ಯರಗಟ್ಟಿ 24: ಯರಗಟ್ಟಿ ಘಟಕದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ವಿದ್ಯುತ್ ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ. ``ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪುನರ್ ನವೀಕರಣ ಮಾಡಬಹುದಾದ ಇಂಧನ ಉತ್ಪಾದನಾ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಸಕರ್ಾರ ಮತ್ತು ಸಂಘಸಂಸ್ಥೆಗಳಿಂದ ಅತ್ಯುತ್ತಮವಾದ ರೀತಿಯಲ್ಲಿ ಪ್ರೋತ್ಸಾಹ ದೊರೆಯುತ್ತಿದ್ದು, 2022 ರ ವೇಳೆಗೆ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚುವರಿಯಾಗಿ ಮತ್ತು ಇಂಧನ ಸ್ವಾವಲಂಬಿಯಾಗುವ ಮಟ್ಟಿಗೆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಬಾಷ್ ವ್ಯವಸ್ಥಾಪಕ ನಿದರ್ೇಶಕ ಮತ್ತು ಬಾಷ್ ಗ್ರೂಪ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಹೇಳಿದರು.
ಅವರು ಯರಗಟ್ಟಿಯಲ್ಲಿ ನ.24 ರಂದು ಪ್ರಮುಖ ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆದಾರ ಸಂಸ್ಥೆ ಬಾಷ್ ಲಿಮಿಟೆಡ್ ಸೋಲಾರ್ ವಿದ್ಯುತ್ ಉತ್ಪಾದನಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಕರ್ಾರದ ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಬಾಷ್ ಭಾಗಿಯಾಗುತ್ತಿರುವುದು ಸಂತಸ ತಂದಿದೆ. ಸುಸ್ಥಿರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಬಾಷ್ ಹೊಂದಿರುವ ಬದ್ಧತೆಯಲ್ಲಿ ಬಿಐಎಎಲ್ ಕೈಜೋಡಿಸಿರುವುದರಿಂದ ನಾವು ಗುರಿಯನ್ನು ತಲುಪುವತ್ತ ಹೆಜ್ಜೆ ಹಾಕುತ್ತಿದ್ದೇವೆ' ಎಂದು ಭಟ್ಟಾಚಾರ್ಯ ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಲಿಮಿಟೆಡ್ (ಬಿಐಎಎಲ್)ನ ವ್ಯವಸ್ಥಾಪಕ ನಿದರ್ೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹ್ಯಾರಿ ಮರಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತ ``ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಈ ಮೂಲಕ ನಾವು ಸುಸ್ಥಿರ ಅಭಿವೃದ್ಧಿಯಲ್ಲಿ ಮಾದರಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. 2020 ರ ವೇಳೆಗೆ ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಶೇ.100 ಕ್ಕೆ ನೂರರಷ್ಟು ಸ್ವಾವಲಂಬಿಯಾಗುವ ಗುರಿಯನ್ನು ಹಾಕಿಕೊಂಡಿದ್ದೇವೆ. ಇದೇ ಉದ್ದೇಶವಿಟ್ಟುಕೊಂಡು ನಾವು ಬಾಷ್ ಜತೆ ಸಹಭಾಗಿತ್ವವನ್ನು ಹೊಂದಿದ್ದು, ಗಣನೀಯ ಪ್ರಮಾಣದಲ್ಲಿ ಕಾರ್ಬನ್ ಬಳಕೆಯನ್ನು ಕಡಿಮೆ ಮಾಡಲಿದ್ದೇವೆ ಎಂದು ತಿಳಿಸಿದರು.
ಈ ಘಟಕ ಒಟ್ಟು 70 ಎಕರೆ (28 ಹೆಕ್ಟೇರ್) ವಿಸ್ತೀರ್ಣದಲ್ಲಿದ್ದು, 14.4 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಇದಲ್ಲದೇ, ಬಾಷ್ ವಿಮಾನನಿಲ್ದಾಣದ ಕಾರ್ ಪಾಕರ್ಿಂಗ್ ಪ್ರದೇಶದಲ್ಲಿ 2.94 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸೋಲಾರ್ ಘಟಕವನ್ನು 2017 ರ ಮೇ ತಿಂಗಳಲ್ಲಿ ಆರಂಭಿಸಿದೆ.