ಕೊಪ್ಪಳ 19: ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಆಯೋಜಿಸಲಾದ "ಮಾವು ಪ್ರದರ್ಶನ ಮತ್ತು ಮಾರಾಟ ಮೇಳ"ದ ಸಮಾರೋಪ ಸಮಾರಂಭವು ಭಾನುವಾರದಂದು ಯಶಸ್ವಿಯಾಗಿ ಜರುಗಿತು. ಸತತ 12 ದಿನಗಳ ಕಾಲ ನಡೆದ ಈ ಮೇಳದಲ್ಲಿ 160 ಟನ್ಗೂ ಅಧಿಕ ಮಾವಿನ ಹಣ್ಣು ಮಾರಾಟವಾಗಿ ಬರೊಬ್ಬರಿ ಒಂದುವರೆ ಕೋಟಿಗೂ ಹೆಚ್ಚಿನ ವಹಿವಾಟು ಆಗಿದೆ.
ಸಮಾರೋಪ ಸಮಾರಂಭಕ್ಕೆ ಕೊಪ್ಪಳ ನಗರದ ಗವಿಸಿದ್ಧೇಶ್ವರ ಸ್ವಾಮಿಗಳು ಆಗಮಿಸಿ ಮಾವು ಮೇಳದ ವಹಿವಾಟು ಬಗ್ಗೆ ಮಾಹಿತಿ ಪಡೆದರು. ಮೇಳದಲ್ಲಿ ಸ್ಥಾಪಿಸಲಾದ ಸ್ಟಾಲ್ಗಳನ್ನು ಹಾಗೂ ವಿವಿಧ ತಳಿಗಳ ಮಾವುಗಳನ್ನು ವೀಕ್ಷಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಮಾವು ಯಶಸ್ವಿಗೊಂಡಿರುವ ಕುರಿತು ತೋಟಗಾರಿಕೆ ಇಲಾಖೆಯ ಈ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಅಲ್ಲದೇ ಈ ಮೇಳದಲ್ಲಿ ಭಾಗವಹಿಸಿದ ರೈತ ಮತ್ತು ರೈತ ಮಹಿಳೆಯರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರಮಾಣ ಪತ್ರವನ್ನು ಸ್ವಾಮೀಜಿಗಳ ಮುಖಾಂತರ ವಿತರಿಸಲಾಯಿತು. ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣ ಉಕ್ಕುಂದ, ವಿಷಯ ತಜ್ಞ ವಾಮನಮೂತರ್ಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತೋಟಗಾರಿಕೆ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವೂ ಮಾವು ಮೇಳ ಆರಂಭಿಸಿದ್ದು, ಸತತ 12 ದಿನಗಳ ನಂತ ಇಂದು ತೆರೆಕಾಣಲಿದೆ. ನಿಗದಿಯಾದಂತೆ ಮೇಳವು ಮೇ. 15 ರಂದೇ ತೆರೆಕಾಣಬೇಕಾಗಿತ್ತು. ಆದರೆ ಗ್ರಾಹಕರ ಹಾಗೂ ರೈತರ ವ್ಯಾಪಕ ಭೇಡಿಕೆ ಮೇರೆಗೆ ಮತ್ತೆ ನಾಲ್ಕು ದಿನಗಳ ಕಾಲ ಅಂದರೆ ಮೇ. 19 ರವರೆಗೂ ಮುಂದುಡಲ್ಪಟ್ಟಿದ್ದು, ಮಾವು ಮೇಳವು ಇಂದು (ಮೇ. 19 ರಂದು) ಮುಕ್ತಾಯಗೊಂಡಿದೆ.
ಮೂರು ಪ್ರಮುಖ ಉದ್ದೇಶಗಳಿಂದ ಈ ಬಾರಿಯ ಮಾವು ಮೇಳವನ್ನು ಆಯೋಜಿಸಲಾಗಿತ್ತು, ಅವುಗಳೆಂದರೆ, ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ರಾಸಾಯನಿಕ ಮುಕ್ತ ನೈಸಗರ್ಿಕವಾಗಿ ಮಾಗಿಸಿದ ಹಣ್ಣನ್ನು ಯೋಗ್ಯ ಬೆಲೆಗೆ ಪೂರೈಸುವುದು. ಈ ಬಾರಿಯ ಮೇಳದಲ್ಲಿ ನೇರವಾಗಿ ಹಣ್ಣು ಮಾರುವುದಲ್ಲದೇ ಹಣ್ಣಿನ ಮೌಲ್ಯವರ್ಧನೆ ಹಾಗೂ ಸಂಸ್ಕರಣೆಗೆ ಒತ್ತು ನೀಡುವುದು. ರೈತರಿಂದ ಖರೀದಿಸಿ, ರೈತರನ್ನು ಬದುಕಿಸಿ ಎನ್ನುವ ಮೂಲ ಉದ್ದೇಶವನ್ನು ಈ ಮೇಳ ಹೊಂದಿತ್ತು. ಈ ಮೂರು ಉದ್ದೇಶಗಳು ನೆರವೇರಿದ್ದು ಮಾವು ಮೇಳವು ಅಭೂತ ಪೂರ್ಣ ಯಶಸ್ವಿಯೊಂದಿಗೆ ಗ್ರಾಹಕರ ಹಾಗೂ ರೈತರ ಮನದಲ್ಲಿ ಅಚ್ಚಳಿಯದೇ ನಿಲ್ಲುವಂತಾಗಿದೆ.
