ಪವಾಡ ಪುರಷ ಸಂತ ಸೇವಾಲಾಲರು; ಸಮಾಜಕ್ಕೆ ಸನ್ಮಾರ್ಗ ತೋರಿದರು: ಡಾ. ಎಲ್‌.ಪಿ.ಲಮಾಣಿ

Miracle Man Saint Seva Lal; Showed the right way to the society: Dr. LP Lamani

ಧಾರವಾಡ ಫೆಬ್ರವರಿ 15: ಪವಾಡ ಪುರುಷ, ಬಂಜಾರ ಸಮಾಜದ ಆರಾಧ್ಯ ದೈವ, ಸಂತ ಸೇವಾಲಾಲ ಮಹಾರಾಜರು ಗೋರಕ್ಷಕರು ಮತ್ತು ದುಡಿಮೆಯೇ ಹಿರಿಮೆ ಎಂದು ಅರಿತುಕೊಂಡವರು. ಸಮಾಜದ ಪ್ರಗತಿಯಲ್ಲಿ ಧರ್ಮದ ಪಾತ್ರವನ್ನು ಒತ್ತಿ ಹೇಳಿ, ಸಮಾಜಕ್ಕೆ ಸಂತ ಸೇವಾಲಾಲರು ಸನ್ಮಾರ್ಗ   ತೋರಿಸಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಎಲ್‌.ಪಿ.ಲಮಾಣಿ ಅವರು ಹೇಳಿದರು. 

ಅವರು ಇಂದು (ಫೆ.15) ಮಧ್ಯಾಹ್ನ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಸಂತ ಸೇವಾಲಾಲರ ಜೀವನ ಚರಿತ್ರೆ ಮತ್ತು ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು. 

ಶಿಕ್ಷಣದ ಮಹತ್ವವನ್ನು ತಿಳಿದು ಲಂಬಾಣಿ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಮತ್ತು ಅವರಲ್ಲಿನ ಮೂಡನಂಬಿಕೆಗಳನ್ನು ದೂರ ಮಾಡಿ, ಜ್ಞಾನದ ಮಾರ್ಗ ತೋರಿದ ಕೀರ್ತಿ ಸಂತ ಸೇವಾಲಾಲರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.   

ಲಂಬಾಣಿ ಸಮುದಾಯ ಇಂದಿಗೂ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ. ಹಬ್ಬ ಹರಿದಿನಗಳಲ್ಲಿ ಪಾಲಿಸುವ ಆಚರಣೆ, ಉಡುಗೆ ತೋಡಿಗೆಗಳು ಮಹತ್ವ ಉಳಿಸಕೊಂಡಿವೆ. ಶಿಕ್ಷಣದ ಮೂಲಕ ಸಮುದಾಯ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಸಮುದಾಯದ ಅನೇಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆಲ್ಲಾ ಪ್ರೇರಣೆ ಸಂತ ಸೇವಾಲಾಲರ ಸಂದೇಶಗಳು ಕಾರಣವಾಗಿವೆ ಎಂದು ಉಪನ್ಯಾಸಕ ಡಾ. ಎಲ್‌.ಪಿ.ಲಮಾಣಿ ತಿಳಿಸಿದರು.  

ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ನವನಗರದ ಶ್ರೀ ಸೇವಾಲಾಲ ಬಂಜಾರ ಗುರುಪೀಠದ ತಿಪ್ಪೇಶ್ವರ ಮಹಾಸ್ವಾಮಿಗಳು ಹಾಗೂ ನಾಗರಾಜ ಮಹಾರಾಜ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  

ಕಾರ್ಯಕ್ರಮದಲ್ಲಿ ಕೃಷ್ಣಾಜಿ ಚವ್ಹಾಣ, ಎಲ್‌.ಆರ್‌.ನಾಯಕ, ಡಿ.ಬಿ.ನಾಯಕ, ರಾಮಾ ನಾಯಕ, ಕುಬೇರ ನಾಯಕ, ಗೋಪಾಲ ಲಮಾಣಿ, ಬಮನಪಾಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರು, ಗುರು ಹಿರಿಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 

ವೇದಿಕೆ ಕಾರ್ಯಕ್ರಮ ಪೂರ್ವದಲ್ಲಿ ಸಂತ ಸೇವಾಲಾಲರ ಭಾವಚಿತ್ರವನ್ನು