ಸಿದ್ದಾಪುರ: ಅರಣ್ಯಕ್ಕೆ ಬೆಂಕಿ: ಅಪಾರ ಬೆಲೆಬಾಳುವ ಮರಗಳ ಹಾನಿ

ಲೋಕದರ್ಶನ ವರದಿ

ಸಿದ್ದಾಪುರ 23: ತಾಲೂಕಿನ ಬೇಡ್ಕಣಿಯ ಕುಂಬ್ರಿಗದ್ದೆ ಸಮೀಪದ ಮಾಲ್ಕಿ ಬೆಟ್ಟ ಹಾಗೂ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಬೆಲೆಬಾಳುವ ಗಿಡ-ಮರಗಳು ಸುಟ್ಟುಹೋಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಆಗಬಹುದಾದ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.

ಮಧ್ಯಾಹ್ನ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು ಬೆಂಕಿಯ ಕೆನ್ನಾಲಿಗೆಗೆ ಅರಣ್ಯದ ಜೀವಜಂತುಗಳು ಆಹುತಿ ಆಗಿದೆ. ಬೆಂಕಿನಂದಿಸುವಲ್ಲಿ ಅಗ್ನಿಶಾಮಕ ದಳದವರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದು ಅಂದಾಜು ಮೂರು ಏಕರೆ ಪ್ರದೇಶ ಸುಟ್ಟು ಹೋಗಿದೆ. ಅರಣ್ಯ ಸಮೀಪ ಇರುವ ಒಂದೆರಡು ಮನೆಗೆ ಬೆಂಕಿ ತಗಲುವ ಸಾಧ್ಯತೆ ಇತ್ತು ಅದನ್ನು ಮುಂಜಾಗೃತಾವಾಗಿ ತಡೆಯಲಾಗಿದೆ ಎಂದು ಸಿದ್ದಾಪುರ ಉಪವಿಭಾಗದ ವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.