ಮಾವು ಮೇಳದಲ್ಲಿ 60 ಸಂಖ್ಯೆಗೂ ಹೆಚ್ಚಿನ ರೈತರು ಪರೋಕ್ಷ ಮತ್ತು ಅಪರೋಕ್ಷವಾಗಿ ತಾಜಾ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಏರ್ಪಡಿಸಿದ ಮಾವು ಮೇಳದಲ್ಲಿ ಭಾಗವಹಿಸಿದ ರೈತರ ದೂರವಾಣಿ ಸಂಖ್ಯೆಯನ್ನು ಗ್ರಾಹಕರು ಪಡೆದುಕೊಂಡು ನೇರವಾಗಿ ರೈತರನ್ನು ಸಂಪಕರ್ಿಸಿ ಅವರ ತೋಟಗಳಿಗೆ ಭೇಟಿ ನೀಡಿ ತಮಗೆ ಬೇಕಾದ ತಳಿಗಳನ್ನು ಖರೀದಿ ಮಾಡಿದ್ದು ಈ ಮೇಳದ ವಿಶೇಷತೆ ಆಗಿದೆ.
ಈ ಬಾರಿಯ ಮಾವು ಮೇಳ ರೈತರಿಗೆ ನಿಜವಾಗಲೂ ವರದಾನವಾಗಿದೆ. ಮಾವು ಮೇಳವು ಕಳೆದ ಬಾರಿಗಿಂತಲೂ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರೂ ಕೂಡಾ ಉತ್ಕೃಷ್ಟ ಗುಣಮಟ್ಟದ ಹಣ್ಣನ್ನು ಸೇವಿಸಿ ಆನಂದಿಸಿದ್ದಾರಲ್ಲದೇ ಅನೇಕ ತಳಿಗಳಾದ ಬೆನೆಶಾನ್, ಆಪೂಸ್, ಕೇಸರ್. ದಶಹರಿ, ಸುವರ್ಣರೇಖಾ, ಸಿಂಧೂರ, ಚಿನ್ನರಸಂ, ಪೆದ್ದರಸಂ, ರಸಪೂರಿ, ಮಲ್ಲಿಕಾ ಅಲ್ಲದೇ ಉಪ್ಪಿನಕಾಯಿ ತಳಿಗಳಾದ ಆಮ್ಲೇಟ್, ಮಲಗೋವಾ, ಪುನಾಸ ಮತ್ತು ರುಮೇನಿಯಾ ತಳಿಗಳು ಕೂಡಾ ಮಾರಾಟವಾಗಿವೆ. ಆದರೆ ಹೆಚ್ಚಿನ ಭೇಡಿಕೆ ದಶಹರಿ ತಳಿಗೆ ಕಂಡು ಬಂದಿದ್ದು ಆರಂಭದಿಂದಲೇ ಪ್ರತಿ ಕೆ.ಜಿ. ಗೆ ರೂ.100 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. ಇನ್ನಿತರೇ ಬೇಡಿಕೆ ತಳಿಗಳಂದರೇ ಕೇಸರ್, ಆಪೂಸ್ ಹಾಗೂ ರಸಪೂರಿ ಮತ್ತು ಉಪ್ಪಿನಕಾಯಿ ತಳಿಗಳು.
ಒಟ್ಟಾರೆಯಾಗಿ ಗ್ರಾಹಕರು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಖರೀದಿಸಿದ 160 ಟನ್ಗೂ ಹೆಚ್ಚಿನ ತೂಕದ ಹಣ್ಣಿನ ಮಾರಾಟವಾಗಿದ್ದು, ರೂ.1.50 ಕೋಟಿಗೂ ಹೆಚ್ಚಿನ ವಹಿವಾಟು ಆಗಿದೆ. ಈ ಬರಗಾಲದಲ್ಲಿ ಇಷ್ಟೊಂದು ವಹಿವಾಟು ಆಗಿದ್ದು ಒಂದು ಸಾಧನೆ ಎಂದು ಹೇಳಬಹುದು. ವರ್ಷವಿಡೀ ಬರಗಾಲದಿಂದ ಮುಂಗಾರು ಹಾಗೂ ಹಿಂಗಾರಿನ ಬಹುತೇಕ ಬೆಳೆಗಳು ರೈತರಿಗೆ ನಷ್ಟವನ್ನೇ ತಂದಿದ್ದವು, ಮಾವು ಬೆಳೆಗಾರರಿಗೆ, ಮಾವು ಮಾತ್ರ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಂದೆ ಕೂಡಾ ರೈತರು ಮಾವು ಬೆಳೆಯಲು ಹೆಚ್ಚಿನ ಆಸಕ್ತಿ ವ್ಯಕ್ತ ಪಡಿಸಿರುತ್ತಾರೆ.
