ಕಂಪ್ಲಿ: ಅಂಗಡಿಗಳನ್ನು ಮುಚ್ಚಿ ಸಿಐಟಿಯುದಿಂದ ಕಂಪ್ಲಿ ಸಾರ್ವತ್ರಿಕ ಮುಷ್ಕರ

ಲೋಕದರ್ಶನ ವರದಿ ಕಂಪ್ಲಿ 08: ಇಲ್ಲಿನ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಕಂಪ್ಲಿ ತಾಲ್ಲೂಕು ಸಂಚಲನ ಸಮಿತಿಯು ಬುಧವಾರ ಕಾಮರ್ಿಕ ವರ್ಗದ ನೇತೃತ್ವದಲ್ಲಿ ಹೊಸ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿ ಪ್ರಮುಖ ಬೀದಿಗಳಲ್ಲಿ ಸಾಗಿ ಸಾಗುವ ಹಾದಿಯಲ್ಲಿನ ವರ್ತಕರು ಅಂಗಡಿಗಳನ್ನು ಮುಚ್ಚಿ ಎಲ್ಲರೂಸಹಕರಿಸಿದರು. ಪ್ರತಿಭಟನಾ ರ್ಯಾಲಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.. ಕಂಪ್ಲಿ ಸಾರ್ವತ್ರಿಕ ಮುಷ್ಕರ ನಡೆಸಿತು. ರ್ಯಾಲಿ ಸಮಾವೇಶದಲ್ಲಿಸಿಪಿಐಎಂ ಜಿಲ್ಲಾ ಕಾರ್ಯದಶರ್ಿಎಚ್.ತಿಪ್ಪಯ್ಯ ಮಾತನಾಡಿ ಕಟ್ಟಡ ಕಾರ್ಮಿಕ ವರ್ಗದವರಿಗೆ ನೀವೇಶನನೀಡಬೇಕು ಗ್ರಾಮ ಪಂಚಾಯಿತಿ ಸಿಂಬದ್ದಿಗಳ ಬಾಕಿಯಿರುವ ವೇತನ ನೀಡಬೇಕು ದೇವದಾಸಿ ಮಹಿಳಾ ಕುಟುಂಬಕ್ಕೆ 2ಎಕರೆ ಭೂಮಿ, 3000ರೂ.ಗಳ ಮಾಸಿಕ ವೇತನ .ಮತ್ತು ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಶಿಕ್ಷಣ ಆರಂಭಿಸಿ. . ರಾಷ್ಟ್ರೀಯ ಸಮಾನ ಕನಿಷ್ಠ ವೇತನವನ್ನಾಗಿ 21,000ರೂ.ಗಳನ್ನು ನೀಡಿ. ನೀಡಬೇಕು ಕನಿಷ್ಠ 10,000ರೂ.ಗಳ ಖಾತ್ರಿ ಪಿಂಚಣಿ ನೀಡಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಭಯ ಸರ್ಕಾರಗಳು ನಿಯಂತ್ರಿಸಬೇಕು. ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸಬಾರದು. ಕಂಪ್ಲಿ ಕೋಟೆಯ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸಬೇಕು. ಸದ್ಯದ ಸೇತುವೆ ಮೇಲೆ ಬಾರಿ ವಾಹನಗಳ ಸಂಚಾರ ನಿಷೇಧಿಸಬೇಕು ದೇಶದಲ್ಲಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ.ಮತ್ತು ರಾಜ್ಯ ಸಕರ್ಾರಗಳು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರುಸಿಐಟಿಯು ತಾಲ್ಲೂಕು ಸಂಚಾಲಕ ಬಂಡಿ ಬಸವರಾಜ ಮಾತನಾಡಿ, ಮೋದಿಯವರ ಸರ್ಕಾರ ಬಂಡವಾಳಶಾಹಿ ಪರವಾಗಿದೆ.ಬಡವರ ಮಾಧ್ಯಮ ವರ್ಗದ ಮೋದಿಯವರ ಸರ್ಕಾ ರ ಇಲ್ಲ ರಸ್ತೆ ಸಾರಿಗೆ ಸುರಕ್ಷತಾ ಮಸೂದೆ ಚಾಲಕ ಮತ್ತು ಮಾಲಕರಿಗೆ ಶಾಪವಾಗಿ ಪರಿಣಮಿಸುತ್ತದೆ ಎಂದರು ಪ್ರತಿಭಟನಾ ರ್ಯಾಲಿಯಲ್ಲಿ ಸಿಐಟಿಯು ಸಹ ಸಂಚಾಲಕರಾದ ಡಿ.ಮುನಿಸ್ವಾಮಿ, ಮಾನ್ವಿ ಮಹೇಶ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಐ.ಹೊನ್ನೂರಸಾಬ್, ಉಪಾಧ್ಯಕ್ಷ ರಾಜಭಕ್ಷಿ, ಕಾರ್ಯದರ್ಶಿ ಆರ್.ನಾಗರಾಜ, ಅಂಗನವಾಡಿ ಹಾಗೂ ಸಹಾಯಕಿಯರ ತಾಲ್ಲೂಕು ಅಧ್ಯಕ್ಷೆ ಎಚ್.ಮಂಜುಳಾ, ಕಾರ್ಯದರ್ಶಿ ಬಿ.ಕೆ.ಉಮಾದೇವಿ, ಉಪಾಧ್ಯಕ್ಷೆ ಅನುರಾಧ, ರಾಧಬಾಯಿ, ಗ್ರಾಪಂ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಡೆಯ್ಯಸ್ವಾಮಿ, ಕಾರ್ಯದರ್ಶಿ ಮೆಟ್ರಿ ಶಿವು, ಮುಖಂಡರಾದ ಲಕ್ಷ್ಮಣ, ರವಿ, ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಖುರ್ಷಿದಬೇಗಂ, ಕಾರ್ಯದರ್ಶಿ ರಮೇಶ್, ಹಮಾಲಿ ಫೆಡರೇಷನ್ ಸೇರಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಂಪ್ಲಿಯಲ್ಲಿ ಕಾರ್ಮಿಕ ವರ್ಗಗಳ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾರ್ಯಾಲಿ ಜರುಗಿತು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ತಿಪ್ಪಯ್ಯ, ಬಂಡಿ ಬಸವರಾಜ್, ಮಾನ್ವಿ ಮಹೇಶ್, ಐ.ಹೊನ್ನೂರಸಾಬ್, ರಾಜಾಭಕ್ಷಿ, ಎಚ್.ಮಂಜುಳಾ, ಇತರರಿದ್ದರು.