ಹೊಸಪೇಟೆ: ಜ.10ರ ಹಂಪಿ ಉತ್ಸವ ನೂತನ ವಿಜಯನಗರ ಜಿಲ್ಲಾ ಘೋಷಣೆ ಸಾಧ್ಯತೆ

ಲೋಕದರ್ಶನ ವರದಿ

ಹೊಸಪೇಟೆ 27: ಜನವರಿ 10 ರಂದು ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ದಿನವಗಿದ್ದು ಅಂದೇ ನೂತನ ವಿಜಯನಗರ ಜಿಲ್ಲಾ ಘೋಷಣೆ ಆಗುವ ವಿಶ್ವಾಸವಿದೆ ಎಂದು ಶಾಸಕ ಆನಂದ್ ಸಿಂಗ್ ತಿಳಿಸಿದರು. 

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಮಹೋತ್ಸವದ 500 ನೇ ವರ್ಷವೂ ಜನವರಿ 10 ರಂದೇ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ನೂತನ ಜಿಲ್ಲಾ ರಚನೆ ಬಗ್ಗೆ ಈಗಾಗಲೇ ಚರ್ಚೆ  ನಡೆಸಿರುವೆ. 2020ರ ಜನವರಿ 10 ಹಾಗೂ 11 ರಂದು ಹಂಪಿಯಲ್ಲಿ ನಡೆಯಲಿರುವ ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಅವರು ಅಂದೇ ಜಿಲ್ಲೆ ಘೋಷಣೆ ಮಾಡುವುದರಿಂದ ಐತಿಹಾಸಿಕವಾಗಲಿದೆ. ಈ ಹಿನ್ನೆಲೆಯಲ್ಲಿ ಉತ್ಸವ ಸಂದರ್ಭದಲ್ಲಿಯೇ ಘೋಷಿಸುವ ಸಾಧ್ಯತೆ ಇದೆ. ಸಚಿವ ಸ್ಥಾನವೂ ಗ್ರಹಣ ನಂತರ ಇಲ್ಲವೇ ಸಂಕ್ರಾತಿ ಅಸುಪಾಸಿನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿಯೂ ಹೊರಗಿನವರಾಗಿದ್ದರಿಂದ ಹಾಗೂ ಪೌರತ್ವದ ವಿಚಾರ ಎಲ್ಲೆಡೆ ಚಚರ್ೆ ಇಲ್ಲಿರುವ ಹಿನ್ನೆಲೆಯಲ್ಲಿ ಹಂಪಿ ಉತ್ಸವದ ಬಗ್ಗೆ ಸ್ವಲ್ಪಮಟ್ಟಿಗೆ ಆಸಕ್ತಿ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಹಂಪಿ ಉತ್ಸವವನ್ನು ನಿರ್ದಿಷ್ಟ ದಿನದಂದೇ ನಡೆಸುವ ಬಗ್ಗೆಯೂ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದರು. 

ಮಾಜಿ ಅಧ್ಯಕ್ಷ ಅನಂತ ಪದ್ಮನಾಭ ಮಾತನಾಡಿ, ಮಂಡಲದ ಪದಾಧಿಕಾರಿಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆದಿದ್ದು ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನಾಗಿ ಬಸವರಾಜ್ ನಲತ್ವಾಡ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. 

ನೂತನ ಅಧ್ಯಕ್ಷ ಬಸವರಾಜ್ ನಲತ್ವಾಡ್ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲಾಗುವುದು. ಮುಂಬರುವ ನಗರಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಮುಖಂಡರಾದ ಅಶೋಕ್ ಜೀರೆ, ವಿಜಯನಗರ ಕಾಲೇಜು ಅಧ್ಯಕ್ಷ ಸಾಲಿ ಸಿದ್ಧಯ್ಯಸ್ವಾಮಿ, ರಾಘವೇಂದ್ರ, ಶಶಿಧರ್ ಸ್ವಾಮಿ ಇತರರಿದ್ದರು.