ಕೃಷ್ಣ ಮೇಲ್ದಂಡೆ ಯೋಜನೆಯ ಸಾಧಕ-ಬಾಧಕಗಳು
ಹಂಪಿ 08: ಕನ್ನಡ ವಿಶ್ವವಿದ್ಯಾಲಯ, ಹಂಪಿ. ಚರಿತ್ರೆ ವಿಭಾಗದ ವತಿಯಿಂದ ದಿನಾಂಕ 07.01.2025 ರಂದು ಪಾಕ್ಷಿಕ ಮಾತು-40 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಯಾದ ಪವಾಡಪ್ಪ ಮನುಗುಳಿ ಅವರು ಕೃಷ್ಣ ಮೇಲ್ದಂಡೆ ಯೋಜನೆ ಉಗಮ, ಬೆಳವಣಿಗೆಯ ಹಾದಿಯನ್ನು ತಿಳಿಸುವುದರ ಜೊತೆಗೆ ಬಾಗಲಕೋಟೆ ಜಿಲ್ಲೆಯ ಚಾರಿತ್ರಿಕ ಅಂಶಗಳನ್ನು ನಿರೂಪಿಸುವುದರ ಮೂಲಕ ಕೃಷ್ಣ ಮೇಲ್ದಂಡೆ ಯೋಜನೆಯು 1889ರಲ್ಲಿ ಆರಂಭಗೊಂಡಿತು. ಈ ಯೋಜನೆಯು ಹೈದರಾಬಾದ್ ಸಂಸ್ಥಾನದ ಅಧೀನದಲ್ಲಿನ ರಾಯಚೂರು ಹಾಗೂ ಕಲ್ಬುರ್ಗಿ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ನೀಲನಕ್ಷೆಯನ್ನು ಸಹ ರೂಪಿಸಲಾಗಿತ್ತು. ಆದರೆ 1956 ರಾಜ್ಯ ಪುನರ್ ವಿಂಗಡಣೆಯಿಂದಾಗಿ ಮೈಸೂರು ರಾಜ್ಯಕ್ಕೆ ಈ ಎರಡು ಜಿಲ್ಲೆಗಳು ಸೇರೆ್ಡಗೊಂಡೆವು ನಂತರ ಮೈಸೂರು ರಾಜ್ಯ ಸರ್ಕಾರ ಕೃಷ್ಣ ಮೇಲ್ದಂಡೆ ಯೋಜನೆಗೆ ಅನುಷ್ಠಾನಕ್ಕೆ ತನಿಖೆಯನ್ನು ಆರಂಭಿಸಿತು. ಪರಿಣಾಮವಾಗಿ ಸಾವಿರ 1956 ಮೇ 22 ರಂದು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ಯೋಜನೆಗೆ ಅಡಿಪಾಯ ಹಾಕಿದರು. ಈ ಯೋಜನೆಯಿಂದ ಬಾಗಲಕೋಟೆ ಜಿಲ್ಲೆಯ 201 ಗ್ರಾಮಗಳು ಮುಳುಗಡೆಯಾಗಿರುವ ಸಾಧಕ ಬಾಧಕಗಳನ್ನು ತಿಳಿಸುವುದರ ಜೊತೆಗೆ ಅದರ ಪುನರ್ವಸತಿ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ವಿವರಿಸಿದರು.
ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃಷ್ಣ ಮೇಲ್ದಂಡೆ ಯೋಜನೆಯಿಂದ ಮುಳುಗಡೆಯಾದ ಜನರಿಗೆ ಸರ್ಕಾರವು ಪುನರ್ವಸತಿ ಸೌಕರ್ಯಗಳನ್ನು ನೀಡಿದ ಕುರಿತು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಪ್ರೊ. ಕೆ. ಮೋಹನ್‌ಕೃಷ್ಣ ರೈ ಅವರು ಹಾಗೂ ಹಿರಿಯ ಪ್ರಾಧ್ಯಾಪಕರು ಪ್ರೊ. ಎನ್.ಚಿನ್ನಸ್ವಾಮಿ ಸೋಸಲೆ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಂಚಾಲಕರು ಪ್ರದೀಪ್ ಹೆಚ್ ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.