ಹಳ್ಳಿಗಳಲ್ಲಿ ಬಸ್‌ಗಳ ಕೊರತೆ: ಟಿಕೆಟ್ ದರ ಹೆಚ್ಚಳಕ್ಕೆ ಪ್ರಯಾಣಿಕರ ಆಕ್ರೋಶ

Shortage of buses in villages: Passengers outrage over ticket fare hike

ಸಂತೋಷ ಕುಮಾರ ಕಾಮತ  

ಮಾಂಜರಿ .05: ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಕೆಲ ಹಳ್ಳಿಗಳಲ್ಲಿ  ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದ ಸಮರ​‍್ಕ ಸೇವೆ ಸಿಗುತ್ತಿಲ್ಲ ಎಂಬ ಅಸಮಾಧಾನದ ನಡುವೆ ಇದೀಗ ಸರಕಾರ ಟಿಕೆಟ್ ದರ  ಹೆಚ್ಚಳಕ್ಕೆ ಮುಂದಾಗಿರುವುದಕ್ಕೆ ಪ್ರಯಾಣಿಕರ ಆಕ್ರೋಶ ವ್ಯಕ್ತವಾಗಿದೆ. 

ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ  ಹಲವು ಮಾರ್ಗಗಳಲ್ಲಿ ಬಸ್‌ಗಳಿಗೆ ಬೇಡಿಕೆ ಇದ್ದರೂ ಅದನ್ನು ಕೆ ಎಸ್ ಆರ್ ಟಿ ಸಿ ಇದೀಗ ಏಕಾಏಕಿ ಶೇ 1.15 ರಷ್ಟು ದರ ಏರಿಕೆಗೆ ಮುಂದಾಗಿರುವುದಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದೆ. ಇತ್ತ ಜಿಲ್ಲೆಯ ಜನರ ಅವಿಭಾಜ್ಯ ಅಂಗವಾಗಿರುವ ಖಾಸಗಿ ಬಸ್‌ಗಳಲ್ಲೂ ಟಿಕೆಟ್ ದರ ಏರಿಕೆಯಾಗುವ ಬಗ್ಗೆಯೂ ಸುಳಿವು ದೊರೆತಿದೆ. 

ಶಕ್ತಿ ಯೋಜನೆ ಜಾರಿ ಬಳಿಕ ಜಿಲ್ಲೆಯಲ್ಲಿ ಕೆಎಸ್‌ಆರ್ ಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವುದ ರೊಂದಿಗೆ ಆದಾಯ ದುಪ್ಪಟ್ಟಾಗಿದೆ. ಆದರೆ ಬೇಡಿಕೆ ಇರುವ ಮಾರ್ಗಗಳಿಗೆ ಬಸ್ ಸೇವೆ ನೀಡದ ಸಂಸ್ಥೆಈಗ ಪ್ರಯಾಣಿಕರಿಗೆ ದರ ಏರಿಕೆಯ ಏಕಾಏಕಿ  ಶಾಕ್ ನೀಡಿದೆ. 

ಸಾಲದ ಸುಳಿಗೆ ಸಿಲುಕಿರುವ ಸಾರಿಗೆ ನಿಗಮಗಳನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಬಸ್ ಪ್ರಯಾಣ ದರಹೆಚ್ಚಳ ಮಾಡಲು ಮುಂದಾಗಿದೆ. ಇತ್ತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟು ಪುರುಷರ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಜಿಲ್ಲೆಯಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಬೇಡಿಕೆಯ ಮಾರ್ಗಗಳಿಗೆ ಬಸ್ಸಿಲ್ಲ: ಕೋವಿಡ್ ಗಿಂತ ಮೊದಲು ಚಿಕ್ಕೋಡಿ ವಿಭಾಗದ ಎಲ್ಲ  ಘಟಕದಲ್ಲಿ 524 ಬಸಂಚರಿಸುತ್ತಿದ್ದವು. ಆದರೀಗ ಇದರ ಸಂಖ್ಯೆ 150ಕ್ಕೆ ಇಳಿದಿದೆ. ಈ ನಡುವೆ ಕೆಲವು ಮಾರ್ಗಗಳಿಗೆ ಬಸ್ ವ್ಯ ವಸ್ಥೆ ಮಾಡಲಾಗಿದೆಯಾದರೂ ಹಳೆಯ ಮಾರ್ಗ ಗಳೂ ಸೇರಿ ಇನ್ನೂ ಅನೇಕ ಮಾರ್ಗಗಳಿಗೆ ಬಸ ಸೇವೆ ಒದಗಿಸಬೇಕೆಂಬ ಬೇಡಿಕೆಯಿದೆ.  

