಪಘಾತವಾಗಿರುವ ಘಟನೆ ಗುರುವಾರ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸೌರವ್ ಗಂಗೂಲಿ ತನ್ನ ಬೆಂಗಾವಲು ಪಡೆಯ ಜೊತೆ ತೆರಳುತ್ತಿದ್ದ ಸಂದರ್ಭ ಎದುರಿನಲ್ಲಿ ಹೋಗುತಿದ್ದ ಲಾರಿಯ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬೆಂಗಾವಲು ವಾಹನ ಬ್ರೇಕ್ ಹಾಕಿದ್ದಾನೆ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಗಂಗೂಲಿ ಅವರ ರೇಂಜ್ ರೋವರ್ ಕಾರು ಬೆಂಗಾವಲು ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಅಲ್ಲದೆ ಗಂಗೂಲಿ ಅವರ ಹಿಂದಿಂದ ಬರುತ್ತಿದ್ದ ಇನ್ನೊಂದು ಬೆಂಗಾವಲು ವಾಹನ ಗಂಗೂಲಿ ಅವರ ಕಾರಿಗೆ ಹಿಂದಿನಿಂದ ಗುದ್ದಿದೆ ಎಂದು ಹೇಳಲಾಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಇದಾದ ಬಳಿಕ ತಮ್ಮ ಪ್ರಯಾಣವನ್ನು ಮುಂದುವರೆಸಿದ ಸೌರವ್ ಗಂಗೂಲಿ ಬುರ್ದ್ವಾನ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಬಳಿಕ ಬುರ್ದ್ವಾನ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಮತ್ತೊಂದು ಸಮಾರಂಭದಲ್ಲಿ ಭಾಗವಹಿಸಿದ್ದರು.