ಕಂಪ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಂಚೆಪತ್ರ ಬರೆದು ಅಂಚೆಪೆಟ್ಟಿಗೆ ಹಾಕುವ ಅಭಿಯಾನ

ಕಂಪ್ಲಿ 13: ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಂ ಸಹೋದರರಿಗೆ ಮಾರಕವಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಯಾವುದೇ ಭಯ ಸಲ್ಲದು ನಾವೆಲ್ಲಾ ಮುಸ್ಲಿಂಮರ ಪರವಾಗಿದ್ದೇವೆ ಎಂದು ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಹೇಳಿದರು 

ಪುರಸಭೆ ಮುಂಭಾಗದಲ್ಲಿ ಸೋಮವಾರ ಕಂಪ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ 2019ರ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಸಹಿ ಸಂಗ್ರಹ ಮತ್ತು ಅಂಚೆಪತ್ರ ಬರೆದು ಅಂಚೆಪೆಟ್ಟಿಗೆ ಹಾಕುವ ಅಭಿಯಾನದಲ್ಲಿ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷಗಳು ವಿನಾಕಾರಣ ವಿರೋಧಿಸುತ್ತಿವೆ. 

ನಿಜ ಸಂಗತಿಯ ಕುರಿತು ಜಾಗೃತಿ ಮೂಡಿಸಲು ಮನೆ ಮನೆಗೆ ತೆರಳಿ ಮಾಹಿತಿ ಒದಗಿಸಿದ್ದವೇ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ಪಕ್ಷ ವಿರೋಧಿಸುವ ಮೂಲಕ ಮುಸ್ಲಿಂ ಸಮುದಾಯದವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು. 

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಯರ್ರಂಗಳ್ಳಿ ತಿಮ್ಮಾರೆಡ್ಡಿ ಸಿಎಎ ಬೆಂಬಲಕ್ಕೆ ಸಹಿ ಸಂಗ್ರಹಕ್ಕೆ ಅಭಿಯಾನಕ್ಕೆ ಚಾಲನೆ ನೀಡಿ, ಭಾರತೀಯರ ಸುರಕ್ಷತೆಗಾಗಿ ಇರುವ ಸಿಎಎ ಕಾಯ್ದೆಯನ್ನು ಬೆಂಬಲಿಸಿ  ಮೋದಿಯವರ ಕೈ ಬಲಪಡಿಸಬೇಕಾಗಿದೆ. ಅಂಚೆಪತ್ರ ಬರೆದು ಪ್ರಧಾನಿ ವಿಳಾಸಕ್ಕೆ ರವಾನಿಸುವಲ್ಲಿ ಪ್ರತಿಯೊಬ್ಬರು. 

ಮುಂದಾಗಬೇಕೆಂದು ಎಂದರು ಸಿಎಎ ಬೆಂಬಲಿಸಿ ಸಹಿ ಸಂಗ್ರಹಿಸಲಾಯಿತು. ಪ್ರಧಾನಿ ಮೋದಿಯವರಿಗೆ ಬರೆದ ಅಂಚೆಪತ್ರಗಳನ್ನು ಪ್ರಧಾನ ಅಂಚೆಕಛೇರಿಯ ಅಂಚೆಪೆಟ್ಟಿಗೆಗೆ ಹಾಕಿದರು. ಬಿಜೆಪಿ ಪ್ರಮುಖರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ, ಜ್ಯೋತಿ, ಡಿ.ಶ್ರೀಧರಶ್ರೇಷ್ಠಿ, ಅಗಳಿ ಪಂಪಾಪತಿ, ಕೊಡಿದಲ ರಾಜು, ಸಿ.ಆರ್.ಹನುಮಂತ, ಎಸ್.ಎಸ್.ಎಂ.ನಾಗರಾಜ, ವಿ.ವಿದ್ಯಾಧರ, ಟಿ.ವಿ.ಸುದರ್ಶನರೆಡ್ಡಿ, ಹೂಗಾರ ರಮೇಶ್,ನಾಯಕರ ಮರೆಣ್ಣ, ಬಿ.ಕೆ.ವಿರುಪಾಕ್ಷಿ, ವಿರುಪಣ್ಣ, ಬಿ.ವೆಂಕಟೇಶ್, ಎ.ರೇಣುಕಪ್ಪ, ಗಂಗಣ್ಣ ಇತರರಿದ್ದರು