ನಗದು ರಹಿತ ಚಿಕಿತ್ಸೆ ಯೋಜನೆಗೆ ಸ್ವಾಗತ

ಶಿಗ್ಗಾವಿ 06: 2020-21ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ರಾಜ್ಯ  ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಯನ್ನು ಘೋಷಿಸಲಾಗಿದೆ. ಇದು ನಮ್ಮ 3 ವರ್ಷದ ಬೇಡಿಕೆ. ಈ ಯೋಜನೆಯಿಂದ ಸರಿ ಸುಮಾರು 22.5 ಲಕ್ಷ ಸರ್ಕಾರಿ  ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು ಘೋಷಿಸಿದ ಮುಖ್ಯಮಂತ್ರಿಯವರಿಗೆ ಹಾಗೂ ಅಧಿಕಾರಿಗಳಿಗೆ ರಾಜ್ಯ ಸಕರ್ಾರಿ ನೌಕರರ ತಾಲೂಕ ಶಾಖೆಯ ಪರವಾಗಿ ಅಭಿನಂದಿಸುತ್ತೇವೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರಾಜ್ಯ  ಸರ್ಕಾರಿ ಶಿಕ್ಷಕರಿಗೆ ಸಂತೋಷದ ವಿಷಯವೇನೆಂದರೆ ಸಮಸ್ತ ಶಿಕ್ಷಕ ಬಾಂಧವರಿಗೆ ಸೇವಾ-ಸೌಲಭ್ಯ ಇತರೆ ಮಾಹಿತಿಗಳನ್ನು ಅಂತಜಾಲ  ವ್ಯವಸ್ಥೆ ಮೂಲಕ ತಲುಪಿಸಲು ಶಿಕ್ಷಕ ಮಿತ್ರ  ಂಠಿಠಿ ಅಭಿವೃದ್ಧಿಪಡಿಸಿ ಘೋಷಿಸಲಾಗಿದೆ. ಈ ವ್ಯವಸ್ಥೆ ಜಾರಿಯಿಂದಾಗಿ ರಾಜ್ಯದ ಲಕ್ಷಾಂತರ ಶಿಕ್ಷಕರಿಗೆ ಅನುಕೂಲವಾಗಲಿದೆ ಈ ಸಿಹಿ ಸುದ್ದಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ, ಸಚಿವ ಸಂಪುಟದ ಎಲ್ಲ ಸದಸ್ಯರು ಹಾಗೂ ಅಧಿಕಾರಿ ವರ್ಗದವರಿಗೂ ರಾಜ್ಯ ಸಕರ್ಾರಿ ನೌಕರರ ಶಿಗ್ಗಾವಿ ತಾಲೂಕ ಶಾಖೆಯ ಅಧ್ಯಕ್ಷ ಅರುಣ ಹುಡೇದಗೌಡ್ರ ಅಭಿನಂದಿಸಿದ್ದಾರೆ.