ಕೊಪ್ಪಳ 02: ಕೊಪ್ಪಳ ಜಿಲ್ಲೆಯಲ್ಲಿ 1000-ಬೆಡ್ ಆಸ್ಪತ್ರೆ ನಿಮರ್ಾಣದ ಗುರಿಯನ್ನು ಹೊಂದಲಾಗಿದೆ ಎಂದು ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಲೋಕಸಭಾ ಕ್ಷೇತ್ರದ ಕೊಪ್ಪಳ ನಗರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಇಲಾಖೆ, ಜಿಲ್ಲಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸುವರ್ಣ ಆರೋಗ್ಯ ಟ್ರಸ್ಟ್ ಇವರ ಸಹಯೋಗದಲ್ಲಿ ನಗರದ ಸಾರ್ವಜನಿಕ ಮೈದಾನದಲ್ಲಿ ಶನಿವಾರದಂದು ಏರ್ಪಡಿಸಲಾದ "ಉಚಿತ ಬೃಹತ್ ಆರೋಗ್ಯ ಮೇಳ" ಕಾರ್ಯಕ್ರಮ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ನಮ್ಮ ಜಿಲ್ಲೆಯವರು ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಗದಗ, ಹುಬ್ಬಳ್ಳಿ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ತೆರಳಬೇಕಾಗುತ್ತಿತ್ತು. ನಮ್ಮ ಜಿಲ್ಲಾ ಆಸ್ಪತೆಯಲ್ಲಿ ಸದ್ಯ ಎಲ್ಲಾ ಚಿಕಿತ್ಸೆಗಳನ್ನು ನೀಡುತ್ತಿದ್ದು, ಕೆಲ ತುತರ್ು ಚಿಕಿತ್ಸೆಗೆಗಳಿಗೆ ಬೆರೆಡೆ ಹೋಗದಂತೆ ಇಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಬೇಕು. ಈ ನೀಟ್ಟಿನಲ್ಲಿ ಕೊಪ್ಪಳದಲ್ಲಿ ಇತ್ತೀಚೆಗೆ 450 ಬೆಡ್ ಆಸ್ಪತ್ರೆ ನಿಮರ್ಾಣಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಶಂಕುಸ್ಥಾಪನೆಯಾಗಿದ್ದು, ಹಳೇಯ ಮತ್ತು ಹೊಸ ಜಿಲ್ಲಾ ಆಸ್ಪತ್ರೆಯನ್ನು ಇನ್ನೂ ಅಭಿವೃದ್ಧಿ ಪಡಿಸಲಾಗುವುದು. ಕಲಂ 371(ಜೆ) ಅನ್ವಯ ನಮ್ಮ ಜಿಲ್ಲೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ. ಎಲ್ಲರಿಗೂ ಸುಲಭವಾಗಿ ಚಿಕಿತ್ಸೆ ನೀಡುವ ಪ್ರಯುಕ್ತ ಜಿಲ್ಲಾ ಕೇಂದ್ರದಲ್ಲಿ 1000-ಬೆಡ್ ಆಸ್ಪತ್ರೆಯ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾದ "ಉಚಿತ ಬೃಹತ್ ಆರೋಗ್ಯ ಮೇಳ" ಈ ಕಾರ್ಯಕ್ರಮವು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯಬೇಕಿದೆ ಎಂದು ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಅವರು ಮಾತನಾಡಿ, ಎಲ್ಲರೂ ಸಾಮಾನ್ಯವಾಗಿ ರಸ್ತೆ, ಮನೆ ಹೀಗೆ ಅನೇಕ ಸೌಲಭ್ಯಗಳು ನಮಗೆ ಬೇಕು ಎನ್ನುತ್ತಾರೆ. ಆದರೆ ಇವುಗಳನ್ನು ಅನುಭವಿಸಲು ನಾವು ಇರಬೇಕಲ್ಲವೇ. ಆದ್ದರಿಂದ ಆರೋಗ್ಯವೇ ಭಾಗ್ಯ ಎಂಬಂತೆ ಎಲ್ಲದಕ್ಕೂ ಮೊದಲು ನಮ್ಮ ಆರೋಗ್ಯವು ಮುಖ್ಯವಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕು. ಈ ಮೇಳದಲ್ಲಿ ಭಾಗವಹಿಸಿ ವೈದ್ಯರಿಂದ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಕಾರ್ಯಕ್ರಮದಲ್ಲಿ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರ ಹನುಮಂತನಗೌಡ ಪಾಟೀಲ, ನಗರಸಭೆ ಸದಸ್ಯರಾದ ಮುತ್ತೂರಾಜ ಕುಷ್ಟಗಿ ಹಾಗೂ ಗುರುರಾಜ ಹಲಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಎಸ್. ಯರಗಲ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜಂಬಯ್ಯ, ತಾಲೂಕಾ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
