ಮಹಿಳೆಯರಿಗೆ ಸಮಾಜ ಸುಧಾರಣೆ ಜವಾಬ್ದಾರಿ ಇದೆ: ಶೈಲಜಾ ಸ್ಥಾವರಮಠ
Women have the responsibility of social reform: Shailaja Sthavaramath
ದೇವರಹಿಪ್ಪರಗಿ 07: ಪುರುಷರು ದೈಹಿಕವಾಗಿ ಬಲಿಷ್ಠರಾದರೆ ಮಾನಸಿಕವಾಗಿ ಮಹಿಳೆಯರು ಬಲಿಷ್ಠರು. ಮಹಿಳೆಯರಿಗೆ ಮನೆ, ವೃತ್ತಿ ಜವಾಬ್ಧಾರಿ ಜತೆಗೆ ಸಮಾಜದ ಸುಧಾರಣೆ ಜವಾಬ್ಧಾರಿಯೂ ಇದೆ ಎಂದು ಸಿಂದಗಿ ಮಹಿಳಾ ಹೋರಾಟಗಾರರಾದ ಶೈಲಜಾ ಸ್ಥಾವರಮಠ ಹೇಳಿದರು.ಪಟ್ಟಣದ ಜೆ.ಎಮ್.ಜೆ ಸಮಾಜ ಸೇವಾ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು.ಮಹಿಳೆ ಅಬಲೆ ಅಲ್ಲ, ಸಬಲೆ, ಅಷ್ಟೇ ಅಲ್ಲ ಪ್ರಭಲೆ ಕೂಡ ಎಂಬುದನ್ನು ಇಂದಿನ ಮಹಿಳೆ ಸಾಧಿಸಿ ತೋರಿಸಿದ್ದಾಳೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾರೆ.
ಹೆಣ್ಣು ಗಂಡು ಎಂಬ ತಾರತಮ್ಯ ಬೇಡ ಪುರುಷನ ಸಾಧನೆ ಹಿಂದೆ ಮಹಿಳೆ ಇರುತ್ತಾಳೆ. ಸಮಾಜಮುಖಿಯಾಗಿ ಬೆರೆತು ಗಂಡು-ಹೆಣ್ಣು ಭೇದ ಭಾವ ಕಾಣದೆ ಒಟ್ಟಾಗಿ ದೇಶ ಕಟ್ಟೋಣ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಸಹೋದರಿ ಅಂತೋನಿ ಮೇರಿ ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟಕರಾಗಿ ಸಿಂದಗಿ ಲೋಯಲಾ ಶಾಲೆಯ ಪ್ರಾಂಶುಪಾಲರಾದ ಫಾದರ್ ವಿಶಾಲ ಎಸ್.ಜೆ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಉಪನ್ಯಾಸಕರಾಗಿ ಸಿ.ಆರಿ್ಪ ವಿಜಯಲಕ್ಷ್ಮಿ ನವಲಿ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಸಂದರ್ಭದಲ್ಲಿ ಮಹಿಳಾ ಪಿಎಸ್‌ಐ ಪಿ.ಎಂ.ಚೌರ, ರೈತ ಸಂಘದ ರೇಣುಕಾ ಪಾಟೀಲ, ಆರೋಗ್ಯ ಇಲಾಖೆಯ ಸುಕನ್ಯಾ ಚಳಗೆರಿ ಹಾಗೂ ತವರು ಮನೆ ಟ್ರಸ್ಟ್ ಮಂಜುಳಾ ನಾಯಕ್ ಅವರು ಮಾತನಾಡಿ, ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ, ಉದ್ಯಮ ಹಾಗೂ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಮಹಿಳೆಯರ ಹಕ್ಕು, ಗೌರವ ಮತ್ತು ಸಮಾನತೆಗಾಗಿ ಸಮಾಜವನ್ನು ಪ್ರೇರೇಪಿಸುವ ಮಹತ್ವದ ದಿನವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕರವೇ ತಾಲೂಕು ಘಟಕದ ಅಧ್ಯಕ್ಷರಾದ ರಹೀಮಾನ್ ಕನಕಲ್,ಜೆ.ಎಮ್.ಜೆ ಸ್ಪಂದನ ಸಮಾಜ ಸೇವಾ ಸಂಸ್ಥೆಯ ಸಿಸ್ಟರ್ ಹೃದಯ,ಝೇವಿಯರ ಇಗಲಪಾಟಿ, ಶಾಂತಾಬಾಯಿ ಸೇರಿದಂತೆ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು,ಸಿಬ್ಬಂದಿ ವರ್ಗ ಹಾಗೂ ಮಹಿಳೆಯರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 