ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
Yellow-Saffron Program from Sanjeevini Foundation: Along with patient care, self-care is also import
ಬೆಳಗಾವಿ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆಯೂ ಅಷ್ಟೇ ಮಹತ್ವದ್ದಾಗಿದೆ ಎಂದು ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜ್ ರಸ್ತೆಯ ಸಿಆರ್‌ಎಚ್ ಆಸ್ಪತ್ರೆಯಲ್ಲಿ ಸಂಜೀವಿನಿ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಪರಂಪರೆಯಂತೆ ಹಳದಿ-ಕುಂಕುಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ದೇಶಾಯಿ ಅವರು, ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ “ಸ್ವಂತ ಆರೈಕೆ (Self care)” ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಿದರು. ಸ್ವಂತ ಆರೈಕೆಯ ಮಹತ್ವ, ಕೆಲಸ ಮತ್ತು ವೈಯಕ್ತಿಕ ಆರೋಗ್ಯದ ನಡುವೆ ಸಮತೋಲನ ಕಾಪಾಡುವ ವಿಧಾನಗಳು ಹಾಗೂ ವೃತ್ತಿಪರ ಜವಾಬ್ದಾರಿಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಸ್ವಂತ ಆರೋಗ್ಯದ ಕಡೆ ಗಮನ ಹೇಗೆ ಹರಿಸಬೇಕು ಎಂಬುದರ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಸ್ವಪ್ನಾ ಮಹಾಜನ್, ಡಾ. ಸುಚಿತ್ರಾ ಲಾಟ್ಕರ್, ಡಾ. ರೇಷ್ಮಾ ಕಾಮಟೆ, ಡಾ. ಜ್ಯೋತಿ ಗಿಣಿಮುಗಿ ಹಾಗೂ ಸಿಆರ್‌ಎಚ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರೇಣುಕಾ ಪಾಟೀಲ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷೆ ಡಾ. ಸವಿತಾ ದೇಗಿನಾಳ ಅವರು ಸಂಜೀವಿನಿ ಫೌಂಡೇಶನ್‌ನ ಕಾರ್ಯಚಟುವಟಿಕೆಗಳು, ವಿವಿಧ ಸೇವಾ ಉಪಕ್ರಮಗಳು ಹಾಗೂ ಹಳದಿ-ಕುಂಕು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಸ್ತ್ರೀರೋಗ ತಜ್ಞೆ ಡಾ. ರೇಷ್ಮಾ ಕಾಮಟೆ ಅವರು ತಮ್ಮ ಮನೋಗತದಲ್ಲಿ ಸಂಜೀವಿನಿ ಫೌಂಡೇಶನ್‌ನ ಸೇವಾಭಾವಿ ಕಾರ್ಯವನ್ನು ಪ್ರಶಂಸಿಸಿದರು. ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ತಮ್ಮ ಬೆಂಬಲ ಮತ್ತು ಸಹಕಾರ ಮುಂದುವರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತ ಎಲ್ಲ ಮಹಿಳೆಯರಿಗಾಗಿ ಪರಂಪರಯಂತೆ ಹಳದಿ-ಕುಂಕು ಸಮಾರಂಭ ಹಾಗೂ ಉಡುಗೊರೆ ವಿತರಣೆ ಮಾಡಲಾಯಿತು. ಜೊತೆಗೆ ಉತ್ಸಾಹಭರಿತ ವಾತಾವರಣ ಸೃಷ್ಟಿಸಲು ಮನರಂಜನಾ ಆಟಗಳನ್ನು ಕೂಡ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಿಆರ್‌ಎಚ್ ಆಸ್ಪತ್ರೆಯ ಎಲ್ಲಾ ಮಹಿಳಾ ಸಿಬ್ಬಂದಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.
ಕಾರ್ಯಕ್ರಮದ ಸಮಾರೋಪವನ್ನು ಸಂಸ್ಥೆಯ ಆಡಳಿತಾಧಿಕಾರಿ ಪದ್ಮಾ ಔಶೇಕರ್ ಅವರು ಧನ್ಯವಾದಗಳೊಂದಿಗೆ ನೆರವೇರಿಸಿದರು. ಈ ಕಾರ್ಯಕ್ರಮವನ್ನು ಋತುಜಾ ಕಾಟೆ ಅವರು ನಿರೂಪಿಸಿದರು.
ಈ ಕಾರ್ಯಕ್ರಮವು ಸಂತೋಷ, ಸ್ನೇಹ ಹಾಗೂ ಪರಂಪರೆಯ ಉತ್ಸಾಹಭರಿತ ವಾತಾವರಣದಲ್ಲಿ ಯಶಸ್ವಿಯಾಗಿ
ನೆರವೇರಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 