ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮ

Adi Jagadguru Renukacharya Jayanti Celebration Program

 ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ  ಕಾರ್ಯಕ್ರಮ

ಮುದ್ದೇಬಿಹಾಳ 22 : ವೀರಶೈವ ಲಿಂಗಾಯತ ಧರ್ಮದ ಸಂಸ್ಥಾಪಕರು ಸಿದ್ಧಾಂತ ಶಿಖಾಮಣಿ ಗ್ರಂಥದ ರಚನೆಕಾರರು ಈ ಜಗದ ಶ್ರೇಷ್ಠ ಆಧ್ಯಾತ್ಮಿಕ ಸಾಧಕರು ಜಗದ್ಗುರು ರೇಣುಕಾಚಾರ್ಯರು ಮಾನವನಲ್ಲಿಯ ದಾನವ ಗುಣಗಳನ್ನು ದಹಿಸಿ ಆತನಲ್ಲಿಯ ಮಹಾದೇವನನ್ನು ಜಾಗೃತಗೊಳಿಸುವ ಅಪೂರ್ವವಾದ ಸಿದ್ಧಾಂತವನ್ನು ನೀಡಿರುವ ಜಗದ್ಗುರು ರೇಣುಕಾಚಾರ್ಯರನ್ನು ನಾವು ಸ್ಮದಾ ನಮ್ಮ ಮನದಲ್ಲಿ ಸ್ಮರಿಸುವಂತಾಗಬೇಕು ಈ ನಿಟ್ಟಿನಲ್ಲಿ ಇದೇ ದಿ, 23 ರವಿವರಾದಂದು  ಪಟ್ಟಣದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರಣ ಎಲ್ಲ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು  ಎಂದು ತಾಲೂಕಾ ಜಂಗಮ ಸಮಾಜದ ಅಧ್ಯಕ್ಷ   ದಾನಯ್ಯ ಹಿರೇಮಠ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರುಜಗದ್ಗುರು ರೇಣುಕಾಚಾರ್ಯ ಅವರು ಹಾಕಿಕೊಟ್ಟ ಧರ್ಮ ಮಾರ್ಗ ನಮಗೆಲ್ಲರಿಗೂ ಜೀವನದ ಆದರ್ಶ ತತ್ವವಾಗಬೇಕು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಮದ್ಯಾಹ್ನ 3 ಗಂಟೆಗೆ 108 ಕುಂಭಕಳಸದೊಂದಿಗೆ ವಿವಿದ ಬಾಜಾ ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆಉಪಾಧ್ಯಕ್ಷ ರಾಚಯ್ಯ ಹಿರೇಮಠ, ಮಹಾಂತೇಶ ಬೂದಿಹಾಳಮಠ, ರಾಚಯ್ಯ ಹಿರೇಮಠ, ಶ್ರೀಕಾಂತ ಹಿರೇಮಠ, ಅರವಿಂದ ಲದ್ದಿಮಠ, ಸಿದ್ದಯ್ಯಾ ಗಣಾಚಾರಿ, ಗುರಯ್ಯ ಮುದ್ನೂರಮಠ, ಮುತ್ತಯ್ಯಾ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು .