ವಿಶೇಷ ವರದಿ: ನಾರಾಯಣ ಮಾಯಾಚಾರಿ
ಮುದ್ದೇಬಿಹಾಳ 15: ಪಟ್ಟಣದಲ್ಲಿ ನಡೆದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಮುಖ ಮಾರ್ಗವಾಗಿ ಕೈಗೊಂಡಿದ್ದ ಸಮ್ಮೇಳನ ಸರ್ವಾಧ್ಯಕ್ಷ ಹೀರಿಯ ಸಾಹಿತಿ ಹಾಗೂ ನಾಟಕಕಾರ ಅಶೋಕ ಮಣಿ ಹಾಗೂ ನಾಡದೇವಿ ಭುವನೇಶ್ವರಿ ದೇವಿ ಭಾವಚಿತ್ರದ ಸಾಂಸ್ಕೃತಿಕ ಭವ್ಯ ಮೆರವಣಿಗೆಯೂ ಕನ್ನಡ ಗೀತೆಗಳ ಝೇಂಕಾರದ ಮಧ್ಯ ಅದ್ಧೂರಿಯಾಗಿ ಸಾಗಿ ಐತಿಹಾಸಿಕ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿಯತು.
ಬೆಳಿಗ್ಗೆ 7.30ಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ವಿಬಿಸಿ ಹೈಸ್ಕೂಲ ಮೈದಾನದಲ್ಲಿ ತಳಿರು ತೋರಣ, ವಿವಿಧ ಬಣ್ಣಗಳಿಂದ ರಂಗೋಲಿ ಬಿಡಿಸುವ ಮೂಲಕ ಅಲಂಕಾರದಿಂದ ಕಂಗೋಳಿಸುತ್ತಿದ್ದ ರಾಷ್ಟ್ರಧ್ವಜವನ್ನು ನೇರವರಿಸಿದರು. ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅವರು ಕನ್ನಡ ನಾಡಧ್ವಜಾರೋಣ, ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾಮರಾಜ ಬಿರಾದಾರ ಅವರು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಈವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ತಾಲೂಕಿನ ಹಾಗೂ ಪಟ್ಟಣದ ರಾಜಕೀಯ ಮುಖಂಡರು,ಗಣ್ಯ ವ್ಯಾಪಾರಸ್ಥರು, ಹಿರಿಯ ಹಾಗೂ ಯುವ ಸಾಹಿತಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಧ್ವಜಾರೋಣದ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಿ ಗೌರವಿಸಿದರು.
ಮೆರವಣಿಗೆಯಲ್ಲಿ ಸಾಹಿತಿಗಳು, ಕನ್ನಡ ಅಭಿಮಾನಿಗಳು, ಯುವಕರು, ಮಹಿಳೆಯರು ಸೇರಿದಂತೆ ನೆರೆ ಹೊರೆಯ ವಿವಿಧ ಶಾಲೆ, ಕಾಲೇಜುಗಳ ಮಕ್ಕಳು ಮತ್ತು ಸಿಬ್ಬಂದಿಗಳು ಕನ್ನಡ ಭಾವುಟದೊಂದಿಗೆ ಕುಂಭ, ಕಳಸದೊಂದಿಗೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ತಾಲೂಕಿನ ಯರಝರಿಯ ಪರಮಾನಂದ ಇಮಾಮ, ಕಾಶಿಮ ಕಲಾತಂಡದಿಂದ ಕರಡಿ ಮಜಲು, ಜಾನಪದ ಹೆಜ್ಜೆಯ ಕೋಲಾಟ, ಲಂಬಾಣಿ ಮಹಿಳೆಯರ ಲಂಬಾಣಿ ನೃತ್ಯ, ಗೊಂಬೆಗಳ ಸ್ಥಬ್ಧ ಚಿತ್ರದ ಕುಣಿತ, ಕುದುರೆ ಕುಣಿತ, ಸೇರಿದಂತೆ ಜಾನಪದ ಕಲಾತಂಡಗಳು ಬಾಗವಹಿಸಿದ್ದವು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದಗಳಿಗೆ ಗಡಿನಾಡಿ ಕನ್ನಡಿಗರಿಗೆ ಹುಮ್ಮಸು ಮತ್ತು ದೈರ್ಯ ತುಂಬಿತು. ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಹಾಗೂ ನಾಟಕಕಾರ ಅಶೋಕ ಮಣಿ ಅವರನ್ನು ಸಾರೋಟಿನ ಮೂಲಕ ಮೆರವಣಿಗೆ ನಡೆಸಲಾಯಿತು. ಸಾಹಿತ್ಯಾಸ್ತರು ಕುಣಿದು ಕುಪ್ಪಳಿಸಿದರು. ಮಕ್ಕಳ ನೃತ್ಯ, ಲೇಜಿಮ್ ಹಲಗೆ, ಡೊಳ್ಳು ಸದ್ದು ಗಮನ ಸೇಳೆಯಿತು. ಜೊತೆಗೆ ಸಮ್ಮೇಳದಲ್ಲಿ ಬಾಗವಹಿಸಿ ಎಲ್ಲರಿಗೂ ಅನ್ನಪ್ರಸಾದ ವಿತರಿಸಲಾಯಿತು,
ತಾಲೂಕಿನಲ್ಲಿನ ಘನಮಠ ಶಿವಯೋಗಳ ಮುಖ್ಯ ಮಹಾದ್ವಾರವನ್ನು ಸಮಾಜ ಸೇವಕ ಕಿರಣ ಮದರಿ ಎಸ್ ಎಸ್ ಹುಲ್ಲೂರ, , ಮಹಾದ್ವಾರ 1ಕ್ಕೆ ತಂಗಡಗಿಯ ನೀಲಮ್ಮನವರು ಮಹಾದ್ವಾರ 1 ನ್ನು ಬಿ.ಜಿ ಮಠ ಅಯ್ಯೂಬ ಮನಿಯಾರ, ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರರ ಮಹಾದ್ವಾರ 2ನ್ನು ಚಂದ್ರಶೇಖರ ಗಂಗನಗೌಡರ, ದಾಸೋಹ ಮನೆಯನ್ನು ಗಣ್ಯ ಉದ್ಯಮಿ ಶರಣು ಸಜ್ಜನ, ಮಹಾದ್ವಾರ 3ಕ್ಕೆ ವೈದ್ಯ ರತ್ನ ಡಾ, ಆರ್ ಆರ್ ಪದಕಿ, ದಾಸೋಹ ಮನೆಗೆ ನಾಲತವಾಡದ ಶರಣ ವಿರೇಶ್ವರ ಶರಣರ,ಮಹಾಮಂಟಪಕ್ಕೆ ಅಮರಗೋಳ ದಿ, ಸಾಹಿತಿ ಮಲಿಕಸಾಬ ನದಾಫ, ದಿ, ಎ ಎಸ್ ಹಿಪ್ಪರಗಿಯವರ ಪುಸ್ತಕ ಮಳಿಗೆ ಯನ್ನು ಜಿ ಓ ಸಿ ಸಿ ಬ್ಯಾಂಕ ಅಧ್ಯಕ್ಷ ಆನಂದಗೌಡ ಬಿರಾದಾರ, ಪಂಚಗ್ಯಾರಂಟಿ ಯೋಜನೆಯ ಸರಕಾರದ ಪ್ರತಿನಿಧಿ ಶಿವಶಂಕಗೌಡ ಹಿರೇಗೌಡರ, ಪ್ರಧಾನ ವೇದಿಕೆಯನ್ನು ಗಣ್ಯ ಉದ್ಯಮಿ ಹಾಗೂ ಸಮಾಜ ಸೇವಕ ಸಿ ಬಿ ಅಸ್ಕಿ ಮಹಾಂತೇಶ ಗಂಗನಗೌಡರ ಉದ್ಘಾಟಿಸಿದರು.
ಮೇರವಣಿಗೆಯಲ್ಲಿ ಬಾಗವಹಿಸಿದ ಕನ್ನಡಾಭಿಮಾನಿಗಳಿಗೆ ಸಾಹಿತಿಗಳಿಗೆ ವಿವಿಧ ಸಂಘ ಸಂಸ್ಥೆಯ ಮುಖಂಡರು ದಾರಿಯುದ್ದಕ್ಕೂ ಕುಡಿಯುವ ನೀರು, ಮಜ್ಜಿಗೆ, ಶರಬತ್ ನೀಡುವ ಮೂಲಕ ಕನ್ನಡಾಭಿಮಾನ ಮೆರೆದರು.
ಹಿರಿಯ ಸಾಹಿತಿ ಬಿ ಎಂ ಹಿರೇಮಠ, ಬಸವರಾಜ ನಾಲತವಾಡ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ ಬಿ ನಾವದಗಿ, ತಾಲೂಕಾ ಕ್ಷೇತ್ರ ಶಿಕ್ಷಾಣಾಧಿಕಾರಿ ಬಿ ಎಸ್ ಸಾವಳಗಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಗಣ್ಯರಾದ ಸತೀಶ ಓಸ್ವಾಲ, ಗಣೇಶ ಅನ್ನಗೋನಿ, ಸಂಗನಗೌಡ ಬಿರಾದಾರ(ಜಟಿಸಿ) ಎಂ ಎಚ್ ಹಾಲಣ್ಣವರ, ಯಲ್ಲಪ್ಪ ನಾಯಕಮಕ್ಕಳ, ಕಿರಣ ಪಾಟೀಲ, ಗುರು ತಾರನಾಳ, ಬಿ ಸಿ ಮೋಟಗಿ, ಬಿಪಿ ಕುಲಕರ್ಣಿ, ರಾಜು ರಾಯಗೊಂಡ, ಸಿ ಬಿ ಬಿರಾದಾರ, ಅಶೋಕ ತಡಸದ, ಎಸ್ ಆರ್ ಕುಲಕರ್ಣಿ, ಪ್ರಭುರಾಜ ಕಲಬುರ್ಗಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ಭಾರತಿ ಪಾಟೀಲ, ಶಾಹಾಜಾದಬಿ ಹುಣಸಗಿ ಸೇರಿದಂತೆ ಹಲವರು ಇದ್ದರು,