ಮುಂಬೈ 29: ಕಳೆದ ವಾರ ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಸಿಲುಕಿ ಮೃತಪಟ್ಟ ರಾಜ್ಯದ ಆರು ವ್ಯಕ್ತಿಗಳ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ಮತ್ತು ಮೃತರ ಹತ್ತಿರದ ಸಂಬಂಧಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಂಗಳವಾರ ಹೇಳಿದ್ದಾರೆ.
ಸಂತ್ರಸ್ತರ
ಕುಟುಂಬದೊಂದಿಗೆ ರಾಜ್ಯ ಸರ್ಕಾರ ದೃಢವಾಗಿ ನಿಲ್ಲಲಿದೆ ಎಂದು ಫಡಣವೀಸ್ ಭರವಸೆ ನೀಡಿದರು.
ಏ.22ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಅಮಾಯಕ ನಾಗರಿಕರು ಉಸಿರು ಚೆಲ್ಲಿದ್ದರು. ಅವರಲ್ಲಿ ಆರು ಮಂದಿ ಮಹಾರಾಷ್ಟ್ರದವರು. ಮೂವರು ಠಾಣೆ ಜಿಲ್ಲೆಯವರು, ಇಬ್ಬರು ಪುಣೆ ಮತ್ತು ಒಬ್ಬರು ನವಿ ಮುಂಬೈ ನಿವಾಸಿಗಳಾಗಿದ್ದರು.