ಬೆಂಗಳೂರು, ಏ.28,ದೇಶದಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಆದೇಶ ಪಾಲನೆ ಮಾಡಿ ಜನರು ಮನೆಯಲ್ಲಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ವಿದ್ಯುತ್ ಬಿಲ್ ಪಾವತಿಸಲು ಆಗದು, ಸರ್ಕಾರ ಕನಿಷ್ಠ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬಿಬುಲ್ಲಾ ಖಾನ್ ಆಗ್ರಹಿಸಿದ್ದಾರೆ. ಈ ಸಮುದಾಯಕ್ಕೆ ನಿರ್ದಿಷ್ಟ ಆದಾಯವಿಲ್ಲದೇ ಈ ಸಂಕಷ್ಟದ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ವಿದ್ಯುತ್ ಇಲಾಖೆ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಿ ಕಡ್ಡಾಯವಾಗಿ ವಿದ್ಯುತ್ ಬಿಲ್ ಆನ್-ಲೈನ್ ಮೂಲಕ ಪಾವತಿಸಬೇಕು ಎಂದು ಸೂಚಿಸುತ್ತಿದ್ದು ಸರಿಯಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.