ಮಾವು ಮೇಳದ ಅಂಗವಾಗಿ ಮೇ. 14 ಮಂಗಳವಾರದಂದು ಮಾವಿನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಮತ್ತು ರಫ್ತು ಮಾರುಕಟ್ಟೆ ಕುರಿತು ತಾಂತ್ರಿಕ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರ ಕೊಪ್ಪಳದಿಂದ ವಿಜ್ಞಾನಿಗಳು ಆಗಮಿಸಿದ್ದರು. ರೈತ ವಿಜ್ಞಾನಿ ಶೇಷಗಿರಾವ್ರವರು ರೈತರಿಗೆ ರಫ್ತು ಮಾರುಕಟ್ಟೆ ಬಗ್ಗೆ ತಿಳಿಸಿಕೊಟ್ಟರು. ಈ ತಾಂತ್ರಿಕ ಸಂಕಿರಣದಲ್ಲಿ ರೈತರು ಹಣ್ಣನ್ನು ಯಾವ ಸಮಯದಲ್ಲಿ ಕಟಾವು ಮಾಡಬೇಕು, ಹೇಗೆ ಕಟಾವು ಮಾಡಬೇಕು ಮತ್ತು ವಗರ್ೀಕರಣ, ಬಿಸಿ ನೀರಿನಿಂದ ಉಪಚಾರ, ಸಂಗ್ರಹಣೆ ಮತ್ತು ಸಾಗಾಣಿಕೆ ಮಾಡುವ ವಿಧಾನ ಎಂಬುದರ ಬಗ್ಗೆ ಒತ್ತು ಕೊಡಲಾಗಿತ್ತು. ಮಾವು ಸರಿಯಾದ ಸಮಯದಲ್ಲಿ ಕಟಾವು ಮಾಡದಿದ್ದರೆ ರೈತರು ಶೇ.20 ರಿಂದ 30 ರಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ವೈಜ್ಞಾನಿಕವಾಗಿ ಹೇಗೆ ಮಾವನ್ನು ಮಾಗಿಸಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಇದರಿಂದಾಗಿ ಕಾಬರ್ೈಡ ನಂತಹ ವಿಷಕಾರಿ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಮೇಲೆ ಉಂಟು ಮಾಡುವ ದುಷ್ಪರಿಣಾಮ ಹಾಗೂ ನೈಸಗರ್ಿಕವಾಗಿ ಮಾಗಿಸಿದ ಹಣ್ಣಿನ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಉತ್ತಮ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಾಯಿತು. ಸಾವಯವ ಬೇಸಾಯ ಕ್ರಮಗಳ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗಿತ್ತು.
ವಿವಿಧ ತಳಿಯ ಮಾವಿನ ಕಸಿ ಮಾಡಿದ ಎರಡು ಮಾದರಿಗಳು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಇನ್ನೊಂದು ವಿಶೇಷವೆಂದರೆ, ಮಾವಿನಲ್ಲಿ ವೈವಿದ್ಯತೆ ಎನ್ನುವ ಮಾದರಿ. ಇದರಲ್ಲಿ ಒಟ್ಟಾರೆ 112 ಮಾವಿನ ತಳಿಗಳನ್ನು ಚೊಕ್ಕಾಗಿ ಜೋಡಿಸಲಾಗಿತ್ತು. ವೀಕ್ಷಕರಿಗೆ ತುಂಬ ಆಕರ್ಷಕವಾಗಿತ್ತಲ್ಲದೇ ಸೆಲ್ಫಿ ತೆಗೆಸಿಕೊಳ್ಳಲು ಮುಖ್ಯ ಆಕರ್ಷಕ ಬಿಂದು ಇದಾಗಿತ್ತು. ಒಟ್ಟಾರೆಯಾಗಿ ರೈತರಿಗೂ, ಗ್ರಾಹಕರಿಗೂ ಸುಮಾರು 12 ದಿನಗಳ ಕಾಲ ಮುದ ನೀಡಿದ ಈ ಬಾರಿಯ ಮಾವುಮೇಳ ಜಿಲ್ಲೆಯ ಜನರಲ್ಲಿ ಸ್ಮರಣೀಯವಾಗಿ ನಿಲ್ಲಲು ಯಶಸ್ವಿಯಾಗಿದೆ.