ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮ
Adi Jagadguru Renukacharya Jayanti Celebration Program
ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮ
ಮುದ್ದೇಬಿಹಾಳ 22 : ವೀರಶೈವ ಲಿಂಗಾಯತ ಧರ್ಮದ ಸಂಸ್ಥಾಪಕರು ಸಿದ್ಧಾಂತ ಶಿಖಾಮಣಿ ಗ್ರಂಥದ ರಚನೆಕಾರರು ಈ ಜಗದ ಶ್ರೇಷ್ಠ ಆಧ್ಯಾತ್ಮಿಕ ಸಾಧಕರು ಜಗದ್ಗುರು ರೇಣುಕಾಚಾರ್ಯರು ಮಾನವನಲ್ಲಿಯ ದಾನವ ಗುಣಗಳನ್ನು ದಹಿಸಿ ಆತನಲ್ಲಿಯ ಮಹಾದೇವನನ್ನು ಜಾಗೃತಗೊಳಿಸುವ ಅಪೂರ್ವವಾದ ಸಿದ್ಧಾಂತವನ್ನು ನೀಡಿರುವ ಜಗದ್ಗುರು ರೇಣುಕಾಚಾರ್ಯರನ್ನು ನಾವು ಸ್ಮದಾ ನಮ್ಮ ಮನದಲ್ಲಿ ಸ್ಮರಿಸುವಂತಾಗಬೇಕು ಈ ನಿಟ್ಟಿನಲ್ಲಿ ಇದೇ ದಿ, 23 ರವಿವರಾದಂದು ಪಟ್ಟಣದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಕಾರಣ ಎಲ್ಲ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಾಲೂಕಾ ಜಂಗಮ ಸಮಾಜದ ಅಧ್ಯಕ್ಷ ದಾನಯ್ಯ ಹಿರೇಮಠ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರುಜಗದ್ಗುರು ರೇಣುಕಾಚಾರ್ಯ ಅವರು ಹಾಕಿಕೊಟ್ಟ ಧರ್ಮ ಮಾರ್ಗ ನಮಗೆಲ್ಲರಿಗೂ ಜೀವನದ ಆದರ್ಶ ತತ್ವವಾಗಬೇಕು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಮದ್ಯಾಹ್ನ 3 ಗಂಟೆಗೆ 108 ಕುಂಭಕಳಸದೊಂದಿಗೆ ವಿವಿದ ಬಾಜಾ ಭಜಂತ್ರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆಉಪಾಧ್ಯಕ್ಷ ರಾಚಯ್ಯ ಹಿರೇಮಠ, ಮಹಾಂತೇಶ ಬೂದಿಹಾಳಮಠ, ರಾಚಯ್ಯ ಹಿರೇಮಠ, ಶ್ರೀಕಾಂತ ಹಿರೇಮಠ, ಅರವಿಂದ ಲದ್ದಿಮಠ, ಸಿದ್ದಯ್ಯಾ ಗಣಾಚಾರಿ, ಗುರಯ್ಯ ಮುದ್ನೂರಮಠ, ಮುತ್ತಯ್ಯಾ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು .
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 