ಅನಂತ್ ಅಂಬಾನಿ & ರಾಧಿಕಾ ಮರ್ಚಂಟ್ ಮದುವೆ ಬಗೆಗೆ ಟೀಕೆ: ನಮ್ಮ ಕನಸು ನನಸಾಯಿತು: ನೀತಾ ಅಂಬಾನಿ

Comment on Anant Ambani & Radhika Merchant Marriage: Our Dream Come True: Nita Ambani

ಬೆಂಗಳೂರು 14: ಉದ್ಯಮಿ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಶನ್‌ ಸ್ಥಾಪಕಿ ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿಯ ವೈಭವೋಪೇತ ಮದುವೆ ಬಗೆಗಿನ  ಟೀಕೆಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನೀತಾ ಅಂಬಾನಿ ಅವರು, ಯಾವ ತಂದೆ–ತಾಯಿಗೆ ಆಗಲಿ ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬ ಕನಸಿರುತ್ತದೆ. ದೇವರ ದಯೆಯಿಂದ ಅದು ನೆರವೇರಿತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು  ‘ಅನಂತ್ ಅವರ ಅದ್ಧೂರಿ ಮದುವೆಯ ಬಗ್ಗೆ ಟೀಕೆಗಳನ್ನು ಕೇಳಿ ನಿಮಗೆ ಬೇಸರ ಎನಿಸಿತ್ತೆ‘ ಎಂಬ  ಪ್ರಶ್ನೆಗೆ ‘ನಮ್ಮ ಕನಸು ಈಡೇರಿದ್ದಲ್ಲದೇ ಈ ಮದುವೆ ಮೇಡ್ ಇನ್ ಇಂಡಿಯಾ ಬ್ರ್ಯಾಂಡ್‌ನ ಪರಿಕಲ್ಪನೆ. ಆ ಪರಿಕಲ್ಪನೆ ಯಶಸ್ವಿಯಾಯಿತು. ಮದುವೆಯಲ್ಲಿ ಭಾರತೀಯ ಶ್ರೀಮಂತ ಪರಂಪರೆ ರಾರಾಜಿಸಿತು. ಆ ಬಗ್ಗೆ ಹೆಚ್ಚೆನೂ ಹೇಳುವುದಿಲ್ಲ‘ ಎಂದಿದ್ದಾರೆ.

ಅಸ್ತಮಾ ಇದ್ದಿದ್ದರಿಂದ ಮಗ ಅನಂತ್‌ನಿಗೆ ಬಾಲ್ಯದಲ್ಲಿಯೇ ಸ್ಥೂಲಕಾಯ ಆವರಿಸಿಕೊಂಡಿತು. ಆದರೂ ಅವನು ಚಿಂತೆ ಮಾಡಲಿಲ್ಲ. ನಾನು ಹೊರಗೆ ಹೇಗೆ ಕಾಣುತ್ತೇನೆ ಎಂಬುದು ಮುಖ್ಯವಲ್ಲ ಅಮ್ಮಾ, ನನ್ನ ಒಳಗಿನ ಹೃದಯ ಹೇಗಿದೆ ಎಂಬುದು ಮುಖ್ಯವೆಂದು ಹೇಳಿ ಹಸೆಮಣೆ ಏರಿದಾಗ ನಮಗಾದ ಆನಂದ ಅಷ್ಟಿಷ್ಟಲ್ಲ ಎಂದು ಹೇಳಿದ್ದಾರೆ.

 ಅನಂತ್ ಅಂಬಾನಿ & ರಾಧಿಕಾ ಮರ್ಚಂಟ್  ಮದುವೆಗೆ ಸುಮಾರು ₹5 ಸಾವಿರ ಕೋಟಿ ಖರ್ಚಾಗಿದೆ ಎಂದು ಹೇಳಲಾಗಿದೆ.