2080 ಫಲಾನುಭವಿಗಳು ಭಾಗಿ: ಆರೋಗ್ಯ ಮೇಳದಲ್ಲಿ ಸುಮಾರು ಚಿಕಿತ್ಸೆಗಾಗಿ 2080 ಜನರಿಂದ ನೋಂದಣಿಯಾಗಿದೆ. ಈ ಶಿಬಿರದಲ್ಲಿ ಒಟ್ಟಾರೆ 40 ಸ್ಟಾಲ್ಗಳನ್ನು ಅಳವಡಿಸಿದ್ದು, ಬಾಯಿ ಗಂಟಲು ಮತ್ತು ಕ್ಯಾನ್ಸರ್ ತಜ್ಞರಾದ ಖ್ಯಾತ ವೈದ್ಯರುಗಳಾದ ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ. ವಿವೇಕ ಶೆಟ್ಟಿ, ಸಾಗರ ಆಸ್ಪತ್ರೆಯ ಹೃದಯ ರೋಗ ಹಾಗೂ ಮಧುಮೇಹ (ಸಕ್ಕರೆ ಕಾಯಿಲೆ) ತಜ್ಞರಾದ ಡಾ. ಕುಮಾರ, ಅಲ್ಲದೇ ಇನ್ನಿತರ ಚಿಕ್ಕ ಮಕ್ಕಳ ತಜ್ಞರು, ಕಿವಿ ಮೂಗು ಮತ್ತು ಗಂಟಲು ತಜ್ಞರು, ನೇತ್ರ ತಜ್ಞರು, ದಂತ ತಜ್ಞರು, ಮಾನಸಿಕ, ಶಸ್ತ್ರ ಚಿಕಿತ್ಸೆ ತಜ್ಞರು ಸೇರಿದಂತೆ 25 ತಜ್ಞರು ಮತ್ತು ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಒಟ್ಟಾರೆ 2080 ಫಲಾನುಭವಿಗಳು ಭಾಗವಹಿಸಿ ಆರೋಗ್ಯ ಮೇಳದ ಪ್ರಯೋಜನ ಪಡೆದು ಕೊಂಡಿದ್ದಾರೆ. ಹೃದಯ ರೋಗ ವಿಭಾಗದಲ್ಲಿ ಒಟ್ಟಾರೆ 230 ರೋಗಿಗಳಿಗೆ ಇ.ಸಿ.ಜಿ ಮತ್ತು ಇಕೋ ತಪಾಸಣೆ ಮಾಡಲಾಗಿದ್ದು, ಅದರಲ್ಲಿ 09 ಜನರಿಗೆ ಹೃದಯರೋಗ ಪತ್ತೆ ಹಚ್ಚಿ "ಆಯುಷ್ ಮಾನ್ ಭಾರತ್ ಹಾಗೂ "ಆರೋಗ್ಯ ಕನರ್ಾಟಕ ಯೋಜನೆ" ಅಡಿ ಮುಂದಿನ ಹಂತದಲ್ಲಿ ಚಿಕಿತ್ಸೆಗೆ ಕಳುಹಿಸಲಾಗಿದೆ. 35 ಬಾಯಿ ಮತ್ತು ಗಂಟಲು ಕ್ಯಾನ್ಸರಿನ ತಪಾಸಣೆ ಮಾಡಲಾಗಿದೆ ಹಾಗೂ ಇನ್ನಿತರ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಉಚಿತ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಉಚಿತ ಬೃಹತ್ ಆರೋಗ್ಯ ಮೇಳದಲ್ಲಿ ಸ್ಥಾಪಿಸಲಾದ ವಿವಿಧ ಚಿಕಿತ್ಸಾ ಘಟಕಗಳಿಗೆ ಸಂಸದ ಕರಡಿ ಸಂಗಣ್ಣ ಅವರು ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯ ವಿವಿಧ ಗ್ರಾಮ ಮತ್ತು ತಾಲೂಕುಗಳಿಂದ ಬಂದ ಸಾರ್ವಜನಿಕರು ಈ ಆರೋಗ್ಯ ಮೇಳದಲ್ಲಿ ಭಾಗವಹಿಸಲು ಸರತಿ ಸಾಲಿನಲ್ಲಿ ನಿಂತು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡರು. ಆರೋಗ್ಯ ಮೇಳದಲ್ಲಿ ಬಂದ ಜನರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಅಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಠಿಕ ಆಹಾರದ ಕುರಿತು ಪ್ರಾತ್ಯಕ್ಷೀತವಾಗಿ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.