ಚಿಕ್ಕೋಡಿ, 01 : ಚಿಕ್ಕೋಡಿ ಸಾರಿಗೆ ಕಛೇರಿಯ (ಕೆ.ಎ.23) ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಡ್ರೈವಿಂಗ್ ಸ್ಕೂಲ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಚಿಕ್ಕೋಡಿ ವಿಭಾಗ ಮೋಟಾರ ಡ್ರೈವಿಂಗ್ ಸ್ಕೂಲ್ ಮಾಲೀಕರ ಅಸೋಸಿಯೇಶನ್ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಕಚೇರಿ (ಕೆ.ಎ 23) ವ್ಯಾಪ್ತಿಯಲ್ಲಿ ಅನಧಿಕೃತ ಡ್ರೈವಿಂಗ್ ಸ್ಕೂಲ್ಗಳು ಕಾರ್ಯನಿರ್ವಹಿಸುತ್ತಿದ್ದು ಹಾಗೂ ತರಬೇತಿಯನ್ನು ನೀಡುತ್ತಿರುವುದು ಕಂಡು ಬಂದಿರುತ್ತದೆ. ಈ ಡ್ರೈವಿಂಗ್ ಸ್ಕೂಲ್‌ಗಳು ಯಾವುದೇ ರೀತಿಯಾದ ಸಾರಿಗೆ ಇಲಾಖೆಯಿಂದ ಪರವಾನಗಿಯನ್ನು ಹೊಂದಿರುವುದಿಲ್ಲ. ಅವುಗಳ ಮೇಲೆ ಸೂಕ್ತ ಕ್ರಮವಹಿಸಬೇಕು ಎಂದು ಅಸೋಸಿಯೇಷನ್ ಮಾಲಿಕರ ಸಂಘ ಒತ್ತಾಯಿಸಿದರು.ಚಿಕ್ಕೋಡಿ ಮೋಟಾರ ಡೈವಿಂಗ್ ಸ್ಕೂಲ್ ಮಾಲೀಕರ ಅಸೋಸಿಯೇಶನ್ ಅಧ್ಯಕ್ಷ ಎಂ.ಆರ್.ಮುನ್ನೋಳಿಕರ ಮಾತನಾಡಿ ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಅನಧಿಕೃತ ಮೋಟರ ಡ್ರೈವಿಂಗ್ ಸ್ಕೂಲ್ ತಲೆ ಎತ್ತಿವೆ. ಇದರಿಂದ ಪರವಾನಗಿ ಇರುವ ಡ್ರೈವಿಂಗ್ ಸ್ಕೂಲಗಳಿಗೆ ಅನ್ಯಾಯ ಆಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಸೋಸಯೇಷನ್ ಉಪಾಧ್ಯಕ್ಷ ನಿಯಾಜ್ ಬುಡೆಖಾ. ಕಾರ್ಯದರ್ಶಿ ವಿನಾಯಕ ಚೌಗಲಾ. ಖಜಾಂಚಿ ರಾಜು ಚಂದಗಡೆ. ಜ್ಯೋತಿರಾಮ ಪವಾರ. ಸ್ವಪ್ನಿಲ್ ಅವಳೇಕರ. ಭಜರಂಗ ಮೋರೆ. ಅಮಿತ ಬಾಳನಾಯಿಕ. ಪ್ರಶಾಂತ ಕುಸ್ತಿಗಾರ. ಶಫಿ ಕಂಕನವಾಡಿ. ಸೂರಜ್ ನಾರೆ. ಜಾವೇದ ಛಲವಾದಿ. ಗೌರಿಶಂಕರ. ಮಾರುತಿ ಮಾಳಿ. ಸಂಜು ಲಠ್ಠೆ. ಸಾಗರ ಜನವಾಡಿ. ಸಚೀನ ಬುಬನಾಳೆ. ಪ್ರಪುಲ್ ದೇಸಾಯಿ ಮುಂತಾದವರು ಇದ್ದರು.