ಬೀಳಗಿ 01: ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿ ಮತ್ತು ಭಾರತ ರತ್ನ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರುಣಿಸುವ ಮುಖಾಂತರ ಉದ್ಘಾಟಿಸಿ ಭಾವಚಿತ್ರಕ್ಕೆ ಗ್ರಾಮೀಣ ಪ್ರಮುಖ ಹಿರಿಯ ಮುಖಂಡರಾದ ಗುರುಪಾದಯ್ಯ ಕಂಬಿ ಹಾಗೂ ಗಣ್ಯರು ಪುಷ್ಪನಮನ ಸಲ್ಲಿಸಿದರು.
ತಾಲೂಕಿನ ಅನಗವಾಡಿ ಗ್ರಾಮದ ಮಹಾ ಶಿವಶರಣ ಮಾದಾರ ಚನ್ನಯ್ಯ ಕಾಲೋನಿಯ ಡಾ.ಬಾಬು ಜಗಜೀವನರಾಂ ಭವನದಲ್ಲಿ ಎಪ್ರೀಲ್ 28 ರಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಷೇಶ ಉಪನ್ಯಾಸಕರು ಹಾಗೂ ಅಂಬೇಡ್ಕರ ಚಿಂತಕರು ಎಮ್.ಬಿ.ಸಿದಗೊನಿ ಮತ್ತು ತಹಸಿಲ್ದಾರ ವಿನೋದ ಹತ್ತಳ್ಳಿ. ಮಾತನಾಡಿ ಭಾರತಕ್ಕೆ ವಿಶ್ವದ ಶ್ರೇಷ್ಠ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರನ್ನು ಈ ದೇಶ ಯಾವತ್ತೂ ಮರೆಯುವುದಿಲ್ಲ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನವು ನಮಗೆ ಮೂಲಭೂತ ಹಕ್ಕು, ಕರ್ತವ್ಯಗಳು ಹಾಗೂ ಸುರಕ್ಷಿತತೆಯನ್ನು ನೀಡಿದರೆ, ಜಗಜೀವನರಾಂ ಅವರ ಹಸಿರು ಕ್ರಾಂತಿಯು ದೇಶದ ಬೆನ್ನೆಲುಬಾದ ರೈತ ಸಮುದಾಯ ಹಾಗೂ ರಾಷ್ಟ್ರದ ಭವಿಷ್ಯವನ್ನು ಸುಭದ್ರಗೊಳಿಸಿದೆ ಎಂದರು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಗ್ರಾ.ಪಂ.ಅಧ್ಯಕ್ಷ ಹುಚ್ಚವ್ವ ಚಂ ಮಾದರ್, ಉದ್ಘಾಟಕ ಗುರುಪಾದಯ್ಯ ಕಂಬಿ, ಉಪನ್ಯಾಸಕ ತಹಸಿಲ್ದಾರ ವಿನೋದ ಹತ್ತಳ್ಳಿ, ಎಮ್.ಬಿ.ಸಿದಗೊನಿ, ಬೀಳಗಿ ಪಟ್ಟಣ ಪಂಚಾಯತ ನೂತನ ನಾಮ ನಿರ್ದೇಶಕ ಬಸವರಾಜ್ ಹಳ್ಳದಮನಿ ಈ ಎಲ್ಲ ಮಹನಿಯರನ್ನು ಮಾದಿಗ ಸಮುದಾಯದ ಹಿರಿಯರು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಾ ನಾಯಕರ ಸ್ತಬ್ದ ಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ದಲಿತ ಮುಖಂಡ ಮಹಾದೇವ ಹಾದಿಮನಿ, ಪಡಿಯಪ್ಪ ಕಳ್ಳಿಮನಿ, ಗ್ರಾ.ಪಂ.ಸದಸ್ಯ ರಸೂಲ್ ಮುಜಾವರ್, ಪಿ.ಕೆ.ಪಿ.ಎಸ್.ನಿರ್ದೇಶಕ ಬಸವರಾಜ್ ಛಬ್ಬಿ, ಪ್ರಾಸ್ತಾವಿಕವಾಗಿ ಸೋಮು ಚೂರಿ ಮಾತನಾಡಿದರು.
ಮುಖ್ಯ ಅತಿಥಿ ಮಾಜಿ ತಾಲೂಕ ಪಂ.ಸದಸ್ಯರಾದ ಭಾರತಿ ಹದ್ಲಿ, ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪಗೌಡ ಮೇಟಿ, ಸ್ವಾಮಿ ವಿವೇಕಾನಂದ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ಪಾಟೀಲ್, ಟಿಲಿಕಾಂ ಸ.ಸ.ಬೆಳಗಾಂವಿ ವಿಭಾಗ ಸದಸ್ಯ ಮುತ್ತಣ್ಣ ಅಂಗಡಿ, ಮಾದಿಗ ಮುಖಂಡ ಶಿವಾನಂದ ಬೀಳಗಿ, ದ.ಸಂ.ಸ.ಭೀಮವಾದ ಜಿಲ್ಲಾ ಸಂಚಾಲಕ ಸಿದ್ದು ಮಾದರ್, ಗ್ರಾ.ಪಂ.ಮಾಜಿ ಅಧ್ಯಕ್ಷ ರುದ್ರ್ಪಗೌಡ ಮೇಟಿ, ಮಲ್ಲಪ್ಪ ಅಂಗಡಿ, ಗ್ರಾ.ಪಂ.ಸದಸ್ಯ ಸಂಗಯ್ಯ ಕಂಬಿ, ಗುರುಬಸು ಅಕ್ಕಿಮರಡಿ, ಬಸವ್ವ ಹೆಬ್ಬಾಳ, ಶಾಂತವ್ವ ಮಾದರ್, ಈ ಆಯೋಜನೆಗೆ ಕಾರಣಿಕರ್ತರಾದ ಎಲ್ಲ ಯುವ ಕಾರ್ಯಕರ್ತರು. ಹಾಗೂ ಹಿರಿಯರು, ಮಹಿಳೆಯರು, ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ದ.ಸಂ.ಸ.ಜಿಲ್ಲಾ ಸಂ.ಸಂಚಾಲಕ ರಮೇಶ ಅನಗವಾಡಿ ಸ್ವಾಗತಿಸಿ ವಂದಿಸಿದರು.