ಸಿಡಿಲು ಬಿರುಗಾಳಿಗೆ ಮನೆಯ ಮೇಲ್ಛಾವಣಿ ಚೇಲ್ಲಾಪಿಲ್ಲಿ ;ಸಿಡಿಲು ಬಡಿದು ಐವರಿಗೆ ಗಾಯ

Lightning storm causes roof to collapse; five injured

ಮುಂಡಗೋಡ 28; ತಾಲೂಕಿನಲ್ಲಿ ಭಾರೀ ಗುಡುಗು ಸಿಡಿಲು ಹಾಗೆಯೇ ಮಿಂಚು ಬಿರುಗಾಳಿ ಸಹಿತ ಮನೆಯೊಂದಕ್ಕೆ ಸಿಡಿಲು ಬಡಿದು ಐವರು ಗಾಯಗೊಂಡು ಹಾಗೂ ಮನೆ  ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾದ ಘಟನೆ ಮುಂಡಗೋಡ  ತಾಲೂಕಿನ ಮೈನಳ್ಳಿಯ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.  

ನಾಗರತ್ನ ಜೋಲೆ, ಲಕ್ಷ್ಮೀ ಕೊಕರೆ, ಗಂಗಾರಾಮ ಮುಕ್ಕೊ ಕೊಕರೆ, ಶಾಂತಾಬಾಯಿ ಸಳಕೆ ಹಾಗೂ ಭರತ ಸಳಕೆ ಎಂಬಾತರೇ ಸಿಡಿಲಿನ ಶಾಖದಿಂದ ಗಾಯಗೊಂಡವರು ಗಾಯಾಳುಗಳನ್ನು ಮುಂಡಗೋಡ ತಾಲೂಕು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಐವರಲ್ಲಿ ನಾಲ್ವರನ್ನು ತಾಲೂಕು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿದರೆ ಗಂಗಾರಾಮ ಮುಕ್ಕೊ ಎಂಬ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.