ಕೃಷಿ ಭೂಮಿ ಕಾರ್ೊರೇಟ್ ಕಂಪನಿಗಳಿಗೆ ಮಾರಾಟ ನಿಲ್ಲಿಸಲು ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಸೋಮಣ್ಣ ಹಳ್ಳಿ ಮನವಿ
ಕೊಪ್ಪಳ 21 : ಕೃಷಿ ಭೂಮಿಯನ್ನು ಕಾರ್ೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗೆ ಕೊಪ್ಪಳ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಮನವಿ ಮಾಡಿದ್ದಾರೆ.ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಕಾರ್ೊರೇಟ್ ಕಂಪನಿಗಳಿಗೆ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದ್ದು ಇದರಿಂದ ಭವಿಷ್ಯದಲ್ಲಿ ಭಾರತ ಬಡತನ ಹಸಿವು ಅನಾರೋಗ್ಯ ಪೀಡಿತವಾಗಿ ಗಂಭೀರ ಪರಿಸ್ಥಿತಿಯನ್ನು ಹಾಗೂ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಕೃಷಿ ಭೂಮಿಯನ್ನು ಕಾರ್ೊರೇಟ್ ಕಂಪನಿಗಳು ತಮ್ಮ ಲಾಭಕ್ಕಾಗಿ ಕಾರ್ಖಾನೆಗಳನ್ನು ನಿರ್ಮಿಸುತ್ತಿದ್ದು ಇದರಿಂದ ದವಸ ಧಾನ್ಯಗಳ ಉತ್ಪಾದನೆ ಕ್ಷೀಣಿಸಿ ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆ ಉಂಟಾಗುತ್ತದೆ ಕಾರ್ಖಾನೆಗಳು ಕೇವಲ ಬೂದಿ, ಕಬ್ಬಿಣ ಕಾರ್ಬನ್ ಡೈಆಕ್ಸೆಡ್ ಉತ್ಪಾದನೆ ಮಾಡುತ್ತದೆ ಮನುಷ್ಯರು ಇದನ್ನು ತಿಂದು ಬದುಕಲು ಅಸಾಧ್ಯ ಜನರ ಹಿತ ದೃಷ್ಟಿಯಿಂದ ಇವತ್ತಿನಿಂದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕಾರ್ೊರೇಟ್ ಕಂಪನಿಗಳು ಖರೀದಿಸದಂತೆ ಆದೇಶ ಹೊರಡಿಸಬೇಕೆಂದು ಹಾಗೂ ಕೃಷಿ ಭೂಮಿಗೆ ಪ್ರೋತ್ಸಾಹ ನೀಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.