ವಿಜಯಪುರ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಜಿ.ಪಂ. ಸಿಇಓ ರಿಷಿ ಆನಂದ

Z.P. visited various schools of Vijayapur city CEO Rishi Anand

ವಿಜಯಪುರ, ಫೆ.15: ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಫೆ.15ರಂದು ವಿಜಯಪುರ ನಗರದ ಕೆ.ಜಿ.ಎಸ್‌.ಶಾಲೆ ನಂ.1 ಹಾಗೂ ಬಚಪನ್ ಶಿಶು ವಿಹಾರ ಶಾಲೆಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ವಿಜಯಪುರ ನಗರದ ಕೆ.ಜಿ.ಎಸ್‌.ಶಾಲೆ ನಂ.1ರ ಎಲ್‌.ಕೆ.ಜಿ ಮತ್ತು ಯು.ಕೆ.ಜಿ  ಮಕ್ಕಳ ಕಲಿಕಾ ಮಟ್ಟವನ್ನು ಪರೀಶೀಲಿಸಿದರು. ಇದಕ್ಕೆ ಪೂರಕವಾಗಿ ಮಕ್ಕಳು ಕಲಿಯುವ ರೀತಿ ಹಾಗೂ ಮಕ್ಕಳಿಗೆ  ಕಲಿಕಾ ಸಾಧನ-ಸಾಮಗ್ರಿಗಳು, ಪುಸ್ತಕ, ಮಕ್ಕಳ ಬರವಣಿಗೆ ಶೈಲಿ, ಪ್ಲೇಯಿಂಗ ವಿಥ್ ಲರಿ​‍್ನಂಗ್ ವಿಧಾನಕ್ಕೆ ಸಂಬಂಧಿಸಿದಂತೆ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಪರೀಶೀಲಿಸಿದರು. ನಗರದ ಸುಕೂನ್ ಕಾಲೊನಿಯಲ್ಲಿರುವ ಬಚಪನ್ ಶಿಶುವಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸದರಿ ಶಿಶು ವಿಹಾರದಲ್ಲಿ ಶಾಲಾ ಕೊಠಡಿಯನ್ನೇ ಕಲಿಕೋಪಕರಣವಾಗಿ ಮಾರಿ​‍್ಡಸಿದ  ವ್ಯವಸ್ಥೆ, ಗೋಡೆ ಬರಹ ಮತ್ತು ಆಕರ್ಷಣೀಯ ಚಿತ್ರಗಳು, ಮಕ್ಕಳ ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳನ್ನು ವೀಕ್ಷಿಸಿದರು.  ಶಿಶುವಿಹಾರಕ್ಕೆ ಬರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಕಲಿಕೆ ನೀಡಬೇಕು. ಪ್ರತಿ ವಾರದಲ್ಲಿ ಒಂದು ದಿನ ಪಾಲಕರ ಸಭೆ ಕರೆದು ಬೋಧನಾ ವಿಧಾನಗಳ ಕುರಿತು ಮುಕ್ತವಾಗಿ ಚರ್ಚಿಸಿ, ಮುಂಬರುವ ವಾರದಲ್ಲಿ ಬೋಧನೆಯಲ್ಲಿ ಅಳವಡಿಸಿಕೊಳ್ಳುವ ವಿನೂತನ ಪ್ರಯೋಗಗಳ ಕುರಿತು ಪಾಲಕರಿಗೆ ತಿಳಿಸಬೇಕು ಮತ್ತು  ಮಗುವಿನ ಪಾಲಕರೊಡನೆ ಚರ್ಚಿಸಿ   ಬೆಳವಣಿಗೆ ಹಾಗೂ ಕಲಿಕಾ ಮಟ್ಟದ ಕುರಿತು ಪಾಲಕರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಾವ ರೀತಿ ಬೋಧನೆ ಮಾಡಬೇಕೆಂಬುದರ ಬಗ್ಗೆ ಪಾಲಕರಿಂದ ಅಭಿಪ್ರಾಯಗಳನ್ನು ಪಡೆದುಕೊಂಡು ಅದಕ್ಕೆ ಸೂಕ್ತವಾದ ಕ್ರಮಗಳನ್ನು ಕೈಗೊಂಡು ಮಕ್ಕಳಿಗೆ ಬೋಧನೆ ಮಾಡಬೇಕು. ಶಾಲೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕೆಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.  

ಈ ಎಲ್ಲ ವ್ಯವಸ್ಥೆಗಳನ್ನು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿಗಳಲ್ಲಿಯೂ ಸಹ ಕಲ್ಪಿಸಿ ಹೈಟೆಕ್ ಸ್ಪರ್ಶ ನೀಡಬಹುದು. ಇಲ್ಲಿ ಲಭ್ಯವಿರುವ ಪಠ್ಯಕ್ರಮ  ಹಾಗೂ ಪುಸ್ತಕ ಮಾಹಿತಿ ಸಂಗ್ರಹಿಸಲು ವಿಜಯಪುರ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ವಿಜಯಕುಮಾರ ಆಜೂರ, ವಿಜಯಪುರ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜ ತಳವಾರ, ಕೆ.ಜಿ.ಎಸ್‌.ಶಾಲೆ ನಂ.1 ಹಾಗೂ ಬಚಪನ್ ಶಿಶು ವಿಹಾರದ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.