ವಿಶ್ವ ಚಾಂಪಿಯನ್ಶಿಪ್ನಿಂದ ಹೊರ ನಡೆದ ಯಮಗುಚಿ

ಬಸೆಲ್, ಆ 21           ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಕ್ರಮಾಂಕದ ಜಪಾನ್ನ ಅಕನೆ ಯಮಗುಚಿ ಅವರು 32ನೇ ಶ್ರೇಯಾಂಕದ ಯಿಯೋ ಜಿಯಾ ಮಿನ್ ಅವರ ವಿರುದ್ಧ ಸೋತು ಅಘಾತಕ್ಕೆ ಒಳಗಾಗಿದ್ದಾರೆ.  ಮಂಗಳವಾರ ಕೇವಲ 40 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಯಮಗುಚಿ ಅವರು 20ರ ಪ್ರಾಯದ ಯಿಯೋ ಅವರ ವಿರುದ್ಧ 21-14, 21-18 ಅಂತರದಲ್ಲಿ ನೇರ ಸೆಟ್ಗಳಲ್ಲಿ ಸೋತು ವಿಶ್ವ ಚಾಂಪಿಯನ್ಶಿಪ್ನಿಂದ ಹೊರ ನಡೆದರು. ಇವರು ಕಳೆದ ವರ್ಷದ ಆವೃತ್ತಿಯಲ್ಲಿ ಕಂಚಿನ ಪದಕ ಪಡೆದಿದ್ದರು.  ಭಾರತದ ಎಚ್.ಎಸ್ ಪ್ರಣಯ್ ವಿರುದ್ಧ ಸೋತ ಐದು ಬಾರಿ ವಿಶ್ವ ಚಾಂಪಿಯನ್ ಲಿನ್ ಡಾನ್ ಬಳಿಕ ಟೂರ್ನಿಯಿಂದ ಹೊರ ನಡೆಯುತ್ತಿರುವ ಎರಡನೇ ಸ್ಟಾರ್ ಆಟಗಾರ್ತಿ ಜಪಾನ್ ಆಟಗಾರ್ತಿಯಾಗಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಏಷ್ಯನ್ ಚಾಂಪಿಯನ್ಶಿಪ್ ಗೆದ್ದಿದ್ದ ಜಪಾನ್ನ ಮೊದಲ ಆಟಗಾರ್ತಿ ಎಂಬ ಸಾಧನೆಗೆ ಯಮಗುಚಿ ಭಾಜನರಾಗಿದ್ದರು.