ಪ್ರಜಾಸೌಧ ನಿರ್ಮಾಣ ಜಾಗಕ್ಕೆ ಸತೀಶ ಜಾರಕಿಹೊಳಿ ಭೇಟಿ
ಕಾಗವಾಡ,18: ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ಪ್ರಜಾಸೌಧ ನಿರ್ಮಾಣ ಜಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಶುಕ್ರವಾರ ದಿ.17ರಂದು ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣದ ನಿಯೋಜಿತ ಸ್ಥಳ ಪರೀಶೀಲನೆ ಮಾಡಿದ ಸಚಿವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿ ಮಾತನಾಡಿದ ಅವರು ಕಾಗವಾಡ ನೂತನ ತಾಲ್ಲೂಕು ಆಗಿ ಅನೇಕ ವರ್ಷಗಳು ಕಳೆದಿದ್ದರು ತಾಲ್ಲೂಕು ಆಡಳಿತ ಕಚೇರಿಗೆ ಸ್ವಂತ ಕಚೇರಿ ಇಲ್ಲಾ ಈ ಕುರಿತು ಶಾಸಕ ರಾಜು ಕಾಗೆಯವರ ವಿಶೇಷ ಪಯತ್ನದಿಂದ ಸರಕಾರದಿಂದ 8.60 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಆದಷ್ಟು ಬೇಗ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಈ ವೇಳೆ ಶಾಸಕ ರಾಜು ಕಾಗೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಮೋಹನ ಶಾ, ಗಜಾನನ ಮಂಗಸೂಳಿ, ಡಾ.ಎನ್ ಎ ಮಗದುಮ್ಮ, ಅಧಿಕಾರಿಗಳಾದ ತಹಶಿಲ್ದಾರ ರಾಜೇಶ ಬುರ್ಲಿ, ವೀರಣ್ಣ ವಾಲಿ, ಎಂ ಆರ್ ಮುಂಜೆ, ಸಂಜುಕುಮಾರ ಸದಲಗೆ, ಜಯಾನಂದ ಹಿರೇಮಠ, ರಮೇಶ ಚೌಗಲಾ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಸೇರಿದಂತೆ ಅನೇಕರು ಇದ್ದರು.
ಫೋಟೋ ಶೀರ್ಷಿಕೆ: ಕಾಗವಾಡ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ನಿಯೋಜಿತ ಜಾಗವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರೀಶೀಲನೆ ನಡೆಸಿದರು ಶಾಸಕ ರಾಜು ಕಾಗೆ ಇದ್ದರು.