ಮೈಂಡ್ಗೇಮ್ ಆಟಕ್ಕೆ ಸಜ್ಜಾದ ಕೊಹ್ಲಿ-ಚಹಾಲ್

ಮ್ಯಾಂಚೆಸ್ಟರ್ 03: ಇಂದಿನಿಂದ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಬಹುನಿರೀಕ್ಷಿತ ಕ್ರಿಕೆಟ್ ಟೂನರ್ಿ ಆರಂಭಗೊಳ್ಳಲಿದ್ದು, ರಾತ್ರಿ ಉಭಯ ತಂಡಗಳು ಮೊದಲ ಟಿ-20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ಈ ಮಧ್ಯೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಸ್ಪೀನ್ ಬೌಲರ್ ಯಜುವೇಂದ್ರ ಚಹಾಲ್ ಎದುರಾಳಿ ತಂಡದ ಎದುರು ಮೈಂಡ್ಗೇಮ್ ಆಟವಾಡಲು ಸಜ್ಜಾಗಿದ್ದಾರೆ. ಕಳೆದ ವರ್ಷ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಆಟಗಾರರ ವಿರುದ್ಧ ಸಮರ ಸಾರಿದ್ದ ಚಹಾಲ್ ಪ್ರಮುಖ ಆರು ವಿಕೆಟ್ ಪಡೆದುಕೊಂಡು ಮಿಂಚಿದರು. ಸದ್ಯ ಕೂಡ ಅದೇ ರೀತಿಯ ಪ್ರದರ್ಶನ ನೀಡಲು ಮುಂದಾಗಿರುವ ಅವರು, ವಿರಾಟ್ ಬಾಯ್ ಹಾಗೂ ನಾನು ಈಗಾಗಲೇ ವಿರೋಧಿ ತಂಡವನ್ನು ಕಟ್ಟಿ ಹಾಕುವ ಕುರಿತ ಚಚರ್ೆ ನಡೆಸಿದ್ದು, ಪ್ಲಾನ್ ಸಿದ್ಧಪಡಿಸಿದ್ದಾಗಿ ತಿಳಿಸಿದ್ದಾರೆ. 

ಇಂಗ್ಲೆಂಡ್ ಟೂನರ್ಿಗೆ ತಾನು ಪ್ರತ್ಯೇಕವಾಗಿ ಸಿದ್ಧತೆ ನಡೆಸಿದ್ದು, ಭಾರತದಲ್ಲಿ ನಡೆದ ಸರಣಿಯಲ್ಲೂ ಅವರ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದೇನೆ. ಆದರೆ ವಿದೇಶಿ ನೆಲದ ಪಿಚ್ ವ್ಯತ್ಯಾಸವಾಗುವ ಕುರಿತ ಅರಿವು ನನಗಿದೆ. ಸದ್ಯ ನನ್ನ ಬೌಲಿಂಗ್ನಲ್ಲಿ ಕೆಲ ವೇರಿಯೆಷನ್ಸ್ ಕಂಡುಕೊಂಡಿದ್ದು, ಎರಡು ರೀತಿಯ ಎಸೆತ ಪ್ರಯೋಗಿಸುವ ಸಾಮಥ್ರ್ಯವಿದೆ ಎಂದಿದ್ದಾರೆ.  

ಇದೇ ವೇಳೆ,  ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಎಬಿ ಡಿಲಿಯಸರ್್ ಸಲಹೆಗಳನ್ನು ನೆನಪಿಸಿದ ಚಹಾಲ್, ಎಬಿಡಿ ನನಗೆ ಪಿಚ್ ವರ್ತನೆ ಸೇರಿದಂತೆ, ಆನ್ಫೀಲ್ಡ್ ಅಲ್ಲದೇ ಡ್ರೆಸ್ಸಿಂಗ್ ರೂಮ್ನಲ್ಲೂ ಹಲವು ಸಲಹೆ ನೀಡಿದ್ದಾರೆ.  ಟೂನರ್ಿಗೆ ಶುಭ ಸಂದೇಶ ರವಾನಿಸಿದ್ದು, ವಿಡಿಯೋ ಕಾಲ್ ಮೂಲಕ ಹಲವು ಬಾರಿ ಚಚರ್ೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.