ಅವರಾತ್ರಿ ಅಮವಾಸ್ಯೆಯಿಂದ 5 ದಿನಗಳ ಕಾಲ ವೈಭವದಿಂದ ಜರುಗುವ ಚಡಚಣ ಜಾನುವಾರ ಜಾತ್ರೆ
ಚಡಚಣ 05: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನಿಗದಿಯಂತೆ ಫೆ.29 ರಿಂದ ಸತತ 5 ದಿನಗಳಕಾಲ ಜರಗುವದು ಎಂದು ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿಯ ಅಧ್ಯಕ್ಷ ಜೆ.ಡಿ.ಪಾವಲೆ ಅವರು ತಿಳಿಸಿದರು.
ಕಳೆದ 4 ವರ್ಷಗಳಿಂದ ಈ ವರ್ಷವು ಕೂಡಾ ಚಡಚಣದ ಜವಳಿ ಉದ್ಯಮಿಯಾದ ವಿವೇಕಾನಂದ ಚನ್ನಮಲ್ಲಪ್ಪ ಹಿಟ್ನಳ್ಳಿ ಅವರು ಅನ್ನಸಂತರ್ಪಣೆಯನ್ನು ಬಂದ ಭಕ್ತಾದಿಗಳಿಗೆ ವ್ಯವಸ್ಥೆ ಮಾಡಿಸಿದ್ದು ್ದ ಜಾತ್ರೆಗೆ ಬಂದ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಚಡಚಣ ಜಾನುವಾರ ಜಾತ್ರೆಯನ್ನು ಈ ಮೊದಲು ಎ.ಪಿ.ಎಮ್.ಸಿ ಸಿಂದಗಿ,ಇಂಡಿ,ಚಡಚಣ ಅವರು ನಡೆಸಿಕೊಂಡು ಬಂದಿದ್ದರು,ಕರೋನಾ ಕಾಲದಲ್ಲಿ ಕರೋನಾ ಮುಂಜಾಗ್ರತೆ ವಹಿಸಿ ಜಾತ್ರೆ ಎ.ಪಿ.ಎಮ್.ಸಿ ನಡೆಸಲಿಲ್ಲ,ಅದಾದನಂತರ ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿಯವರು 2023 ಹಾಗೂ 2024 ರಲ್ಲಿ ಪ.ಪಂ.ಸಹಕಾರದಿಂದ ಜಾತ್ರೆ ಮಾಡಿದ್ದರು,ಜಾತ್ರೆ ನಡೆಸಬೇಕಿದ್ದ ಎ.ಪಿ.ಎಮ್.ಸಿ ಅವರು ಹಿಂದೆ ಸರಿದದ್ದರಿಂದ ಈ ವರ್ಷ ಪ.ಪಂ.ಗೆ ನೂತನ ಸದಸ್ಯರು ಆಯ್ಕೆ ಆಗಿದ್ದರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವಿಳಂಬದಿಂದ ಈ ವರ್ಷವು ಶ್ರೀ ಸಂಗಮೇಶ್ವರ ದೇವಸ್ಥಾನದ ಕಮೀಟಿಯವರೆ ಬೇರೆ ಕಮೀಟಿಯನ್ನು ಅಂದರೆ ಶ್ರೀ ಸಂಗಮೇಶ್ವರ ಜಾತ್ರಾ ಕಮೀಟಿ ಎಂದು ಮಾಡಿ ಪ.ಪಂ.ಯ ಸದಸ್ಯರ ಸಹಕಾರದಿಂದ ಚಡಚಣ ಜಾತ್ರೆ ನಡೆಸುತ್ತಿದ್ದು ಐದು ದಿನಗಳ ಕಾಲ ಜಾತ್ರೆ ನಡೆಯಲಿದೆ.
ಶ್ರೀ ಸಂಗಮೇಶ್ವರ ದೇವಸ್ಥಾನದ ಕಮೀಟಿಯವರು ದಿನಾಂಕ 03 ಶುಕ್ರವಾರ 4.ಗಂ.ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಜಾತ್ರೆಯ ನಿಮಿತ್ಯ ಪೂರ್ವಭಾವಿ ಸಭೆ ಕರೆದಿದ್ದರು. ಸಬೇಯಲ್ಲಿ ಪ.ಪಂ.ಸದಸ್ಯರು ಹಾಗೂ ಗ್ರಾಮಸ್ಥರು 2024 ರಲ್ಲಿ ನಡೆದ ಜಾತ್ರೆಯಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನದ ಕಮೀಟಿಯವರು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಮಾಡಿ ಎಲ್ಲ ಕಡತಗಳನ್ನು ತರಲು ಹೇಳಿದ ಪರಿಣಾಮ ಸಭೆಯನ್ನು ದಿ 04 ಶನಿವಾರ ಸಂ.5.00ಗಂಟೆಗೆ ಪುನಃ ಇಟ್ಟುಕೊಳ್ಳಲಾಯಿತು.
