ಕಾಗವಾಡ 21: ನವದೆಹಲಿಯ ಕಚೇರಿಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ್ ಜೋಶಿ ಅವರನ್ನು ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಅವರು ಸೌಜನ್ಯಯುತವಾಗಿ ಭೇಟ್ಟಿ ಮಾಡಿದರು.
ಈ ಸಮಯದಲ್ಲಿ ಕಾಗವಾಡ ಬಿಜೆಪಿಯ ಯುವ ನಾಯಕ ಹಾಗೂ ಅಥಣಿ ಶುಗರ್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ, ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಶಿವನೇರಿ ಶುಗರ್ಸ್‌ನ ಅಧ್ಯಕ್ಷ ಸುಶಾಂತ ಪಾಟೀಲ, ಅಥಣಿಯ ಯುವ ಮುಖಂಡ ಹಾಗೂ ಮಾಜಿ ಜಿ.ಪಂ. ಸದಸ್ಯ ಅಪ್ಪಾಸಾಹೇಬ ಅವತಾಡೆ ಉಪಸ್ಥಿತರಿದ್ದರು.