ಚಿಕ್ಕೋಡಿಯಿಂದ ಬೆಳಗಾವಿ ಮತ್ತು ಬಿಜಾಪುರ್ ಅದೇ ಪ್ರಕಾರ ಮಹಾರಾಷ್ಟ್ರದ ಮಿರಾಜ್ ಸಾಂಗ್ಲಿ ಕೊಲ್ಲಾಪುರ್ ಮುಂಬೈ ಮಾರ್ಗಕ್ಕೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂಬ ಆರೋಪವಿದೆ. ಶಕ್ತಿ ಯೋಜನೆ ಬಳಿಕ ಜಿಲ್ಲೆಯಲ್ಲಿ 2024ರ ಡಿಸೆಂಬರ್ ತನಕ ಸುಮಾರು 89 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಕೋಟಿ ರೂ.ಆದಾಯ ಬಂದಿದೆ. ಹೀಗಿದ್ದೂ ಬೇಡಿ ಕೆಯ ಮಾರ್ಗಗಳಿಗೆ ಬಸ್ ಸೇವೆಯನ್ನು ನೀಡುವಲ್ಲಿ ಕೆಎಸ್ ಆರ್ ಟಿಸಿ ಹಿಂದೇಟು ಹಾಕುತ್ತಿದೆ. ಈ ಎಲ್ಲ ಸಮ ಸೈಗಳ ನಡುವೆ ಇದೀಗ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರು ಹೈರಾಣಾಗುವಂತಾಗಿದೆ 

ಖಾಸಗಿ ಬಸ್ ಮತ್ತು ಪ್ರವಾಸ ವಾಹನಗಳಲ್ಲಿ  ದರ ಏರಿಕೆ ಸಾಧ್ಯತೆ 

ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಪ್ರವಾಸಿ ವಾಹನಗಳ ಮತ್ತು ಬಸ್ ಟಿಕೆಟ್ ದರ ಏರಿಕೆ ಆಗುವ  ಸಾಧ್ಯತೆಯಿದೆ. ಚಿಕ್ಕೋಡಿ  ಉಪಯೋಗದ ವ್ಯಾಪ್ತಿಯಲ್ಲಿ ಬರುವ ಕೆಲ ಹಳ್ಳಿಗಳಲ್ಲಿ  ಸ್ಥಳೀಯ ಮಾರ್ಗಗ ಳಲ್ಲಿ ಖಾಸಗಿ ಬಸ್ ಗಳೇ ಹೆಚ್ಚಿದ್ದು, ಜನ ಕೆಎಸ್ ಆರ್ ಟಿಸಿ ಬಸ್ ಗಳಿಗಿಂತ ಹೆಚ್ಚಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಖಾಸಗಿ ಬಸ್ ದರ ಏರಿಕೆಯಾದರೆ ಜಿಲ್ಲೆಯಲ್ಲಿ ಅದು ದೊಡ್ಡಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಬಸ್ ದರ ಏರಿಕೆ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಖಾಸಗಿ ಬಸ್ ಮತ್ತು ವಾಹನ ಮಾಲೀಕರಾದ  

ಬಾಳಾಸಾಹೇಬ್ ಅರಳಿಕಟ್ಟಿ  ಖಾಸಗಿ ಬಸ್ ಮತ್ತು ವಾಹನ ಗಳ ನಿರ್ವಹಣೆಯೂ ಕಷ್ಟವಾಗಿದ್ದು, ದರ ಏರಿಕೆ ನಮಗೂ ಅನಿವಾರ್ಯ. ಸದ್ಯದಲ್ಲಿಯೇ ಪ್ರಯಾಣ ದರ ಹೆಚ್ಚುಸುವ  ತೀರ್ಮಾನಿಸಲಾಗುವುದು'' ಎಂದು ತಿಳಿಸಿದ್ದಾರೆ. ನೀಡಿದ್ದಾರೆ. ಆ ಮೂಲಕ ಖಾಸಗಿ ಬಸ್ ಮತ್ತು ಪ್ರಯಾಣ ವಾಹನ ದರ ಏರಿಕೆಯ ಸುಳಿವು ನೀಡಿದ್ದಾರೆ  


ಸರಕಾರಿ ನೌಕರರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇರುವುದರಿಂದ ಪ್ರತಿನಿತ್ಯ ತೊಂದರೆ ಆಗುತ್ತಿದೆ. ಆದರೆ ಈ ಸಮಯದಲ್ಲಿ ಬಸ್ ಸಕಾಲಕ್ಕೆ ಬಾರದೆ ತೊಂದರೆಯಾಗುತ್ತಿದೆ. ಡಿಪೊ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿದರೆ ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ. ಬಸ್ ಸೇವೆಯೇ ಸಮರ​‍್ಕವಾಗಿಲ್ಲದ ಮೇಲೆ ಯಾವ ಯೋಜನೆ ಜಾರಿ ಮಾಡಿದರೂ ಪ್ರಯೋಜನವಿಲ್ಲ, 

ಮಹಮ್ಮದ್ ತರಾಳ.... ಮಾಂಜರಿ  


2020 ನಂತರ ಬಸ್ ಟಿಕೆಟ್ ದರ ಏರಿಕೆ  ಆಗಿಲ್ಲ, ಈಗ ಶೇ.15 ರಷ್ಟು ಹೆಚ್ಚಳ ಆಗಿದೆ. 

ಚಿಕ್ಕೋಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ  ನೂತನ ಬಸ್‌ಞ ಮಾರ್ಗದಲ್ಲಿ ಬಸ್ ಗಳನ್ನು ಓಡಿಸಲಾಗುತ್ತಿದೆ. ಸ್ಥಗಿತಗೊಂಡ ಮಾರ್ಗಗಳ ಪುನರಾರಂಭಕ್ಕೆ ಬೇಡಿಕೆಯಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲಾಗುವುದು. 

ಶಾಸಕ ರಾಜು ಕಾಗೆ  

ಅಧ್ಯಕ್ಷರು ವಾಯುವ್ಯ  ಕರ್ನಾಟಕ ರಸ್ತೆ ಸಾರಿಗೆ ನಿಗಮ ಹುಬ್ಬಳ್ಳಿ