ಹೊಸಪೇಟೆ: ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

ಲೋಕದರ್ಶನ ವರದಿ

ಹೊಸಪೇಟೆ 08: ಸರ್ವಿಸ್ ರಸ್ತೆ ನಿರ್ಮಾಣ ಮಾಡದ ಕಾರಣಕ್ಕೆ ಟಾಟ ಮತ್ತು ಎಲ್ಎನ್ಟಿ ಕಂಪನಿಯವರ ವಾಹನಗಳನ್ನು ತಡೆದು ಇಂದು ಪ್ರತಿಭಟನೆ ಮಾಡಲಾಗುತ್ತದೆ ಎಂದು ದೇವಲಾಪುರ ಗ್ರಾಮದ ಮುಖಂಡರು ಮನವಿ ಪಿಎಸ್ಐಗೆ ಸಲ್ಲಿಸಿದರು.

ಬುಧವಾರ ಮರಿಯಮ್ಮನಹಳ್ಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸದಸ್ಯ ಡಾಭ ವೇಂಕಟೇಶ ಮಾತನಾಡಿ, ಮರಿಯಮ್ಮನಹಳ್ಳಿ ಕ್ರಾಸ್ನಿಂದ ದೇವಲಾಪುರ ಗ್ರಾಮಕ್ಕೆ ಸೇವಾ ರಸ್ತೆ ನಿರ್ಮಾಣ ಮಾಡುವುದಕ್ಕೆ ಕಳೆದ ಕೆಲವಾರು ತಿಂಗಳಿನಿಂದ ಹಲವು ಬಾರಿ ರಸ್ತೆ ನಿರ್ಮಾಣ ಮಾಡಿ ಎಂದು ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ, ಎಲ್ಎನ್ಟಿ ಕಂಪನಿಯವರ ರಾಷ್ಟ್ರೀಯ ಹೆದ್ದಾರಿ-50 ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಕೆಳೆದ ಕೆಲ ತಿಂಗಳ ಹಿಂದೆ 4 ವರ್ಷದ ಹೆಣ್ಣು ಮಗು ಅಪಘಾತದಿಂದ ಸಾವನ್ನಿಪ್ಪಿತು, ಡಣನಾಯಕನಕೆರೆ ಕ್ರಾಸ್ ಬಳಿ ಬಹಿರ್ದೇಸೆಗೆ ಹೋಗಿ ಬರುವ ಆಶಕಾರ್ಯಕರ್ತೆಯರು ರಸ್ತೆ ದಾಟುವಾಗ ಮಧ್ಯೆದಲ್ಲಿ ಟಾಟಾ ಇಟಾಜಿ ಮತ್ತು ಹೈವಾ ಟಿಪ್ಪರ್ ಲಾರಿ ನಿಂತಿದ್ದರಿಂದ ಕಾಣದೆ ಕೂಡ್ಲಿಗಿಯಿಂದ ಹೊಸಪೇಟೆಗೆ ಹೋಗುವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಅವರ ಸಾವಿಗೆ ಈ ಕಂಪನಿಯವರ ಬೇಜಾವಬ್ದಾರಿಯೇ ಕಾರಣ ಎಂದು ಆರೋಪಿಸಿದರು.

ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು ರಸ್ತೆ ಅಪಘಾತಗಳಿಗೆ ಇದು ಸಹ ಒಂದು ಕಾರಣವಾಗಿದೆ, ಡಣಾಪುರ, ದೇವಲಾಪುರ ಹಾಗೂ ಡಣನಾಯಕನಕೆರೆ ಗ್ರಾಮಗಳಿಗೆ ಸೇವಾ ರಸ್ತೆ ಕಲ್ಪಿಸಿಲ್ಲ, ಸೇವಾ ರಸ್ತೆಯನ್ನು ಕಲ್ಪಿಸದಿದ್ದಕ್ಕೆ ಏಕ ಮುಖ ರಸ್ತೆಯಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ಕೃಷಿಕರು, ದ್ವಿಚಕ್ರ ಸವಾರರು ದಾಟುವುದ ಅಪಾಯಕಾರಿಯಾಗಿದೆ.  

ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಉಪ್ಪಾರ ಶ್ಯಾವಪ್ಪ, ಯು.ಕೊಟ್ರೇಶ್, ಯು ರಾಘವೇಂದ್ರ, ಯು ಭರಮಪ್ಪ, ಗ್ರಾ.ಪಂ ಸದಸ್ಯ ಸಿ.ಯು ಮಂಜುನಾಥ, ಸಿ.ಯು ಶಿವರಾಮ, ಹೆಚ್.ಪರಶುರಾಮ, ಹೆಚ್.ಹುಲ್ಲೇಶ್, ಯು.ಮಂಜುನಾಥ, ಹೆಚ್.ಹುಲುಗಪ್ಪ, ಕೊಗಳಿ ಸಿದ್ದಪ್ಪ, ಯು.ರಾಮಪ್ಪ, ಯು.ಕೆಂಚಪ್ಪ, ಅಗಸರ ಬಸಪ್ಪ, ಮಡಿವಾಳರ ನಾಗರಾಜ ಇನ್ನಿತರರಿದ್ದರು.