ಲೋಕದರ್ಶನ ವರದಿ
ಕಂಪ್ಲಿ 06: ಇಲ್ಲಿನ ಶ್ರೀಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದಿಂದ, ಸಕರ್ಾರಿ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ನೇತ್ರ ಶಸ್ತ್ರ ಚಿಕಿತ್ಸೆ ಪೂರ್ವ ನೇತ್ರ ಪರೀಕ್ಷೆ ನಡೆಯಿತು .7 ಮತ್ತು 8ರಂದು 20ನೇ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯುವದರಿಂದ ಹಿನ್ನಲೆಯಲ್ಲಿ ಮುಂಚಿತವಾಗಿ ಶಸ್ತ್ರ ಚಿಕಿತ್ಸೆಗೆ ನೇತ್ರ ತಪಾಸಣೆ ಜರುಗಿತು ಬಳಗದ ಕಾರ್ಯದರ್ಶಿ ಡಾ.ಜಂಬುನಾಥ ಗೌಡ್ರು ಮಾತನಾಡಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೇವಾಶ್ರಮ ಕಣ್ಣಿನ ಆಸ್ಪತ್ರೆ ತಂಡದವರಿಂದ ಉಚಿತವಾಗಿ ಹೊಲಿಗೆರಹಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಲೆನ್ಸ್ ಅಳವಡಿಸುವ ವಿನೂತನ ಶಸ್ತ್ರ ಚಿಕಿತ್ಸೆ ಏರ್ಪಡಿಸಲಾಗಿದೆ ಅರ್ಹ ರೋಗಿಗಳಿಗೆ ಫೆ.7 ಮತ್ತು 8ರಂದು ಎರಡು ದಿನಗಳ ಕಾಲ ಶಸ್ತ್ರಚಿಕಿತ್ಸೆ ನಡೆಸುತ್ತವೆ ಔಷಧಿ, ಕನ್ನಡಕ ಅವಶ್ಯಕ ಪರಿಕರಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.
ಐದು ನೂರಕ್ಕೂ ಹೆಚ್ಚು ರೋಗಿಗಳು ನೇತ್ರ ತಪಾಸಣೆಗೆ ಆಗಮಿಸಿದ್ದರು. ಶಸ್ತ್ರ ಚಿಕಿತ್ಸೆಗೆ ಅಗತ್ಯ ಪೂರಕ ಆರೋಗ್ಯ ತಪಾಸಣೆ ಮಾಡಲಾಯಿತು. ವೀರಶೈವ ಸಂಘ, ವಾಸವಿ ಯುವಜನ ಸಂಘ ಸೇರಿ ನಾನಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸೇವಾಕರ್ತರಾಗಿ ಸೇವೆ ಸಲ್ಲಿಸಿದರು.
ಹೊಸಪೇಟೆ 100ಹಾಸಿಗೆ ಆಸ್ಪತ್ರೆ ನಿವೃತ್ತ ನೇತ್ರ ತಜ್ಞ ಡಾ.ಎಚ್.ಎರ್ರೆಪ್ಪ, ನೇತ್ರ ಪರೀಕ್ಷಕರಾದ ಎಚ್.ಪ್ರಕಾಶಗೌಡ, ಪ್ರಭು, ತಿಪ್ಪೇಸ್ವಾಮಿ ರೋಗಿಗಳ ನೇತ್ರಗಳನ್ನು ಪರೀಕ್ಷಿಸಿದರು. ವೈದ್ಯಾಧಿಕಾರಿ ಡಾ.ರವೀಂದ್ರ ಕನಕೇರಿ, ಬಳಗದ ಅಧ್ಯಕ್ಷ ಜಿ.ಲಿಂಗನಗೌಡ, ಪ್ರಮುಖರಾದ ಟಿ.ಕೊಟ್ರೇಶ್, ಕೆ.ಎಂ.ಹೇಮಯ್ಯಸ್ವಾಮಿ, ಕೆ.ಎಂ.ವೀರಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಎಚ್.ಗವಿಸಿದ್ದಪ್ಪ, ಕೆ.ವಿರುಪಾಕ್ಷಪ್ಪ ಸೇರಿ ಬಳಗದ ಅನೇಕರು ಪಾಲ್ಗೊಂಡಿದ್ದರು.