ಜೂನ . 3ರಿಂದ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಆಚರಣೆ

ಗದಗ 25:  ಜಿಲ್ಲೆಯಲ್ಲಿ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಬರುವ ಜೂನ್ 3 ರಿಂದ ಜೂನ್ 17 ರವರೆಗೆ ಆಚರಿಸಲಾಗುವುದು.  ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ತಿಳಿಸಿದರು.   

ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅತಿಸಾರ  ಬೇಧಿ ನಿಯಂತ್ರಣ  ಪಾಕ್ಷಿಕ-2019 ಆಚರಣೆ ಕುರಿತು  ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಎಸ್.ಎಮ್. ಹೊನಕೇರಿ ಅವರು ಮಾತನಾಡಿ  ಜಿಲ್ಲೆಯಲ್ಲಿ ಜೂನ್ 3 ರಿಂದ ಜೂನ್ 17 ರವರೆಗೆ ಒಟ್ಟು 0-5 ವರ್ಷದೊಳಗಿನ 1,32,000 ಮಕ್ಕಳಿಗೆ ಓ ಆರ್ ಎಸ್  ವಿತರಿಸುವ ಗುರಿ ಹೊಂದಲಾಗಿದೆ.  ಈ ನಿಟ್ಟಿನಲ್ಲಿ ಜಿಲ್ಲೆಯ ಆಶಾ ಕಾರ್ಯಕತರ್ೆಯರು ಮತ್ತು ಅಂಗನವಾಡಿ ಕಾರ್ಯಕತರ್ೆಯರ ಮೂಲಕ ಮನೆ ಮನೆಗೆ ಹೋಗಿ ಓ ಆರ್ ಎಸ್ ಮತ್ತು ಜಿಂಕ್ ಮಾತ್ರೆಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.    ಒಂದು ವೇಳೆ   ಅತಿಸಾರ ಬೇದಿ ನಿಯಂತ್ರಣಕ್ಕೆ ಬಾರದೇ ಹೋದರೆ ಅಂತಹ ಮಕ್ಕಳಿಗೆ  ಆಸ್ಪತ್ರೆಗಳಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುವುದು.       ಮಕ್ಕಳಿಗೆ  ಸ್ವಚ್ಚತೆಯ ಕುರಿತು   ಅರಿವು ಮೂಡಿಸುವ  ಸಲುವಾಗಿ ಶಾಲೆಯಲ್ಲಿ   ಊಟದ ಮೊದಲು ಹಾಗೂ ಊಟದ ನಂತರ  ಕೈತೊಳೆದುಕೊಳ್ಳುವ ಕುರಿತು ಹಾಗೂ ಸ್ವಚ್ಛತೆಯ ಕುರಿತು   ತಿಳಿಸಿ ಹೇಳಲಾಗುವುದು ಎಂದು ಜಿಲ್ಲಾ  ಆರ್.ಸಿ.ಎಚ್. ಅಧಿಕಾರಿ ಡಾ.ಎಸ.ಎಮ್. ಹೊನಕೇರಿ ತಿಳಿಸಿದರು.   

         ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ. ವಿರುಪಾಕ್ಷರೆಡ್ಡಿ ಎಸ್. ಮಾದಿನೂರ  ಸರ್ವರನ್ನು ಸ್ವಾಗತಿಸಿದರು.  ಸಭೆಯಲ್ಲಿ  ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಿ.ಎಸ್. ಪಲ್ಲೇದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿದರ್ೇಶಕ ರಾಮಕೃಷ್ಣ ಪಡಗಣ್ಣವರ,   ಜಿಲ್ಲಾ  ಸಮೀಕ್ಷಣಾಧಿಕಾರಿ ಡಾ. ಸತೀಶ ಬಸರಿಗಿಡದ,  ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ವೈ.ಕೆ. ಭಜಂತ್ರಿ,  ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕರಿ ಡಾ. ಅರುಂಧತಿ ಕೆ. ತಾಲೂಕಾ ಆರೋಗ್ಯಾಕಾರಿಗಳು, ಆರೋಗ್ಯ ಇಲಾಖೆಯ  ಅಧಿಕಾರಿಗಳು,   ಸಿಬ್ಬಂದಿಗಳು ಉಪಸ್ಥಿತರಿದ್ದರು.