ಯಮಕನಮರಡಿ 08: ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರಾದ ಸತೀಶ ಅಣ್ಣಾ ಜಾರಕಿಹೋಳಿ ಅವರ ಅನುದಾನದ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ದಿ.07 ರಂದು ಚಿಕ್ಕೋಡಿ ಸಂಸದರಾದ ಪ್ರಿಯಾಂಕ ಜಾರಕಿಹೋಳಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೇಸ ಸಮೀತಿ ಯುವಪ್ರದಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೋಳಿ ಅವರು ಚಾಲನೆ ನೀಡಿದರು.
ಸ್ಥಳೀಯ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಮಕನಮರಡಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಶಾಲಾ ಕೋಠಡಿಗಳಿಗಾಗಿ 4 ಕೋಟಿ ರೂಪಾಯಿ ಹೂನ್ನೂರು ಮಾಸ್ತಿಹೋಳಿ ಸರ್ಕಾರಿ ಶಾಲೆಗೆ 3 ಕೋಟಿ ರೂ, ಗೋಟುರು ಗ್ರಾಮದ ಪ್ರವಾಸಿ ಮಂದಿರಕ್ಕೆ 3 ಕೋಟಿ ರೂ, ಕುರಣಿ ಇಂದ ಕೋಚರಿ ಬ್ಯಾರೇಜ ವರೆಗೆ ರಸ್ತೆ ಸುಧಾರಣೆಗಾಗಿ 4 ಕೋಟಿ ರೂ, ಹಾಗೂ ಹಂಚಿನಾಳ ಗ್ರಾಮದಿಂದ ಹಳೆ ಗುಡಗನಹಟ್ಟಿವರೆಗೆ ರಸ್ತೆ ಸುಧಾರಣೆಗೆ 6 ಕೋಟಿ, ಮಣಗುತ್ತಿ ಗ್ರಾಮದಿಂದ ಅಳದಾಳ ವರೇಗೆ ರಸ್ತೆ ಕಾಮಗಾರಿಗೆ 30 ಕೋಟಿ ರೂ, ದಡ್ಡಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗಾಗಿ 7 ಕೋಟಿ 50 ಲಕ್ಷರೂ, ಶೆಟ್ಟಿಹಳ್ಳಿ ಗ್ರಾಮದಿಂದ ದಡ್ಡಿವರೆಗೆ ರಸ್ತೆ ಕಾಮಗಾರಿಗಾಗಿ 4.ಕೋಟಿ 60 ಲಕ್ಷ ರೂ, ಮಂಜೂರು ಮಾಡಲಾಗಿದ್ದು ಒಟ್ಟು ಅಂದಾಜು ವೆಚ್ಚ 62 ಕೋಟಿ 10 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ಗಳಿಗೆ ನೋಟಬುಕ್ ವಿತರಣೆ ಮಾಡಿ ಪ್ರಿಯಾಂಕ ಜಾರಕಿಹೋಳಿ ರವರು ಮಾತನಾಡುತ್ತಾ ಹಳ್ಳಿಗಳೇ ದೇಶದ ಜೀವಾಳ ಹಳ್ಳಿಗಳು ಅಭಿವೃದ್ಧ ಹೊಂದಿದಲ್ಲಿ ದೇಶ ಅಭಿವೃದ್ದಿ ಆಗಲೂ ಸಾಧ್ಯ ಎಂಬ ಗಾಂಧಿಜಿರವರ ಮಾತು ಇಂದಿಗೂ ನಿಜವಾಗಿದೆ ಎಂದು ಹೇಳಿದರು. ತಂದೆಯವರಾದ ಸತೀಶ ಜಾರಕಿಹೋಳಿರವರು ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧ್ದಿಯೇ ಕ್ರಾಂತಿಯನ್ನಾಗಿ ಮಾಡಿದ್ದಾರೆ ಅವರ ದೂರದೃಷ್ಟಿಯಿಂದ ಕ್ಷೇತ್ರದ ಎಲ್ಲ ಶಾಲೆಗಳು ಅಭಿವೃದ್ದಿ ಕಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒಳಗೊಂಡು ಅಭಿವೃದ್ದಿ ಪಥದತ್ತ ಸಾಗಲಿವೇ ಎಂದು ಹೇಳಿದರು.
ಈ ಸಂಧರ್ಬದಲ್ಲಿ ಯಮಕನಮರಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಾಂತೇಶ ಮಗದ್ದುಮ ಆಪ್ತ ಸಹಾಯಕರಾದ ರಾಹುಲ ಧರನಟ್ಟಿ ಜಂಗ್ಲಿಸಾಬ ನಾಯಿಕ, ಕಿರಣಸಿಂಗ್ ರಜಪೂತ, ದಯಾನಂದ ಪಾಟೀಲ, ಸದರಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ಗುತ್ತಿಗೇದಾರರಾದ ರವೀಂದ್ರ ಜಿಂಡ್ರಾಳಿ, ವೀರಣ್ಣಾ ಬಿಸಿರೋಟ್ಟಿ, ಹಳೆಗುಡಗನಹಟ್ಟಿ ಗ್ರಾಮದ ಮುಖಂಡರಾದ ರಾಯಗೌಡ ಪಾಟೀಲ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.