ಮಹಾಕುಂಭ ಮೇಳದಿಂದ ಕಾಶಿಗೆ ತೆರಳುತ್ತಿದ್ದ ಕ್ರೂಸರ್ ಅಪಘಾತ: ಮೂವರ ಸಾವು

Cruiser going from Mahakumbha Mela to Kashi mishap: Three killed

ಬೀದರ್ 21: ಪ್ರಯಾಗ್‌ ರಾಜ್‌ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ಕಾಶಿಗೆ ತೆರಳುತ್ತಿದ್ದ ಬೀದರ್‌ ನ ನಿವಾಸಿಗಳಿದ್ದ ಕ್ರೂಸರ್ ಅಪಘಾತವಾದ ಘಟನೆ ಶುಕ್ರವಾರ  ಬೆಳಗ್ಗೆ ನಡೆದಿದೆ.

ಉತ್ತರ ಪ್ರದೇಶದ ಕಾಶಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಬೀದರ್‌ ನ ಮೂರು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ. ಮೃತ ಮತ್ತು ಗಾಯಾಳುಗಳು ಬೀದರ್‌ ನ ಲಾಡಗೇರಿಯ ನಿವಾಸಿಗಳು ಎಂದು ತಿಳಿದು ಬಂದಿದೆ.

ನಗರದ ಲಾಡಗೇರಿ ನಿವಾಸಿಗಳಾದ ಲಕ್ಷ್ಮಿ (57), ನೀಲಮ್ಮಾ (62), ಸಂತೋಷಕುಮಾರ (45), ಸುನೀತಾ (40), ಕಲಾವತಿ ಹ (40) ಮೃತಪಟ್ಟವರು.

ಸುಲೋಚನಾ, ಸುಜಾತ, ಕವಿತಾ, ಅನಿತಾ, ಖುಷಿ, ಗಣೇಶ, ಸಾಯಿ, ಭಗವಂತ ಹಾಗೂ ಶಿವಾ ಗಾಯಗೊಂಡವರು.

ವಾರಾಣಸಿಯ ರೂಪಾಪೂರ ಬಳಿ ಶುಕ್ರವಾರ ನಸುಕಿನ ಜಾವ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕುಂಭಮೇಳದ ಭಕ್ತರಿದ್ದ ಕ್ರೂಸರ್ ಡಿಕ್ಕಿ ಹೊಡೆದಿದ್ದು, ವಾಹನ ನುಜ್ಜುಗುಜ್ಜಾಗಿದೆ.