ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನ ಹೆಸರು ಅಂತಿಮ

The name of the captain of the Delhi Capitals team is final

ಹೊಸದಿಲ್ಲಿ 17: ಮಾರ್ಚ್‌ ತಿಂಗಳ ಅಂತ್ಯದಲ್ಲಿ ಐಪಿಎಲ್ ಹೊಸ ಆವೃತ್ತಿ ಆರಂಭವಾಗಲಿದೆ.  ಡೆಲ್ಲಿ ಕ್ಯಾಪಿಟಲ್ಸ್‌ ತಮ್ಮ ನಾಯಕನ ಹೆಸರನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.

ಕಳೆದ ಹಲವು ಸೀಸನ್‌ ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸಿದ್ದ ರಿಷಭ್‌ ಪಂತ್‌ ಅವರನ್ನು ಡಿಸಿ ಈ ಬಾರಿ ಕೈಬಿಟ್ಟಿತ್ತು. ಪಂತ್‌ ಅವರು ಇದೀಗ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸೇರಿದ್ದಾರೆ. ಇದೇ ವೇಳೆ ಕಳೆದ ಬಾರಿ ಲಕ್ನೋ ತಂಡ ಮುನ್ನಡೆಸಿದ್ದ ಕೆಎಲ್‌ ರಾಹುಲ್‌ ಅವರನ್ನು ಮತ್ತು ಕಳೆದ ಸೀಸನ್‌ ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸಿದ್ದ ಫಾಫ್‌ ಡು ಪ್ಲೆಸಿಸ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಈ ಬಾರಿ ಹರಾಜಿನಲ್ಲಿ ಪಡೆದಿದೆ.

ಈ ಬಾರಿ ಕೆಎಲ್‌ ರಾಹುಲ್‌ ಅವರು ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕಳೆದ ಬಾರಿ ಉಪ ನಾಯಕರಾಗಿದ್ದ ಅಕ್ಷರ್‌ ಪಟೇಲ್‌ ಗೆ ಪಟ್ಟ ಕಟ್ಟಲು ಡೆಲ್ಲಿ ಫ್ರಾಂಚೈಸಿ ಮುಂದಾಗಿದೆ ಎನ್ನುತ್ತಿದೆ ವರದಿ.

ಇದಕ್ಕೂ ಮೊದಲು, ರಿಷಭ್ ಪಂತ್ ಅವರನ್ನು ಬಿಸಿಸಿಐ ಒಂದು ಪಂದ್ಯದಿಂದ ಅಮಾನತುಗೊಳಿಸಿದ ಕಾರಣದಿಂದ ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಕ್ಷರ್ ತಂಡವನ್ನು ಮುನ್ನಡೆಸಿದ್ದರು. ಎಡಗೈ ಸ್ಪಿನ್ನರ್ ಅಕ್ಷರ್‌ ಅವರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧ ಐದು ಟಿ20 ಸರಣಿಗೆ ಭಾರತೀಯ ತಂಡದ ಉಪನಾಯಕನನ್ನಾಗಿಯೂ ಹೆಸರಿಸಲಾಗಿದೆ.