ಜ.1ರಿಂದ ಪುರಿ ಜಗನ್ನಾಥನ ದೇಗುಲದಲ್ಲಿ ನೂತನ ದರ್ಶನ ವ್ಯವಸ್ಥೆ ಜಾರಿಗೆ

A new darshan system has been implemented in the temple of Puri Jagannath since the new year

ಭುವನೇಶ್ವರ 28: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ಪುರಿ ಜಗನ್ನಾಥನ ದೇಗುಲದಲ್ಲಿ ಜನವರಿ 1 ರಿಂದ ಹೊಸ ದರ್ಶನ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಒಡಿಶಾ ಸರ್ಕಾರ ತಿಳಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, 'ಈ ಹೊಸ ವ್ಯವಸ್ಥೆಯು ಜನವರಿ 1ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 30ರಿಂದ 31ರವರೆಗೂ ಎರಡು ದಿನಗಳ ಕಾಲ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ವ್ಯವಸ್ಥೆಯು ಉತ್ತಮ ಸೌಲಭ್ಯಗಳಿಂದ ಕೂಡಿದೆ. ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಪ್ರತ್ಯೇಕ ಬಾಗಿಲುಗಳ ಮಾರ್ಗವಾಗಿ ಭಕ್ತರು ಹೊರಗೆ ಬರಲಿದ್ದಾರೆ ಎಂದು ಹರಿಚಂದನ್ ತಿಳಿಸಿದ್ದಾರೆ.

ಹೊಸ ವ್ಯವಸ್ಥೆಗಳ ಪ್ರಕಾರ, ಭಕ್ತರು ಈಗಿರುವ ದ್ವಾರ (ಸತಪಹಚ) ಮೂಲಕ ಜಗನ್ನಾಥ ದೇವಾಲಯವನ್ನು ಪ್ರವೇಶಿಸುತ್ತಾರೆ ಮತ್ತು ನಿರ್ಗಮನವನ್ನು ಎರಡು ವಿಭಿನ್ನ ದ್ವಾರಗಳ (ಘಂಟಿ ಮತ್ತು ಗರಡ) ಮೂಲಕ ಮಾಡಲಾಗುವುದು.