ದೇವರಹಿಪ್ಪರಗಿ 28: ನೂತನ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಶನಿವಾರದಂದು ಕಚೇರಿ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕಸಾಪ ತಾಲೂಕು ಘಟಕದ ಅಧ್ಯಕ್ಷರಾದ ಜಿ.ಪಿ. ಬಿರಾದಾರ ಅವರು ಮಾತನಾಡಿ, ಜ.03ರಂದು ನಡೆಯಲಿರುವ ಸಮ್ಮೇಳನಕ್ಕೆ ಎಲ್ಲರ ಸಹಾಯ ಸಹಕಾರ ನೀಡಬೇಕು. ಕನ್ನಡತನ ಪ್ರತಿಯೊಬ್ಬರ ಕಣಕಣದಲ್ಲೂ ಇರುವ ಮೂಲಕ ನಾಡು, ನುಡಿ, ಭಾಷೆ, ಸಂಸ್ಕೃತಿಗಳ ಬಗ್ಗೆ ಸಮ್ಮೇಳನ ಸಹಕಾರಿಯಾಗಲಿದೆ. ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ. ಪಂ ಸದಸ್ಯ ಬಸೀರ ಅಹ್ಮದ ಕಸಬ್, ಶಿಕ್ಷಕರ ಸಂಘದ ಅಧ್ಯಕ್ಷ ಎ. ಎಚ್. ವಾಲೀಕಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಕೆ. ಕುದರಿ, ಪಿ.ಎಸ್. ಮಿಂಚನಾಳ, ಕಾಶೀನಾಥ ತಳಕೇರಿ, ಪಿ. ಸಿ. ತಳಕೇರಿ, ಪ್ರಕಾಶ ಮಲ್ಹಾರಿ, ಸಿದ್ದು ಮೇಲಿನಮನಿ, ಅರುಣ್ ಕೋರವಾರ, ರಾಘವೇಂದ್ರ ಗುಡಿಮನಿ, ಮುನ್ನಾ ಮಳಖೇಡ, ಕಾಸು ಕೋರಿ, ಸೋಮಶೇಖರ ಹಿರೇಮಠ, ಇಕ್ಬಾಲ್ ಬಿಜಾಪುರ, ಮುರ್ತುಜಾ ತಾಂಬೋಳಿ, ರಮೇಶ ಮಶಾನವರ, ಭೀಮನಗೌಡ ನಾಗರಾಳ, ಸಿದ್ದಪ್ಪ ನಾಗರಳ್ಳಿ, ಅಪ್ಪುಗೌಡ ಪಾಟೀಲ, ಎಸ್. ಜಿ. ತಾವರಖೇಡ, ಸದಾಶಿವ ಗುಡಿಮನಿ, ನಾಗಯ್ಯ ಹಿರೇಮಠ, ದಸ್ತಗೀರ ಬಗಲಿ, ಎಸ್. ಆರ್. ನಂದ್ಯಾಳ, ಅಣ್ಣು ಭಜಂತ್ರಿ, ಶ್ರೀಕಾಂತ ಭಜಂತ್ರಿ, ಬಾಬು ನಾಟೀಕಾರ, ರವೀಂದ್ರ ಕೊಟೀನ, ಸದಾಶಿವ ನಾಟೀಕಾರ, ವಿದ್ಯಾನಂದ ಬಸರಗಿ, ಮಹಾಂತೇಶ ಮಮದಾಪೂರ, ಸುನೀಲ ತಳವಾರ, ಮಲಕು ಸುರಗಿಹಳ್ಳಿ, ಚನ್ನು ಹದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.