ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
Ahead of summer, there is a shortage of drinking water in Sankeshwar: People are flocking to tube we
ಪಾರೇಶ ಭೋಸಲೆ
ಬೆಳಗಾವಿ : ಜಿಲ್ಲೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮರ್ಪಕ ಸರಬರಾಜು ಮಾಡಿ, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮಾಡಿ ಎಂದು ಒಂದು ಕಡೆ ಜಿಲ್ಲ ಪಂಚಾಯತ ಸಿಇಓ ಸಭೆಗಳಲ್ಲಿ ಹೇಳುತ್ತಿದ್ದರೆ ಇತ್ತ ಕಳೆದ 8 ದಿನಗಳಿಂದ ಕುಡಿಯುಲು ನೀರಿಲ್ಲದೆ ಜನರು ಕೊಳವೆ ಬಾವಿ, ಬಾವಿಗಳತ್ತ ಹುಡುಕುತ್ತ ಅಲೇದಾಡುವ ಪರಿಸ್ಥಿತಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಎದುರಾಗಿದೆ.
ಜಲಾಶಯಗಳಲ್ಲಿ ಇನ್ನು ನೀರು ಸಂಗ್ರಹ ಇರುವಾಗಲೇ ಸಂಕೇಶ್ವರ ಪಟ್ಟಣದ ಗೋರಕ್ಷಣ ಮಾಳ ಹಾಗೂ ಜನತಾ ಪ್ಲಾಟ ಪ್ರದೇಶಗಳಲ್ಲಿ ಕಳೆದ 8 ದಿನಗಳಿಂದ ಕುಡಿಯುವ ನೀರು ನಳಗಳಿಗೆ ಪೂರೈಕೆ ಆಗದೆ ಇರುವದರಿಂದ ಇಲ್ಲಿನ ಜನರು ಖಾಲಿ ಕೊಡಗಳನ್ನು ಹಿಡಿದುಕೊಂಡು ಕೊಳವೆ ಬಾವಿ ಹಾಗೂ ಬಾವಿಗಳತ್ತ ಅಲೆಯುತ್ತಿದ್ದಾರೆ.
ಕಳೆದ 8 ದಿನಗಳಿಂದ ಜನತಾ ಪ್ಲಾಟ್ ಹಾಗೂ ಗೋರಕ್ಷಣ ಮಾಳ ಪ್ರದೇಶದಲ್ಲಿ ಸರಿಯಾಗಿ ಕುಡಿಯುವ ನೀರು ಬಾರದೆ ಇದ್ದರೂ ಪುರಸಭೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ಇರುವದು ದುರ್ಧೈವದ ಸಂಗತಿಯಾಗಿದೆ.
ಪುರಸಭೆಯಲ್ಲಿ ಸದಸ್ಯರ ಅಧಿಕಾರ ಅವಧಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಗಳು ನಡೆದಿದ್ದೆ ದಾರಿಯಂತಾಗಿದೆ. ಅಲ್ಲದೆ ಈ ಕುರಿತು ಕೇಳಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಈ ಬಗ್ಗೆ ಕಣ್ಣು ತೆರೆಯದ ಪುರಸಭೆ ಅಧಿಕಾರಿಗಳು ಜಿಲ್ಲಾ ಪಂಚಾಯರ ಸಿಇಓ ರಾಹುಲ್ ಶಿಂಧೆ ಅವರ ಆದೇಶದ ವಿರುದ್ದವಾಗಿ ನಡೆದುಕೊಳ್ಳುತ್ತಿರುವದು ಇಲ್ಲಿ ಸ್ಪಷ್ಟವಾಗಿದೆ.
ಸಚಿವ ದಿವಂಗತ ಉಮೇಶ ಕತ್ತಿ ಅವರು ಸಂಕೇಶ್ವರ ಜನರ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂದಾಲೋಚನೆ ಮಾಡಿ ಪಟ್ಟಣದಲ್ಲಿ 24@7 ಕುಡಿಯುವ ನೀರಿನ ವಿಶೇಷ ಯೋಜನೆಯಲ್ಲಿ ಹೊಸಪೈಪ್ ಲೈನ್ ಮಾಡಿಸಿದ್ದರು.
ಆದರೆ ಈ ಆಯೋಜನೆಗೆ ಪುರಸಭೆ ಅಧಿಕಾರಿಗಳು ಕಲ್ಲು ಹಾಕುವ ಕಾರ್ಯಮಾಡಿದ್ದು, ಈಗ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 