ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮೃಣಾಲ ಶುಗರ್ಸ್‌ ಎಂಡಿ ಮೃಣಾಲ ಹೆಬ್ಬಾಳಕರ್

Mrinala Hebbalkar, MD, Mrinala Sugars at the Capital Investors Conference

ಬೆಂಗಳೂರು 14:  ಬೆಂಗಳೂರಿನ ಅರಮನೆ ಮೈದಾನದಲ್ಲಿ  ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ  (ಉಟಠಚಿಟ ಋತಣಠ ಒಜಜಣ) ಮೃಣಾಲ ಶುಗರ್ಸ್‌ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರಕ್ಟರ್ ಮೃಣಾಲ ಹೆಬ್ಬಾಳಕರ್ ಶುಕ್ರವಾರ ಭಾಗವಹಿಸಿದ್ದರು.  

ಧಾರವಾಡ ಜಿಲ್ಲೆಯ ಪುಡಕಲಕಟ್ಟಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮೃಣಾಲ್ ಶುಗರ್ಸ್‌ ಕಾರ್ಖಾನೆಯನ್ನು ಪರಿಗಣಿಸಿ, ಕರ್ನಾಟಕ ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಹ್ವಾನದ ಮೇರೆಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಧಾರವಾಡ ಜಿಲ್ಲೆಯ ಪುಡಕಲಕಟ್ಟಿಯಲ್ಲಿ ಮೃಣಾಲ್ ಶುಗರ್ಸ್‌ ಸ್ಥಾಪನೆಗೊಳ್ಳುತ್ತಿದ್ದು, ಸುತ್ತಮುತ್ತಲಿನ ಸಾವಿರಾರು ಬಡ ಜನರಿಗೆ ಉದ್ಯೋಗ ಕಲ್ಪಿಸಿ ಕೊಡಲಾಗುವುದು ಎಂದು ಮೃಣಾಲ ಹೆಬ್ಬಾಳಕರ್ ಘೋಷಿಸಿದರು.  ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗ್ರೀಸ್ ದೇಶದ ಮಾಜಿ ಪ್ರಧಾನಿ ಜಾರ್ಜ್‌ ಪಪ್ಯಾಂಡ್ರಿಯೋ ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳ ಸಚಿವರ ಸಮ್ಮುಖದಲ್ಲಿ ಮೃಣಾಲ ಹೆಬ್ಬಾಳಕರ್ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. 

ಸಮಾವೇಶದಲ್ಲಿ ವಿಧಾನ ಪರಿಷತ್  ಸಭಾಪತಿ  ಬಸವರಾಜ ಹೊರಟ್ಟಿ, ರಾಜ್ಯ ಸಂಪುಟದ ಸಚಿವರುಗಳಾದ ಎಂ.ಬಿ.ಪಾಟೀಲ, ಎಚ್‌.ಕೆ.ಪಾಟೀಲ, ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ, ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಂಸದರಾದ ಶಶಿ ತರೂರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.