ಹೂವಿನಹಡಗಲಿ: ಪತ್ರಿಕಾ ಭವನಕ್ಕೆ ಅನುದಾನದ ಭರವಸೆ ನೀಡಿದ ಸಚಿವ ಪರಮೇಶ್ವರನಾಯ್ಕ

ಲೋಕದರ್ಶನ ವರದಿ

ಹೂವಿನಹಡಗಲಿ 06: ಪಟ್ಟಣದಲ್ಲಿ  ಪತ್ರಿಕಾ ಭವನ ನಿರ್ಮಿಸಲು  ಅನುದಾನ, ನಿವೇಶನ, ಪತ್ರಕರ್ತರ ಕಾಲೋನಿಗೆ ಮೂಲ ಭೂತ ಸೌಲಭ್ಯ ಕಲ್ಪಿಸವುದಾಗಿ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಭರವಸೆ ನೀಡಿದರು.

ಇಲ್ಲಿನ ತಾ.ಪಂ.ರಾಜೀವಗಾಂಧಿ ಸಭಾಂಗಣದಲ್ಲಿ ಶನಿವಾರ ಕನರ್ಾಟಕ ಪ್ರೆಸ್ ಕ್ಲಬ್ನಿಂದ ಹಮ್ಮಿಕೊಂಡಿದ್ದ ಪತ್ರಕರ್ತರ ಕಾಲೋನಿಯಲ್ಲಿ ಸಸಿ ನೆಟ್ಟು ಪತ್ರಿಕಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು ಪತ್ರಕರ್ತರ ಕಾಲೋನಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮಾಧ್ಯಮಗಳು ವಾಸ್ತವಿಕತೆಯನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬೇಕೆ ವಿನಾಃ ಪೂರ್ವಗ್ರಹ ಪೀಡಿತವಾಗಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಬಾರದು. ಸಮಾಜದ ಎಲ್ಲಾ ರಂಗಗಳಿಗೂ ಇರುವಂತೆ ಪತ್ರಿಕಾರಂಗಕ್ಕೂ ತನ್ನದೇ ಆದ ಜವಬ್ದಾರಿ ಇದೆ. ಇದನ್ನು ಪತ್ರಕರ್ತರು ಮರೆಯಬಾರದು ಎಂದರು. ಕೆಲ ದೃಶ್ಯ ಮಾಧ್ಯಮಗಳು ವರದಿ ಕೊಡುವ ಪೈಪೋಟಿಯಲ್ಲಿ ಅತ್ಯಂತ ಜವಬ್ದಾರಿ ಸ್ಥಾನದಲ್ಲಿರುವ ವರದಿಗಾರರು ಸತ್ಯಾಸತ್ಯತೆ ಅರಿತು ವರದಿ ಬಿತ್ತರಿಸಬೇಕು ಎಂದ ಅವರು ಎಂಜಿನಿಯರಿಂಗ ಕಾಲೇಜು ಸ್ಥಳಾಂತರ ವೇಳೆ ಪತ್ರಕರ್ತರ ಹೋರಾಟವನ್ನು ಸ್ಮರಿಸಿದರು.

ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಮಲ್ಲಿಕಾಜರ್ುನ ಸಿದ್ದಣ್ಣನವರ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಅನಕ್ಷರಸ್ಥರು, ಬಾಲ್ಯವಿವಾಹ, ದೇವದಾಸಿ ಪದ್ದತಿ ಮೂಡನಂಬಿಕೆ ಇನ್ನು ಜೀವಂತವಾಗಿವೆ ವಿಷಾಧ ವ್ಯಕ್ತಪಡಿಸಿದ ಅವರು ಗ್ರಾ.ಪಂ.ಗಳಲ್ಲಿ ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪದೇ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲಾಗಿವೆ ಪತ್ರಕರ್ತರು ಜಾಗೃತರಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಮೇಟಿ ಕೊಟ್ರಪ್ಪ ನನ್ನೆದೆಯ ಹಾಡು ಕವನ ಸಂಕಲನ ಪುಸ್ತಕವನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ ಬಿಡುಗಡೆ ಮಾಡಿದರು.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಅಯ್ಯನಗೌಡ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಶೀಲ್ದಾರ ಕೆ.ರಾಘವೇಂದ್ರರಾವ್, ಸಾಹಿತಿ ಮೇಟಿ ಕೊಟ್ರಪ್ಪ,ತಾ.ಪಂ.ಅಧ್ಯಕ್ಷೆ ಕೆ.ಶಾರದಮ್ಮ ಉಪಸ್ಥಿತರಿದ್ದರು. 

ಸಾರ್ಥಕ ಸೇವೆ ಸಲ್ಲಿಸಿದ ತಾ.ಪಂ ಕಾರ್ಯ ನಿವರ್ಾಹಣಾಧಿಕಾರಿ ಯು.ಎಚ್.ಸೋಮಶೇಖರ, ಕೊಲ್ಲೂರು ಮೂಕಾಂಬಿಕೆ ದೇಗುಲ ಕಾರ್ಯ ನಿವರ್ಾಹಕಾಧಿಕಾರಿ ನಂದಿಬೇವೂರು ಹಾಲಪ್ಪ, ಕೆ.ಆರ್.ಐ.ಡಿ.ಎಲ್.ನಿವೃತ್ತ ಸಹಾಯಕ ನಿದರ್ೇಶಕ ಶಿವಕುಮಾರ, ಇಟ್ಟಿಗಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಶಿಕಲಾ ಕೊಪ್ಪದ ಮತ್ತು ನಾಗತಿಬಸಾಪುರದ ಕೃಷಿಕ ಅಳವುಂಡಿ ಭರಮಪ್ಪ ಅವರನ್ನು ಸನ್ಮಾನಿಸಲಾಯಿತು.

ಕಲಾವಿದ ಕೆ.ಸಿ.ಪರಶುರಾಮ ಅಂಗೂರು ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿವಕುಮಾರ ಪತ್ರಿಮಠ ಸ್ವಾಗತಿಸಿದರು. ವಿಶ್ವನಾಥ ಹಳ್ಳಿಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಎಂ.ಗುರುಬಸವರಾಜ ನಿರೂಪಿಸಿದರು. ಎಚ್.ಚಂದ್ರಪ್ಪ ವಂದಿಸಿದರು.