ಸಭೆಯಲ್ಲಿ ಸರಿಯಾದ ದಾಖಲಾತಿಗಳು ತರದೆಇದ್ದಾಗ ಜನರ ಆಕ್ರೋಶ ಮುಗಿಲುಮುಟ್ಟಿತ್ತು.ದಾಖಲಾತಿ ತಂದು ಓದುತ್ತಿರುವಾಗ ಕೆಲವೊಂದು ಲೋಪಗಳನ್ನು ಶ್ರೀಶೈಲ ಭಮಶೆಟ್ಟಿ ಸರ್ ಹಾಗೂ ಪ.ಪಂ.ಸದಸ್ಯ ಗಂಟಗಲಿ ಅವರು ತಕರಾರು ತೆಗೆದು ಸರಿಯಾಗಿ ತಿಳಿಸಿ ಹೇಳುವಂತೆ ಕೇಳಿದರು ಅದಕ್ಕೆ ತಡಪಡಿಸಿದ ಖಜಾಂಚಿ ಬ್ಯಾಂಕಿಲ್ಲಿ ಕೇವಲ 10 ಲಕ್ಷ ರೂಪಾಯಿ ಮಾತ್ರ ಡಿಪೋಜಿಟ್ ಇವೆ ಎಂದು ಸುಳ್ಳು ಹೇಳಿದರು ತಕ್ಷಣ ಸಾವರಿಸಿ ಕೊಂಡ ಸದಸ್ಯ ಮಲ್ಲಿಕಾರ್ಜುನ ಹಿಟ್ನಳ್ಳಿ 10+15 ಒಟ್ಟು 25 ಲಕ್ಷ ರೂಪಾಯಿಗಳಿವೆ ಎಂದು ಹೇಳಿದರು ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಮಾನಗಳು ಬಂದೊದಗಿತು.ಅದಲ್ಲದೆ ಮುಜುರಾಯಿ ಇಲಾಖೆಯಿಂದ ಬಂದ ಹಣದ ಲೆಕ್ಕ ತೋರಿಸಲಿಲ್ಲ.
ಸಾದಿಲವಾರ ಹೆಸರಲ್ಲಿ ಸುಮಾರು 80ಸಾವಿರ ರೂ ಖರ್ಚಾಗಿದೆ ಎಂದಾಗ ಲಕ್ಕಪತ್ರ ಇಡದೆ ಇಷ್ಟೊಂದು ಸಾವಿರ ಖರ್ಚಾಗಿದ್ದು ಇದು ಶುದ್ಧ ಸುಳ್ಳು ಹಾಗಾಗಿ ಶ್ರೀಸಂಗಮೇಶ್ವರ ದೇವಸ್ಥಾನದ ಕಮೀಟಿಯವರನ್ನು ಕೂಡಲೆ ತೆಗೆದುಹಾಕಬೇಕೆಂದು ಮತ್ತು ಎಲ್ಲ ಸಮೂದಾಯದ ಜನರನ್ನು ಒಬ್ಬರಂತೆ ಸೇರಿಸಿ ನೂತನ ಕಮೀಟಿಯನ್ನು ರಚಿಸುವಂತೆ ಕಾಂತುಗೌಡ ಪಾಟೀಲ ಹಾಗೂ ರಾಜು ಕೋಳಿ,ಶಾಂತುಗೌಡ ,ಮಹೇಶ ಶಿಂಧೆ,ಸಿದ್ದು ಭಮಶೆಟ್ಟಿ ಹಾಗೂ ಸಾರ್ವಜನಿಕರೆಲ್ಲರು ಒಗ್ಗೋರಿಲಿನಿಂದ ಕಮೀಟಿಗೆ ಹೇಳಿದರು.ಅದರಂತೆ ಕಮೀಟಿ ಅಧ್ಯಕ್ಷ ಜೆ.ಡಿ.ಪಾವಲೆ ಹಾಗೂ ಹಿರಿಯ ಜೀವಿ ಬಾಬುಗೌಡ ಪಾಟೀಲ ಅವರು ಜಾತ್ರೆ ಮುಗಿದ ನಂತರ ಹೊಸ ಕಮೀಟಿಯವರನ್ನು ನೇಮಿಸಲಾಗುವದು ಎಂದು ಭರವಸೆ ಕೊಟ್ಟರು.
ಶ್ರೀ ಸಂಗಮೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷ ಹಾಗೂ ಸದಸ್ಯರು ಕೆಲವು ದಿನಗಳ ಹಿಂದೆ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿರುದ್ಧ ಮಾಧ್ಯಮದಲ್ಲಿ ಬರುವಹಾಗೆ ಇಲ್ಲ ಸಲ್ಲದ ಆರೋಪ ಮಾಡಿದ್ದರು ಅದರ ವಿಷಯ ಬಂದಾಗ ಅಧ್ಯಕ್ಷ ಜೆ.ಡಿ.ಪಾವಲೆ ಕ್ಷಮೆ ಯಾಚಿಸಿದರು ಇನ್ನುಮುಂದೆ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿರುದ್ಧ ಎನು ಮಾತನಾಡುವದಿಲ್ಲ ಎಂದು ಕ್ಷಮೆಕೇಳಿದರು.
ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವಿರುದ್ಧ ಆರೋಪ ಮಾಡಿರುವ ಅಧ್ಯಕ್ಷ ಜೆ.ಡಿ.ಪಾವಲೆಅವರು ಒತ್ತಡ ಹೇರಿ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಸಂಭಂಧಿಗಳಿಗೆ ನೋಕರಿ ಪಡೆದಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ಒಲಯದಲ್ಲಿ ಕೇಳಿಬಂದಿದ್ದು ಅದರ ಬಗ್ಗೆ ನಂತರ ಕ್ರಮ ತೆಗೆದುಕೊಳ್ಳ ಲಾಗುವದು ಎಂದು ಸಾರ್ವಜನಿಕರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಚಡಚಣ ಪ.ಪಂ.ಯ ಸದಸ್ಯರು, ಸುತ್ತಲಿನ ಗ್ರಾಮದ ರೈತರು,ಚಡಚಣ ವ್ಯಪಾರಸ್ಥರು ಇದ್ದರು.